ಬಿಗ್‌ ಜಾಬ್‌ ಡೇಸ್ ಆನ್‌ಲೈನ್ ಉದ್ಯೋಗ ಮೇಳ

Posted By:

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಖುಷಿಯ ವಿಚಾರವಿದೆ. ಜಾಬ್‌ ಮೈಂಡ್ಸ್ ಡಾಟ್ ಕಾಂ ಸಂಸ್ಥೆಯು ಇದೇ 16 ರಿಂದ 22 ರವರೆಗೆ 'ಬಿಗ್‌ ಜಾಬ್‌ ಡೇಸ್' ಎಂಬ ಆನ್‌ಲೈನ್ ಉದ್ಯೋಗ ಮೇಳ ಆಯೋಜಿಸಿದೆ.

ಉದ್ಯೋಗಾಕಾಂಕ್ಷಿಗಳು ಅವರ ಶೈಕ್ಷಣಿಕ ಮತ್ತು ವೈಯುಕ್ತಿಕ ವಿವರಗಳನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ನೋಂದಣಿಯು ಉಚಿತವಾಗಿರುತ್ತದೆ ಎಂದು ಜಾಬ್‌ ಮೈಂಡ್ಸ್ ಡಾಟ್ ಕಾಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್‌ ಹಸೀಬ್ ತಿಳಿಸಿದ್ದಾರೆ.

ಆನ್‌ಲೈನ್ ಉದ್ಯೋಗ ಮೇಳ

ಉದ್ಯೋಗ ಮೇಳದ ವಿವರ

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮೊದಲಿಗೆ ಸಂಸ್ಥೆಯ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

16 ರಿಂದ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಅಭ್ಯರ್ಥಿಗಳ ವಿವರ ಪರಿಶೀಲಿಸಿ ಅವರ ಸಾಮರ್ಥ್ಯಕ್ಕೆ ಸೂಕ್ತವಾದ ಉದ್ಯೋಗದ ಕುರಿತು ಸಲಹೆ ನೀಡಲಾಗುತ್ತದೆ.

ದೇಶದ ಅನೇಕ ಕಂಪೆನಿಗಳು ಆನ್‌ಲೈನ್‌ ಮೂಲಕ ಉದ್ಯೋಗಿಗಳನ್ನು ಆಯ್ಕೆ ಮಾಡುತ್ತಾರೆ. ನೋಂದಣಿಮಾಡಿಕೊಂಡಿರುವ ಅಭ್ಯರ್ಥಿಗಳು ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌ ಬಳಸಿ ಅವರು ಇರುವ ಸ್ಥಳದಿಂದಲೇ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ.

'ಪ್ರವೇಶ ಪರೀಕ್ಷೆಯ ಮೌಲ್ಯಮಾಪನ ಮಾಡಿ ತಕ್ಷಣವೇ ಫಲಿತಾಂಶ ಪ್ರಕಟಿಸುತ್ತೇವೆ. ಉತ್ತೀರ್ಣರಾದ ಅಭ್ಯರ್ಥಿಗಳು ವಿವಿಧ ಸಂಸ್ಥೆಗಳ ಸಿಬ್ಬಂದಿಗಳೊಂದಿಗೆ ವೀಡಿಯೊ ಮೂಲಕ ಸಂದರ್ಶನದಲ್ಲಿ ಭಾಗವಹಿಸಬಹುದು. ಹಣ, ಸಮಯದ ವ್ಯರ್ಥವಿಲ್ಲದೆ ಅರ್ಹರು ಉದ್ಯೋಗ ಪಡೆಯಲು ಈ ಮೇಳವು ಸಹಕಾರಿಯಾಗುತ್ತದೆ' ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : ಮೊಬೈಲ್ ಸಂಖ್ಯೆ: 9986661289

ವೆಬ್‌ಸೈಟ್‌: www.zrmindzglobal.com

English summary
Jobmindz presents THE BIG JOB DAY'S is India’s first and largest videos based virtual job fair. The big job day's is a 6 day event where companies hire job seekers through virtual platform.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia