ಸಿಇಐಎಲ್ ನಲ್ಲಿ 115 ಡಿಸೈನ್ ಇಂಜಿನಿಯರ್ಸ್ ನೇಮಕಾತಿ

Posted By:

ಸರ್ಟಿಫಿಕೇಶನ್ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಸಿಇಐಎಲ್) ಗುತ್ತಿಗೆ ಆಧಾರದ ಮೇಲೆ ಡಿಸೈನ್ ಎಂಜಿನಿಯರ್ ಗಳ ನೇಮಕಾತಿಗೆ ಮುಂದಾಗಿದೆ.

ನವರತ್ನ ಕಂಪನಿಗಳಲ್ಲಿ ಒಂದಾಗಿರುವ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನ ಅಂಗಸಂಸ್ಥೆಯಾಗಿರುವ ಸಿಇಐಎಲ್ ಒಟ್ಟು 115 ಹುದ್ದೆಗಳಿಗೆ ನೇಮಕ ನಡೆಸಲಿದೆ.

ಹುದ್ದೆಗಳ ವಿವರ

ಹುದ್ದೆ: ಡಿಸೈನ್ ಎಂಜಿನಿಯರ್ ನೇಮಕ
ಒಟ್ಟು ಹುದ್ದೆಗಳು: 115

ಡಿಸೈನ್ ಇಂಜಿನಿಯರ್ಸ್ ನೇಮಕಾತಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್ ಅಥವಾ ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿರಬೇಕು. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ ಸ್ಟ್ರುಮೆಂಟೇಶನ್, ಸಿವಿಲ್ ಆ್ಯಂಡ್ ಸ್ಟ್ರಕ್ಚರಲ್, ಕೆಮಿಕಲ್, ಮೈನಿಂಗ್, ಕೋಸ್ಟಲ್ ಎಂಜಿನಿಯರಿಂಗ್ ವಿಷಯಗಳಲ್ಲಿ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯನ್ನು ಪಡೆದಿರಬೇಕು.

ಡಿಸೈನ್ ಇಂಜಿನಿಯರ್ಸ್ ನೇಮಕಾತಿ

ಅನುಭವ

ಡಿಸೈನ್ ಎಂಜಿನಿಯರ್ ಹುದ್ದೆಗೆ 2ರಿಂದ 6 ವರ್ಷ (ಪದವಿ-ಡಿಪ್ಲೊಮಾ) ಕೆಲಸ ಮಾಡಿದ ಅನುಭವ ಹೊಂದಿರಬೇಕು. ಹಾಗೆಯೇ ಸೀನಿಯರ್ ಡಿಸೈನರ್ ಹುದ್ದೆಗೆ 6ರಿಂದ 10 ವರ್ಷ ಮತ್ತು ಡೆಪ್ಯುಟಿ ಡಿಸೈನರ್ ಹುದ್ದೆಗಾದರೆ 10ರಿಂದ 14 ವರ್ಷ ಕೆಲಸ ಮಾಡಿರಬೇಕು.

ಜುಲೈ 16 ಅರ್ಜಿ ಸಲ್ಲಿಸಲು ಕೊನೆ ದಿನ
ರೆಸ್ಯೂಮ್ ಕಳುಹಿಸಲು ಇ-ಮೇಲ್ ವಿಳಾಸ hr.design@ceil.co.in

ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸಂದರ್ಶನದ ಸ್ಥಳ ಮತ್ತು ಸಮಯದ ಮಾಹಿತಿಯನ್ನು ಸಿಇಐಎಲ್ ಇ-ಮೇಲ್ ಮೂಲಕ ಅಭ್ಯರ್ಥಿಗಳಿಗೆ ಕಳುಹಿಸಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ceil.co.in

English summary
Certification Engineers International Ltd. (CEIL) invites application for recruiting 115 design engineers on contract basis.
Please Wait while comments are loading...