ಕೆನರಾ ಬ್ಯಾಂಕ್‌ನ ಕೆನ್‌ಫಿನ್‌ನಲ್ಲಿ ಪ್ರೊಬೆಷನರಿ ಅಸಿಸ್ಟೆಂಟ್‌ಗಳ ನೇಮಕ

Posted By:

ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್‌ನ ಅಂಗಸಂಸ್ಥೆಯಾದ ಕೆನ್‌ಫಿನ್‌ ಹೋಮ್ಸ್‌ ಲಿಮಿಟೆಡ್‌ ಕ್ಲರಿಕಲ್‌ ಕೇಡರ್‌ನ ಪ್ರೊಬೆಷನರಿ ಅಸಿಸ್ಟೆಂಟ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದೆ.

ಬೆಂಗಳೂರು ಸೇರಿದಂತೆ ದೇಶದ ವಿವಿಧ ಶಾಖೆಗಳಲ್ಲಿನ ಒಟ್ಟು 32 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರೊಬೆಷನರಿ ಅಸಿಸ್ಟೆಂಟ್‌ಗಳ ನೇಮಕ

ಹುದ್ದೆಗಳ ವಿವರ

ಬೆಂಗಳೂರು-8, ಚೆನ್ನೈ-4, ಹೈದಾರಾಬಾದ್‌-5, ಮುಂಬೈ-4, ಜೈಪುರ-2, ಭೋಪಾಲ್‌-1, ಇಂದೋರ್‌-1, ದೆಹಲಿಯಲ್ಲಿ -5 ಹುದ್ದೆ ಸೇರಿದಂತೆ ಒಟ್ಟು 30 ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆನ್‌ಫಿನ್‌ ಬೆಂಗಳೂರಿನಲ್ಲಿ 2 ಚಾಲಕ ಕಂ ಪಿಯೊನ್‌ ಹುದ್ದೆಗಳಿವೆ. 8ನೇ ತರಗತಿ ಪಾಸ್‌ ಆಗಿರುವವರು ಅರ್ಜಿ ಸಲ್ಲಿಸಬಹುದು. ಚಾಲನೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ಈ ಹುದ್ದೆಗೆ ಕೆನ್‌ಫಿನ್‌ ವೆಬ್‌ಸೈಟ್‌ನಿಂದ ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿಕೊಂಡು ಆಗಸ್ಟ್‌ 16, 2017ರ ಮೊದಲು ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಹತೆ

ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್‌ ಬಳಕೆಯಲ್ಲಿ ಪರಿಣತಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಶಾಖೆಯ ವ್ಯಾಪ್ತಿಯ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಲು ತಿಳಿದಿರಬೇಕು. ಪ್ರೊಬೆಷನರಿ ಅವಧಿ 1 ವರ್ಷವಾಗಿರುತ್ತದೆ.

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. (ಮೇ 1, 1989ರ ನಂತರ ಮತ್ತು ಮೇ 1, 1996ರ ಮೊದಲು ಜನಿಸಿದವರು ಅರ್ಜಿ ಸಲ್ಲಿಸಬಹುದು.)

ಅರ್ಜಿ ಸಲ್ಲಿಕೆ

ಅರ್ಜಿಯನ್ನು ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ.

ಅರ್ಜಿ ಶುಲ್ಕ 100 ರೂಪಾಯಿ. ಕೆನರಾ ಬ್ಯಾಂಕ್‌ನ ಬೆಂಗಳೂರಿನ ಲಾಲ್‌ಬಾಗ್‌ ಶಾಖೆಯ ವಿಳಾಸಕ್ಕೆ ಕೆನ್‌ ಫಿನ್‌ ಹೋಮ್ಸ್‌ ಲಿಮಿಟೆಡ್‌ ಹೆಸರಿನಲ್ಲಿ (ಖಾತೆ ಸಂಖ್ಯೆ: 0684201001486) ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ 1 ಹುದ್ದೆಗೆ 5 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಸಂದರ್ಶನದಲ್ಲಿ ಪಡೆದ ಒಟ್ಟು ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-08-2017

ಹೆಚ್ಚಿನ ಮಾಹಿತಿಗೆ ಗಮನಿಸಿ  www.canfinhomes.com

English summary
Can Fin Homes Ltd, invites applications from the eligible candidates for the post of Assistants.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia