ಕೇಂದ್ರ ಮಾಹಿತಿ ಆಯೋಗದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

Written By: Rajatha

ಕೇಂದ್ರ ಮಾಹಿತಿ ಆಯೋಗದಲ್ಲಿ 2018ರ ಸಾಲಿನ ರಿಜಿಸ್ಟ್ರಾರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನಿಯೋಜನೆಯ ಆಧಾರದ ಮೇಲೆ ರಿಜಿಸ್ಟ್ರಾರ್ ಹುದ್ದೆಗೆ ನೇಮಕಾತಿ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವೇತನ ಶ್ರೇಣಿ, ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2018.

ಹುದ್ದೆ  ರಿಜಿಸ್ಟ್ರಾರ್
 ವೇತನಶ್ರೇಣಿ 37,400-67000+ಗ್ರೇಡ್ ಪೇ 10000
 ವಿದ್ಯಾರ್ಹತೆ ಮಾನ್ಯತೆ ಪಡೆದ ಕಾಲೇಜಿನಿಂದ ಕಾನೂನು ಪದವಿ ಪಡೆದಿರಬೇಕು. ಜೊತೆಗೆ ನ್ಯಾಯಾಲದಲ್ಲಿ ಗ್ರೂಪ್ ಎ ಹುದ್ದೆಯಲ್ಲಿ ಕನಿಷ್ಟ 15 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.
 ವಯೋಮಿತಿ ಅಭ್ಯರ್ಥಿಯು 56 ವರ್ಷ ಮೀರಿರಬಾರದು.

ರಿಜಿಸ್ಟ್ರಾರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಮಾಹಿತಿ ಆಯೋಗದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ ಈ ಕೆಳಗೆ ಕೊಟ್ಟಿರುವ ವಿಧಾನವನ್ನು ಅನುಸರಿಸಿ .

ಸ್ಟೆಪ್ 1

ಕೇಂದ್ರ ಮಾಹಿತಿ ಆಯೋಗ ಸೆಂಟ್ರಲ್ ಇನ್‌ಫಾರ್ಮೆಶನ್ ಕಮೀಷನ್ ವೆಬ್‌ಸೈಟ್‌ಗೆ ಲಾಗಿನ್ ಆಗಿ,

ಸ್ಟೆಪ್ 2

ಈಗ ಸೆಂಟ್ರಲ್ ಇನ್‌ಫಾರ್ಮೆಶನ್ ಕಮೀಷನ್‌ ನ ಅಧೀಕೃತ ಪೇಜ್ ತೆರೆಯುತ್ತೆ. ಆ ಪೇಜ್‌ನ ಕೆಳಗೆ ಸ್ಕ್ರಾಲ್ ಮಾಡಿ. ರಿರ್ಕೂಟ್‌ಮೆಂಟ್ ಎನ್ನುವ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ

ಅದರಲ್ಲಿ ಫಿಲ್ಲಿಂಗ್ ಅಪ್‌ ದಿ ಪೋಸ್ಟ್ ಆಫ್ ರಿಜಿಸ್ಟ್ರಾರ್ ಆನ್ ಡಿಪ್ಯೂಟೇಶನ್ ಬೇಸಿಸ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ.

 

ಸ್ಟೆಪ್ 3

ನೇಮಕಾತಿಗೆ ಸಂಬಂಧಿಸಂತೆ ಎಲ್ಲಾ ಮಾಹಿತಿ ಇರುವ ಪೇಜ್ ತೆರೆಯುತ್ತದೆ.

ಸ್ಟೆಪ್ 4

ರಿರ್ಕೂಟ್‌ಮೆಂಟ್ ಅಟ್ಯಾಚ್‌ಮೆಂಟ್ ಎನ್ನುವ ಪಿಡಿಎಫ್ ಫೈಲ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.

ಸ್ಟೆಪ್ 5

ನೇಮಕಾತಿಗೆ ಸಂಬಂಧಿಸಂತೆ ಎಲ್ಲಾ ಮಾಹಿತಿ ಸಿಗುತ್ತದೆ. ಅದನ್ನು ಪೂರ್ಣವಾಗಿ ಓದಿ.

ಸ್ಟೆಪ್ 6

ಹಾಗೇ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡುತ್ತಾ ಹೋದಾಗ ಅಪ್ಲೀಕೇಶನ್ ಫಾರ್ಮ್‌ ಕಾಣಿಸುತ್ತದೆ.

ಸ್ಟೆಪ್ 7

ಅಪ್ಲೀಕೇಶನ್ ಫಾರ್ಮ್‌ನ್ನು ಭರ್ತಿ ಮಾಡಬೇಕಾದರೆ ಅದನ್ನು ಮೊದಲು ಪ್ರಿಂಟ್ ತೆಗೆಯಬೇಕು. . ಪೇಜ್‌ನ ಬಲಗಡೆ ತೋರಿಸಲಾಗಿರುವ ಪ್ರಿಂಟಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ

 

 

ಸ್ಟೆಪ್ 8

ಪ್ರಿಂಟ್ ತೆಗೆದಿರುವ ಅಪ್ಲೀಕೇಶನ್‌ನ್ನು ಭರ್ತಿ ಮಾಡಿ. ಕೇಂದ್ರ ಮಾಹಿತಿ ಆಯೋಗಕ್ಕೆ ಕಳುಹಿಸಿಕೊಡಿ
ಅಫೀಶಿಯಲ್ ಜಾಹೀರಾತನ್ನು ಓದಲು ಈ ಲಿಂಕ್‌ನ್ನು ಕ್ಲಿಕ್ ಮಾಡಿ

English summary
Central Information Commission has released an official employment notification calling out for aspirants to apply for the posts of Registrar on deputation basis.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia