ಬೆಂಗಳೂರು ಮೆಟ್ರೋ: ಮ್ಯಾನೇಜರ್ ಹುದ್ದೆಗಳ ನೇಮಕಾತಿ

Posted By:

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜಂಟಿ ಯೋಜನೆಯಾದ ಮೆಟ್ರೋ ರೈಲು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಸಿಸ್ಟೆಂಟ್ ಮ್ಯಾನೇಜರ್ 04 ಮತ್ತು 08 ಕಾರ್ಯನಿರ್ವಾಹಕ ಸಹಾಯಕ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಬಿಎಂಆರ್ ಸಿಲ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 17-06-2017, ಸಂಜೆ 04:00 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಈ ಹುದ್ದೆಗಳು ಹಂಗಾಮಿಯಾಗಿದ್ದು, ಮೂರು ವರ್ಷಗಳ ಅವಧಿಯವರೆಗೂ ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸಬೇಕಾಗುತ್ತದೆ.

ವಿದ್ಯಾರ್ಹತೆ

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಯಲಗಳಲ್ಲಿ ಪದವಿಯಲ್ಲಿ CA / ICWA OR M. Com / MBA (Finance) ಪೂರ್ಣಗೊಳಿಸಿರಬೇಕು.
ವೇತನ: ರೂ.48000/-
ವಯೋಮಿತಿ: 40 ವರ್ಷ

ಕಾರ್ಯನಿರ್ವಾಹಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ, ಬಿಬಿಎಂ, ಬಿಸಿಎ, ಬಿಬಿಎ ತೇರ್ಗಡೆಯಾಗಿರಬೇಕು.
ವೇತನ: ರೂ.26360/-
ವಯೋಮಿತಿ: 32 ವರ್ಷ

ಬೆಂಗಳೂರು ಮೆಟ್ರೋ ನೇಮಕಾತಿ

ಅರ್ಜಿ ಸಲ್ಲಿಕೆ

  • ಅಭ್ಯರ್ಥಿಗಳು ಬಿ ಎಂ ಆರ್ ಸಿ ವೆಬ್ಶೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್-ಲೈನ್ ಮೂಲಕ ಅರ್ಜಿಯನ್ನು ತುಂಬಬೇಕು ತುಂಬಿದ ಅರ್ಜಿಯನ್ನು ಪ್ರಿಂಟ್ ತೆಗೆದುಕೊಂಡು, ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸಂದರ್ಶನಕ್ಕೆ ಕೊಂಡೊಯ್ಯುವುದು.
  • ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಿಳಿಸಲಾಗುತ್ತದೆ.

ಅರ್ಜಿಯ ಬಗ್ಗೆ ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ವಿಧಾನ

  • ಲಿಖತ ಪರೀಕ್ಷೆ ಮತ್ತು ವೈಯಕ್ತಿ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
  • ಕನ್ನಡ ಭಾಷೆ ಚೆನ್ನಾಗಿ ಬಲ್ಲವರಿಗೆ ಮತ್ತು ಮ್ಯಾನೇಜರ್ ಹುದ್ದೆಯಲ್ಲಿ ಹೆಚ್ಚು ಸೇವಾನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಗುತ್ತಿಗೆ ಅವಧಿ: ಮೂರು ವರ್ಷಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-06-2017 (ಸಂಜೆ 4:00 ಗಂಟೆ)

ಅರ್ಜಿ ಸಲ್ಲಿಸಬೇಕಾದ ವಿಳಾಸ

ಬಿಎಂಆರ್ ಸಿಎಲ್ ಮುಖ್ಯ ಕಛೇರಿ,
ಮೂರನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್,
ಕೆ.ಹೆಚ್ ರಸ್ತೆ, ಶಾಂತಿನಗರ
ಬೆಂಗಳೂರು-560 027

ಇದರ ಬಗ್ಗೆ ಇನ್ನು ಹೆಚ್ಚಿನ ವಿವರಣೆ ತಿಳಿಯಲು ವೆಬ್ಸೈಟ್ ವಿಳಾಸ www.bmrc.co.in ಗಮನಿಸಿ

English summary
Bangalore Metro Rail Corporation Limited (BMRCL) has announced a notification for the recruitment of Executive Assistant, Assistant Manager vacancies. Eligible candidates may apply online on or before 17-06-2017 at 04:00 PM

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia