ಇತ್ತೀಚಿನ ಮಕ್ಕಳಂತೂ ಯಾರನ್ನೂ ಕೇಳಿದ್ರೂ ಇಂಜಿನಿಯರ್, ಡಾಕ್ಟರ್, ಎಂಬಿಎ ಅಂತಾನೇ ಹೇಳ್ತಾರೆ. ಹಾಗಾದ್ರೆ ಈ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿ ಆಯ್ಕೆಗಳೇ ಇಲ್ಲವಾ ಎನ್ನುವ ಪ್ರಶ್ನೆ ಮೂಡೋದು ಸಹಜ.
ಇಂಜಿನಿಯರ್‌ಗಳಂತೂ ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದಾರೆ.
ಇನ್ನೂ ಹೆತ್ತರಂತೂ ತಮ್ಮ ಮಕ್ಕಳಿಗೆ ಇಷ್ಟವಿಲ್ಲದ ಕೋರ್ಸ್‌ನ್ನೇ ಆಯ್ಕೆ ಮಾಡಲು ಒತ್ತಾಯಿಸುತ್ತಾರೆ. ನಮ್ಮ ಫ್ಯಾಮಿಲಿಯಲ್ಲಿ ಎಲ್ಲರೂ ಡಾಕ್ಟರ್‌ಗಳೇ ನೀನು ಕೂಡಾ ಅದೇ ಸಂಪ್ರದಾಯವನ್ನು ಮುಂದುವರಿಸಬೇಕೆಂದು ಒತ್ತಾಯಿಸುತ್ತಾರೆ. ಎಂಬಿಎ ಮಾಡಿದ್ರೆ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಎಂಬಿಎ ಆಗಿಲ್ಲವೆಂದಾದರೆ ನೀನು ಮದುವೆ ಹೇಗೆ ಆಗ್ತೀಯಾ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಎಂಬಿಎ ಕ್ರೇಜ್ ಶುರುವಾಗಿದೆ.
ಹಾಗಾದ್ರೆ ಬರೀ ಈ ವೃತ್ತಿಯವರಿಗಷ್ಟೇ ಉತ್ತಮ ಭವಿಷ್ಯವಿರುವುದಾ.. ಖಂಡಿತಾ ಇಲ್ಲ. ಜಗತ್ತಿನಲ್ಲಿ ನೂರಾರು ವೃತ್ತಿಪರ ಕೋರ್ಸ್‌ಗಳಿವೆ. ಆದರೆ ಜನರು ಅದರತ್ತ ಹೋಗುವುದು ಬಹಳ ಕಡಿಮೆ.

1. ಫೋಟೋಗ್ರಾಫಿ:
ಇತ್ತೀಚೆಗಂತೂ ಫೋಟೋಗ್ರಾಫಿಗೆ ಬಹಳ ಡಿಮ್ಯಾಂಡ್ ಇದೆ. ಸಾಕಷ್ಟು ಜನರು ಫೋಟೋಗ್ರಾಫಿಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಬ್ಯುಸಿನೆಸ್‌ನ್ನು ಪ್ರಾರಂಭಿಸಿದ್ದಾರೆ. ಇತರರ ಕೈ ಕೆಳಗೆ ಕೆಲಸ ಮಾಡಬೇಕೆಂಬುದಿಲ್ಲ. ಇದರಿಂದ ನಿಮ್ಮ ಹವ್ಯಾಸವನ್ನು ವೃತ್ತಿಯಾಗಿಸಿದಂತಾಗುತ್ತದೆ. ಜೊತೆಗೆ ನೀವು ಇಷ್ಟಪಟ್ಟು ಖುಷಿಯಿಂದ ಈ ಕೆಲಸವನ್ನು ಮಾಡುತ್ತೀರಾ.
ಫೋಟೋಗ್ರಾಫಿಯಲ್ಲೂ ವಿವಿಧ ವಿಧಗಳಿವೆ.
1.ಸಾಹಸಮಯ ಫೋಟೋಗ್ರಾಫಿ 2.ವನ್ಯಜೀವಿಗಳ ಫೋಟೋಗ್ರಾಫಿ 3.ಮದುವೆ ಫೋಟೋಗ್ರಾಫಿ 4.ಟ್ರಾವೆಲ್ ಫೋಟೋಗ್ರಾಫಿ 5.ಫ್ಯಾಶನ್ ಫೋಟೋಗ್ರಾಫಿ 6.ಆಹಾರದ ಫೋಟೋಗ್ರಾಫಿ

2. ಪ್ರೊಫೇಶನಲ್ ಡ್ಯಾನ್ಸರ್
ಬಹಳಷ್ಟು ಮಂದಿಗೆ ಡ್ಯಾನ್ಸಿಂಗ್ ಒಂದು ಹವ್ಯಾಸವಾಗಿರುತ್ತದೆ. ಅದನ್ನೇ ನಿಮ್ಮ ವೃತ್ತಿಯಾಗಿಸಿಕೊಳ್ಳಬೇಕಾದರೆ ಡ್ಯಾನ್ಸ್‌ಗೆ ಸಂಬಂಧಿಸಿದಂತಹ ಹಲವು ಕೋರ್ಸ್‌ಗಳಿರುತ್ತವೆ. ಅವುಗಳನ್ನು ಮಾಡಿ ನಿಮ್ಮದೇ ಆದ ಡ್ಯಾನ್ಸ್ ಅಕಾಡೆಮಿಯನ್ನು ಪ್ರಾರಂಭಿಸಬಹುದು. ನೃತ್ಯ ಸಂಯೋಜನೆಯನ್ನು ಮಾಡಿ ಮೊದಲಿಗೆ ಸಣ್ಣ ಡ್ಯಾನ್ಸ್ ಕ್ಲಾಸ್ ಪ್ರಾರಂಭಿಸಿ ನಂತರ ಅದನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬಹುದು.

3. ಬಾರ್‌ಟೆಂಡಿಂಗ್
ಬಾರ್‌ಟೆಂಡಿಂಗ್ ಅಂದರೆ ಬಾರ್‌ನಲ್ಲಿ ಕೆಲಸ ಮಾಡೋದಾ ಎಂದು ಮುಗುಮುರಿಯುವುದು ಬೇಡ. ನೀವು ಕುಡಿಯುವುದರಲ್ಲಿ ಹಾಗೂ ಆಲ್ಕೊಹಾಲ್‌ನ ಕ್ವಾಲಿಟಿಯನ್ನು ಕಂಡುಹಿಡಿಯುವಲ್ಲಿ ಎಕ್ಸ್‌ಪರ್ಟ್‌ಗಳಾಗಿದ್ದರೆ ಈ ಪ್ರೋಫೇಶನಲ್ ನಿಮಗೆ ಸೂಕ್ತವಾಗಿದೆ. ಪಾರ್ಟಿಯಲ್ಲಿ ಕಾಕ್‌ಟೇಲ್ ಮಿಕ್ಸ್ ಮಾಡಿ ಅದಕ್ಕೊಂದು ರುಚಿ ನೀಡುವಲ್ಲಿ ನೀವು ಎಕ್ಸ್‌ಪರ್ಟ್ ಆಗಿದ್ದರೆ ನೀವು ಇದಕ್ಕೆ ಸೂಕ್ತ ವ್ಯಕ್ತಿ. ಹೋಟೇಲ್ ಮ್ಯಾನೆಜ್‌ಮೆಂಟ್‌ನ ಭಾಗವಾಗಿರುವ ಬಾರ್‌ಟೆಂಡಿಂಗ್ ಸರ್ಟಿಫಿಕೇಟ್‌ನ್ನು ಸಾಕಷ್ಟು ಜನರು ಪಡೆಯುತ್ತಿದ್ದಾರೆ.

4. ಗೇಮ್ ಡಿಸೈನ್/ಆಪ್ ಡಿಸೈನ್
ಗೇಮ್‌ಗೆ ಒಂದು ನಿರ್ದೀಷ್ಟವಾದ ಫೀಚರ್ ಇರಬೇಕೆಂದು ಯಾವತ್ತಾದರೂ ನೀಮಗನಿಸಿದೆಯಾ? ಇದೀಗ ಸಾಕಷ್ಟು ವಿಶ್ವವಿದ್ಯಾನಿಲಯಗಳು ಗೇಮಿಂಗ್‌ನಲ್ಲಿ ಡಿಗ್ರಿಯನ್ನು ನೀಡುತ್ತಿವೆ. ಇದೊಂದು ಶತಕೋಟಿ ಉದ್ಯಮವಾಗಿ ಬೆಳೆಯುತ್ತಿರುವುದರಿಂದ ನಿಮ್ಮ ಸೃಜನಶೀಲತೆ, ಕಲ್ಪನೆಯನ್ನು ಬಳಸಿಕೊಳ್ಳಲು ಇರುವ ಒಂದು ಅವಕಾಶ ಇದಾಗಿದೆ.

5. ಆಹಾರ ವಿಮರ್ಶಕ
ಯಾರಿಗೆ ತಿನ್ನೋದು, ಕುಡಿಯೋದು ಅಂದ್ರೆ ಇಷ್ಟವೋ ಅವರಿಗೆ ಹೇಳಿ ಮಾಡಿಸಿರುವಂತಹ ವೃತ್ತಿ ಇದಾಗಿದೆ. ಇದರಲ್ಲಿ ಅವರಿಗೆ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವಿದೆ. ಒಳ್ಳೆಯ ಆಹಾರ, ಸೇವೆಯನ್ನು ಪಡೆಯಬಹುದಾಗಿದೆ. ವಿಭಿನ್ನ ಆಹಾರವನ್ನು ಸವಿಯಲು ಸಿಗುತ್ತದೆ. ಅದನ್ನು ಸೇವಿಸಿ ಅದು ಹೇಗೆ ಇದೆ ಎನ್ನೋದನ್ನು ವಿಮರ್ಶಿಸಬೇಕು. ಇದು ಒಂದು ರೀತಿಯ ಕೂಲೆಸ್ಟ್ ವೃತ್ತಿಯಾಗಿದೆ.

6.ಸ್ಟಾಂಡ್ ಅಪ್ ಕಾಮೆಡಿ
ಇತರರನ್ನು ನಗಿಸುವ ಸಾಮರ್ಥ್ಯ ನಿಮ್ಮಲ್ಲಿದೆಯಾ? ನಿಮ್ಮ ಮಾತುಗಳ, ಕಾಮಿಡಿಗಳ ಮೂಲಕ ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ನಗುವಿನಿಂದ ತುಂಬುತ್ತೀರಾ ಹಾಗಾದ್ರೆ ನೀವು ಸ್ಟ್ಯಾಂಡ್ ಅಪ್ ಕಾಮೆಡಿಯನ್ ಆಗಲು ಅರ್ಹರು. ನಿಮ್ಮಲ್ಲಿ ಅಂತಹದ್ದೊಂದು ಕಲೆ ಇದೆಯೆಂದಾದರೆ ಅದನ್ನೇ ವೃತ್ತಿಯಾಗಿಸಿ. ಮೊದಲಿಗೆ ಸಣ್ಣ ಥಿಯೇಟರ್ ತಂಡದಲ್ಲಿ ಸ್ಟ್ಯಾಂಡ್ ಅಪ್ ಕಾಮೆಡಿಯನ್ ಆಗಿ ಸೇರಿಕೊಳ್ಳಿ. ನಂತರ ನಿಮ್ಮ ಭವಿಷ್ಯದ ಬಾಗಿಲು ತೆರೆಯುತ್ತದೆ.