10ನೇ ಕ್ಲಾಸ್ ಪಾಸ್ ಆಗಿದ್ದೀರಾ... ಇಂದೇ ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ

Written By: Nishmitha B

ತಾಲೂಕು ಕಾನೂನು ಸೇವಾ ಸಮಿತಿ, ಶ್ರೀರಂಗಪಟ್ಟಣ ಕಚೇರಿಯಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಪತ್ರ ಸಂಖ್ಯೆ 03/ಎಡಿಎಂ/2007 ದಿನಾಂಕ 04.08.15 ರ ಅನ್ವಯ ತಾಲೂಕು ಕಾನೂನು ಸೇವಾ ಸಮಿತಿ, ಶ್ರೀರಂಗಪಟ್ಟಣ ಕಚೇರಿಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 14 ಕೊನೆಯ ದಿನಾಂಕ

ನಿವೃತ್ತ ಸರ್ಕಾರಿ ನೌಕರರಿಂದ ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

ಆಡಳಿತ ಸಹಾಯಕರ ಹುದ್ದೆಗಳ ಸಂಖ್ಯೆ 01
 ಅರ್ಹತೆ
  •  ಈ ಹುದ್ದೆಗೆ ನಿವೃತ್ತ ಸರ್ಕಾರಿ ನೌಕರರಿಗೆ ಮೊದಲ ಆದ್ಯತೆ ನೀಡಲಾಗಿದೆ
  • ಅಷ್ಟೇ ಅಲ್ಲ ಅರ್ಜಿ ಸಲ್ಲಿಸುವವರು ಸ್ಥಳೀಯ ಅಭ್ಯರ್ಥಿಯಾಗಿರಬೇಕು
  • ಒಂದು ವೇಳೆ ನಿವೃತ್ತ ನೌಕರರು ಅರ್ಜಿ ಹಾಕದೇ ಇದ್ದಲ್ಲಿ ಇತರರಿಗೆ ಅವಕಾಶ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
 ವಿದ್ಯಾಭ್ಯಾಸ ಆಡಳಿತ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು
 ವೇತನ ಶ್ರೇಣಿ 5000 ರೂ
 ನೇಮಕಾತಿ ಅವಧಿ ಸದರಿ ಹುದ್ದೆಯ ನೇಮಕಾತಿಯು ಒಂದು ವರ್ಷದ ಅವಧಿಗೆ ಪೂರ್ಣ ಪ್ರಮಾಣದಲ್ಲಿ ತಾತ್ಕಾಲಿಕ ನೇಮಕಾತಿಯಾಗಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರು ಕಾಲಕಾಲಕ್ಕೆ ಹೊರಡಿಸಬಹುದಾದ ನಿರ್ದೇಶನಗಳನ್ನ ಪಾಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಇನ್ನು ಅರ್ಜಿಯನ್ನ ಪೋಸ್ಟ್ ಮೂಲಕ ಸಲ್ಲಿಸಬೇಕಾಗಿದ್ದು ಅರ್ಜಿ ಸಲ್ಲಿಸಬೇಕಾದ ವಿಳಾಸ :
ಅಧ್ಯಕ್ಷರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ
(ನ್ಯಾಯಾಲಯದ ಆವರಣ). ಮಂಡ್ಯ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14.03.2018 ಸಂಜೆ 05 ಗಂಟೆ ಒಳಗಡೆ

English summary
All eligible Candidates Apply online Application for the post of Adminstrative Assistant before the last date

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia