ಮೈಸೂರು ಸೆಸ್ಕಾಂ ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

Posted By:

2017-18 ನೇ ಸಾಲಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ರವರ ವತಿಯಿಂದ ಶಿಶಿಕ್ಷು ಕಾಯ್ದೆ 1961ರ ಪ್ರಕಾರ ಎಲೆಕ್ಟ್ರೀಶಿಯನ್ ವೃತ್ತಿಯಲ್ಲಿ ಶಿಶಿಕ್ಷು(ಅಪ್ರೆಂಟಿಸ್) ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 399 ಶಿಶಿಕ್ಷುಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದಿನಾಂಕ: 25.10.2017 ರಂದು ಬೆಳಿಗ್ಗೆ 10.00 ಗಂಟೆಗೆ ಕೆಳಕಂಡ ಆಯ್ಕೆ ಸಮಿತಿ ಮುಂದೆ ಹಾಜರಾಗಲು ತಿಳಿಸಲಾಗಿದೆ.

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆರ್ಹಾನ

ವಿದ್ಯಾರ್ಹತೆ 

ಎಸ್.ಎಸ್.ಎಲ್.ಸಿ ನಂತರ ಎರಡು ವರ್ಷ ಅವಧಿಯ ಐಟಿಐ ತರಭೇತಿ ಹೊಂದಿ,ಕುಶಲಕರ್ಮಿ ತರಭೇತಿ ಯೋಜನೆಯಡಿ ನಡೆಸುವ ವೃತ್ತಿ ಪರೀಕ್ಷೆಯ ಎಲೆಕ್ಟ್ರೀಷಿಯನ್ ವೃತಿಯಲ್ಲಿ ತೇರ್ಗಡೆಯಾಗಿ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (ಎನ್.ಸಿ.ವಿ.ಟಿ) ರಾಜ್ಯ ವೃತ್ತಿ ಪ್ರಮಾಣ ಪತ್ರ (ಎಸ್.ಸಿ.ವಿ.ಟಿ) ಅಂಕಪಟ್ಟಿ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

ಕೆಪಿಎಸ್ಸಿ: ಪೂರ್ವಭಾವಿ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ

ಶಿಶಿಕ್ಷು (ಅಪ್ರೆಂಟಿಸ್) ತರಬೇತಿ ಅವಧಿ

ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (ಎನ್.ಸಿ.ವಿ.ಟಿ) ಹೊಂದಿರುವ ಅಭ್ಯರ್ಥಿಗಳಿಗೆ ಹಾಗೂ ರಾಜ್ಯ ವೃತ್ತಿ ಪ್ರಮಾಣ ಪತ್ರ (ಎಸ್.ಸಿ.ವಿ.ಟಿ) ಹೊಂದಿರುವ ಅಭ್ಯರ್ಥಿಗಳಿಗೂ ಒಂದು ವರ್ಷ.

ಶಿಶಿಕ್ಷು ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಭೇತಿ ಅವಧಿಯಲ್ಲಿ ಮಾಹೆಯಾನ ರೂ 7704/- ಶಿಶಿಕ್ಷು ವೇತನ ನೀಡಲಾಗುವುದು.

ವಯೋಮಿತಿ

ಅಭ್ಯರ್ಥಿಯ ವಯಸ್ಸುದಿನಾಂಕ 25.10.2017 ಕ್ಕೆ 25 ವರ್ಷ ಮೀರಿರಬಾರದು.

ಮೀಸಲಾತಿ

ಪರಿಶಿಷ್ಠ ಜಾತಿ-15%, ಪರಿಶಿಷ್ಠ ಪಂಗಡ-3% ಮತ್ತು ಮಹಿಳೆಯರು-33% ಉಳಿದಂತೆ ಹಿಂದುಳಿದ ವರ್ಗ, ಸಾಮಾನ್ಯ ವರ್ಗ ಹಾಗೂ ವಿಕಲ ಚೇತನರುಗಳಿಗೆ ಅಧ್ಯತೆ ನೀಡಲಾಗುವುದು.

ಅರ್ಜಿಸಲ್ಲಿಸುವ ವಿಧಾನ

ಈ ಜಾಹಿರಾತಿನೊಂದಿಗೆ ಲಗತ್ತಿಸಲಾದ ನಿಗಿಧಿತ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಗಳು ಅರ್ಜಿ ಮತ್ತು ಸೂಚಿತ ದಾಖಲೆಗಳೊಂದಿಗೆ ಮೇಲಿನ ಸ್ಥಳದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವುದು.

  • ಗೆಜೆಟೆಡ್ ಅಧಿಕಾರಿಯಿಂದ ದೃಡೀಕರಿಸಿದ ಎಸ್.ಎಸ್.ಎಲ್.ಸಿ., ಅಂಕಪಟ್ಟಿಯ (ಜ್ಹೆರಾಕ್ಸ್ ಪ್ರತಿ).
  • ಗೆಜೆಟೆಡ್ ಅಧಿಕಾರಿಯಿಂದ ದೃಡೀಕರಿಸಿದ ಕುಶಲಕರ್ಮಿ ಎಲೆಕ್ಟ್ರೀಷಿಯನ್ ವೃತ್ತಿ ಪರೀಕ್ಷೆಯ ಅಂಕಪಟ್ಟಿ (ಜೆರಾಕ್ಸ್ ಪ್ರತಿ)
  • ಗೆಜೆಟೆಡ್ ಅಧಿಕಾರಿಯಿಂದ ದೃಡೀಕರಿಸಿದ ಜಾತಿ ಪ್ರಮಾಣ ಪತ್ರ [ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮಾತ್ರ (ಜೆರಾಕ್ಸ್ ಪ್ರತಿ)
  • ಸರ್ಕಾರಿ ಆಸ್ಪತ್ರೆಯ ಇತ್ತೀಚಿನ ವೈದ್ಯಕೀಯ ಪ್ರಮಾಣ ಪತ್ರ (ಜೆರಾಕ್ಸ್ ಪ್ರತಿ)
  • ಗಣ್ಯವ್ಯಕ್ತಿ/ಗೆಜೆಟೆಡ್ ಅಧಿಕಾರಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ (ಜೆರಾಕ್ಸ್ ಪ್ರತಿ)
  • ಇತ್ತೀಚಿನ ಒಂದು ಭಾವ ಚಿತ್ರ (ಪಾಸ್ ಪೋರ್ಟ್ ಸೈಜಿನದು)
  • ಅಭ್ಯರ್ಥಿಗಳು ತರಬೇತಿ ಹೊಂದಿದ ಐ.ಟಿ.ಐ/ಐ.ಟಿ.ಸಿ. ಸಂಸ್ಥೆಯು ಎನ್.ಸಿ.ವಿ.ಟಿ. ಭಾರತ ಸರ್ಕಾರದ ಮಾನ್ಯತೆ ಪಡೆದ ಪತ್ರ (ಜೆರಾಕ್ಸ್ ಪ್ರತಿ) ನ್ನು ತರಬೇತಿ ಸಂಸ್ಥೆಯಿಂದ ಪಡೆದು ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
chamundeshwari electricity supply corporation ltd invites application from the ITI candidates for one year apprentice training.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia