ಬಿಎಸ್ಎಫ್: 1074 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ ಎಫ್) ನಲ್ಲಿ ಖಾಲಿ ಇರುವ 1074 ಕಾನ್ಸ್ ಟೇಬಲ್ (Tradesmen) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಪುರುಷ ಅಭ್ಯರ್ಥಿಗಳು ಆನ್ ಲೈನ್ ಮೂಲಕ ದಿನಾಂಕ 11-10-2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬಿಎಸ್ಎಫ್ 1074 ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೆಟ್ರಿಕ್ಯುಲೇಷನ್ ಅಥವಾ ಆಯಾ ವ್ಯಾಪಾರದಲ್ಲಿ 2 ವರ್ಷಗಳ ಅನುಭವ ಅಥವಾ ಕೈಗಾರಿಕಾ ತರಬೇತಿ ಇನ್ಸ್ ಟ್ಯೂಟ್ ಆಫ್ ಔದ್ಯೋಗಿಕ ಇನ್ಸ್ ಟ್ಯೂಟ್ ನಿಂದ 1 ವರ್ಷದ ಪ್ರಮಾಣಪತ್ರ ಅಥವಾ ಕೈಗಾರಿಕಾ ತರಬೇತಿ ಇನ್ಸ್ ಟ್ಯೂಟ್ ನಿಂದ 2 ವರ್ಷದ ಡಿಪ್ಲೊಮಾವನ್ನು ಪುರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 

ಹುದ್ದೆಗಳ ವಿವರ

ಹುದ್ದೆ: Tradesmen ಕಾನ್ಸ್ ಟೇಬಲ್ (ಬಿಎಸ್ ಎಫ್)

ಹುದ್ದೆಯ ಹೆಸರುಖಾಲಿ ಹುದ್ದೆಗಳು
ಕಾಬ್ಲರ್67
ಟೈಲರ್28
ಕಾರ್ಪೆಂಟರ್02
ಡ್ರಾಫ್ಟ್ ಮೆನ್01
ಪೇಂಟರ್05
ಕುಕ್332
ವಾಟರ್ ಕ್ಯಾರಿಯರ್177
ವಾಷರ್ ಮ್ಯಾನ್131
ಬಾರ್ಬರ್85
ಸ್ವೀಪರ್212
ವೈಟರ್27
ಮಾಲಿ01
ಖೋಜಿ06
ಒಟ್ಟು1074

ವೇತನ ಶ್ರೇಣಿ: ರೂ.5200-20200/-

ವಯೋಮಿತಿ

ಆಗಸ್ಟ್ 1ಕ್ಕೆ ಅನ್ವಯವಾಗುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18ರಿಂದ 23, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರಲಿದೆ.

ಕೆಪಿಎಸ್ಸಿ: ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದೇಹದಾಢ್ಯತೆ ಪರೀಕ್ಷೆ, ಮಡಿಕಲ್ ಪರೀಕ್ಷೆ ಹಾಗೂ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-10-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Border security posts (BSF) invites application from male indian citizens for the posts of constable (tradesmen).

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia