ಬಿಎಸ್ಎಫ್: ಕ್ರೀಡಾ ಕೋಟಾದಡಿಯಲ್ಲಿ 196 ಹುದ್ದೆಗಳ ನೇಮಕಾತಿ

Posted By:

ಭಾರತೀಯ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಕ್ರೀಡಾ ಕೋಟಾ ಅಡಿಯಲ್ಲಿ 196 ಕಾನ್ಸ್‌ಟೇಬಲ್‌ಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಏರ್ ಇಂಡಿಯಾ: 27 ವಿವಿಧ ಹುದ್ದೆಗಳ ನೇಮಕಾತಿ

ನಿಗದಿಪಡಿಸಿದ ಆಟಗಳಲ್ಲಿ ಅಂತರ್‌ವಿವಿ, ರಾಜ್ಯ, ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡಲಾಗುತ್ತಿದ್ದು, ಅರ್ಹ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಿಎಸ್ಎಫ್ ನೇಮಕಾತಿ

ಒಟ್ಟು 196 ಕಾನ್ಸ್‌ಟೇಬಲ್‌ ಹುದ್ದೆಗಳು ಖಾಲಿ ಇವೆ. ಇದರಲ್ಲಿ 36 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ವೇತನ ಶ್ರೇಣಿ: ಲೆವೆಲ್-3, ಸೂಚ್ಯಾಂಕ-1, ರೂ.21700/- ಮತ್ತು ಇತರೆ ಭತ್ಯೆಗಳು

ವಿದ್ಯಾರ್ಹತೆ

ಅಭ್ಯರ್ಥಿಗಳ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಶಿಕ್ಷಣ. ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 23 ವರ್ಷದೊಳಗಿರಬೇಕು.

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಆರ್ಚರಿ, ಅಥ್ಲೆಟಿಕ್‌, ಅಕ್ವಾಟಿಕ್ಸ್‌, ಕ್ರಾಸ್‌ ಕಂಟ್ರಿ, ಬಾಕ್ಸಿಂಗ್‌, ಬ್ಯಾಸ್ಕೆಟ್‌ ಬಾಲ್‌, ಫುಟ್ಬಾಲ್‌, ಜಿಮ್ನಾಸ್ಟಿಕ್‌, ಹಾಕಿ, ಹ್ಯಾಂಡ್‌ಬಾಲ್‌, ಜೂಡೋ, ಕಬಡ್ಡಿ, ಪೋಲೋ, ಶೂಟಿಂಗ್‌, ವಾಲಿಬಾಲ್‌, ವಾಟರ್‌ ಸ್ಪೋರ್ಟ್ಸ್, ವೈಟ್‌ಲಿಫ್ಟಿಂಗ್‌ ಮತ್ತು ವ್ರೆಸ್ಲಿಂಗ್‌ ಸೇರಿದಂತೆ ಒಟ್ಟು 19 ವಿವಿಧ ಕ್ರೀಡೆಗಳ ಕ್ರೀಡಾಳುಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ನಿಗದಿತ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರಬೇಕು.

ಅಂತರ್‌ ಕ್ರೀಡಾ ಮಂಡಳಿಗಳಿಂದ ಆಯೋಜಿಸಿದ್ದ ವಿವಿ ಅಥವಾ ಅಂತರ್‌ವಿವಿ ಮಟ್ಟದಲ್ಲಿ ಯಾವುದಾದರೂ ಕ್ರೀಡೆಯಲ್ಲಿ ಪ್ರತಿನಿಧಿಸಿರಬೇಕು.
ಆಲ್‌ ಇಂಡಿಯಾ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಬೇಕು.

ಕೇಂದ್ರಿಯ ವಿದ್ಯಾಲಯ ಸಂಘಟನೆ: 546 ಶಿಕ್ಷಕರ ನೇಮಕಾತಿ

ಅರ್ಜಿ ಸಲ್ಲಿಕೆ

ಅಂಚೆ ಮೂಲಕ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಸಬೇಕಾದ ವಿಳಾಸ

The Commandant. 25 Bn BSF. Chhawla Camp. Post Office- Najafgarh New Delhi Pin code - 110071.

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್‌ ಮೊದಲವಾರ

ಹೆಚ್ಚಿನ ಮಾಹಿತಿಗಾಗಿ www.bsf.nic.in ಗಮನಿಸಿ

English summary
Recruitment of Meritorious sports persons as CT/GD Male & Female against sports quota in BSF.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia