ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 86 ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳ ನೇಮಕಾತಿ

Posted By:

ಬೀದರ್ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ಖಾಲಿ ಇರುವ 86 ಎರಡನೇ ದರ್ಜೆಯ ಗುಮಾಸ್ತ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿದ್ದು ಆ ಪ್ರಯುಕ್ತ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.

ಡಿಸಿಸಿ ಬ್ಯಾಂಕ್ ನೇಮಕಾತಿ

ವಿದ್ಯಾರ್ಹತೆ

1.ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲ ತೇರ್ಗಡೆಯಾಗಿರಬೇಕು. ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು. ಪ,ಜಾತಿ /ಪ.ಪಂಗಡ/ ಅಂಗವಿಕಲ/ಯೋಜನಾ ನಿರಾಶ್ರಿತರು ಕನಿಷ್ಠ ಶೇ.45 ಅಂಕಗಳನ್ನು ಪಡೆದಿರಬೇಕು.
2. ಕಂಪ್ಯೂಟರ್ ಹಾಗೂ ಸಹಕಾರ ವಿಷಯದಲ್ಲಿ ಅಧ್ಯಯನ, ಜ್ಞಾನ ಮತ್ತು ಅನುಭವ ಪಡೆದವರಿಗೆ ಆದ್ಯತೆ ನೀಡಲಾಗುವುದು.
3. ಅಭ್ಯರ್ಥಿಗಳಿಗೆ ಕನ್ನಡ, ಇಂಗ್ಲಿಷ್ ಭಾಷಾ ಪರಿಜ್ಞಾನ ಹಾಗೂ ಕಂಪ್ಯೂಟರ್ ನಿರ್ವಹಣೆ ಕುರಿತಂತೆ ತಿಳುವಳಿಕೆ ಕಡ್ಡಾಯವಾಗಿರುತ್ತದೆ.
ವೇತನ ಶ್ರೇಣಿ : ರೂ.14500 -350 -15600 -400 -17200 -450 -19000 -500 -21000 -600-24600 -700 -26700 /-

ವಯೋಮಿತಿ:

ಅರ್ಜಿಗಳನ್ನು ಭರ್ತಿಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ ವಯೋಮಿತಿ ಹೊಂದಿರಬೇಕು ಹಾಗೂ ನಿಗದಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಆಯ್ಕೆ ವಿಧಾನ

ಬ್ಯಾಂಕಿಗೆ ಬರುವ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ಪದವಿ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಕನಿಷ್ಠ ಪಕ್ಷ 1:20 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಹ್ವಾನಿಸಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85 ಕ್ಕೆ ಇಳಿಸಿ ಪ್ರಾಪ್ತವಾಗುವ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ಅದನ್ನು ಆಧರಿಸಿ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಿದ ಅಂಕಗಳು ೧೫ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ ಅರ್ಹತಾ ಪಟ್ಟಿ ತಯಾರಿಸಿ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿ ಸಿದ್ದಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಲಿಖಿತ ಪರೀಕ್ಷೆ

ಒಟ್ಟು ಎರಡು ವಿಷಯಗಳಿಗೆ ಬಾಹ್ಯ ಮೂಲಗಳಿಂದ ಲಿಖಿತ ಪರೀಕ್ಷೆ ನಡೆಸಲಾಗುವುದು.

ಮೊದಲ ವಿಷಯ: ಒಟ್ಟು ಅಂಕಗಳು ನೂರು

ಕನ್ನಡ ಭಾಷೆ : 40 ಅಂಕಗಳು
ಆಂಗ್ಲ ಭಾಷೆ : 30 ಅಂಕಗಳು
ಸಾಮಾನ್ಯ ಜ್ಞಾನ : 30 ಅಂಕಗಳು

ಎರಡನೇ ವಿಷಯ : ಒಟ್ಟು ಅಂಕಗಳು ನೂರು
1. ಸಹಕಾರ ಚಳವಳಿ ಇತಿಹಾಸ
2. ದೇಶದ ಅರ್ಥ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳ ಪಾತ್ರ
3.ಸಹಕಾರ ಸಂಘಗಳ ರಚನೆ, ಆಡಳಿತ, ಕಾರ್ಯ ನಿರ್ವಹಣೆ ಮತ್ತು ಲೆಕ್ಕಪತ್ರ ನಿರ್ವಹಣೆ.
4. ಸಹಕಾರ ಕೃಷಿ ಪತ್ತಿನ ವ್ಯವಸ್ಥೆ.
5. ಸಹಕಾರ ಸಂಘಗಳ ಕಾನೂನು

ಶುಲ್ಕ

  • ಸಾಮಾನ್ಯ, ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 1000 /-
  • ಪ.ಜಾ/ಪ.ಪಂ/ಪ್ರ-1/ಮಾ.ಸೈ/ ಅಂ.ವಿ ಅಭ್ಯರ್ಥಿಗಳಿಗೆ 500 /-
  • ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ ಕರ್ನಾಟಕದ ರಾಜ್ಯದಲ್ಲಿನ ಯಾವುದೇ ಇ-ಪಾವತಿ ಅಂಚೆ ಕಚೇರಿಗೆ ಹೋಗಿ, ನಿಗದಿತ ಅರ್ಜಿ ಶುಲ್ಕ+ಸೇವಾ ತೆರಿಗೆ (ರೂ.25 /- ) ಪಾವತಿ ಮಾಡಬೇಕು.
  • ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : 08 -03 -2017 . ಇದರ ನಂತರ ಶುಲ್ಕವನ್ನು ಸಂದಾಯ ಮಾಡಲು ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ಇಲಾಖೆಯ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಸಲ್ಲಿಸಲು ಮಾತ್ರ ಅವಕಾಶ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 -03 -2017
ಹೆಚ್ಚಿನ ಮಾಹಿತಿಗಾಗಿ www.bidardccbank.com

English summary
bidar dcc bank recruitment notification for 86 posts

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia