ಕರ್ನಾಟಕ ಅರಣ್ಯ ಇಲಾಖೆ ಚಾಮರಾಜನಗರ ವೃತ್ತ 7ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಚಾಮರಾಜನಗರ ವೃತ್ತ ಕರ್ನಾಟಕ ಅರಣ್ಯ ಇಲಾಖೆಯು 7 ಅರಣ್ಯ ವೀಕ್ಷಕ ಹುದ್ದೆಗಳಿಗೆ ಆಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕ ಫೆಬ್ರವರಿ 1,2019 ರ ಸಂಜೆ 5:00 ಗಂಟೆಯೊಳಗೆ ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ದಿನಾಂಕ:1.2.2019 ರಿಂದ 18.2.2019ರ ಮಧ್ಯಾಹ್ನ 2:30ರೊಳಗೆ ಪಾವತಿಸಬೇಕು.

ಚಾಮರಾಜನಗರ ವೃತ್ತದ ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ ವಿಭಾಗದಲ್ಲಿ 3 ಪರಿಶಿಷ್ಟ ಪಂಗಡ (ಬ್ಯಾಕ್ ಲಾಗ್) ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ವಿಭಾಗದಲ್ಲಿ 4 ಪರಿಶಿಷ್ಟ ಪಂಗಡ (ಬ್ಯಾಕ್ ಲಾಗ್) ಒಟ್ಟು 7 ಬ್ಯಾಕ್ ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಗೆ ಮುಖ್ಯ ಕಾರಣ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ, ಚಾಮರಾಜನಗರ ಇವರು ಆಯ್ಕೆ ಪ್ರಾಧಿಕಾರವಾಗಿರುತ್ತಾರೆ.

ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಕರ್ನಾಟಕ ಅರಣ್ಯ ಇಲಾಖೆ
Organisation ಅರಣ್ಯ ವೀಕ್ಷಕ
Educational Qualification ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆ
Job Location ಚಾಮರಾಜನಗರ
Salary Scale ರೂ.18,600/- ರಿಂದ 32,600/- ರೂ

ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಈ ಕೆಳಕಂಡ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ಹೊಂದಿರಬೇಕು.

ಅರಣ್ಯ ವೀಕ್ಷಕ ಹುದ್ದೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ:

ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವ‍ರ್ಷ ಮತ್ತು ಗರಿಷ್ಠ ವಯೋಮಿತಿ 33 ವರ್ಷ ವಯಸ್ಸನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,600/- ರಿಂದ 32,600/- ರೂ ವೇತನವನ್ನು ನೀಡಲಾಗುತ್ತದೆ.

ಹುದ್ದೆಗಳ ಮೀಸಲಾತಿ ವರ್ಗೀಕರಣ:

ಅರಣ್ಯ ವೀಕ್ಷಕರ ಖಾಲಿ ಹುದ್ದೆಗಳ ಮೀಸಲಾತಿ ವರ್ಗೀಕರಣ:

ಅರಣ್ಯ ವಿಭಾಗ ಹುದ್ದೆಗಳ ಸಂಖ್ಯೆ
ಕಾವೇರಿ ವನ್ಯಜೀವಿ ವಿಭಾಗ,ಕೊಳ್ಳೆಗಾಲ 3
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ 4
ಒಟ್ಟು 7

ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ - 3ಪರಿಶಿಷ್ಟ ಪಂಗಡ (ಬ್ಯಾಕ್ ಲಾಗ್) ಹುದ್ದೆಗಳು

ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಬರುವ ಪೂರ್ಣ ಅಥವಾ ಭಾಗಶಃ ತಾಲೂಕು (ಕೊಳ್ಳೇಗಾಲ, ಹನೂರು,ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು) ಪ್ರದೇಶಗಳಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಅಭ್ಯಸಿಸಿರುವ ಹಾಗೂ ಈ ವಿಭಾಗ ವ್ಯಾಪ್ತಿಯ ಅರಣ್ಯಗಳಲ್ಲಿವಾಸಿಸುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಜನಾಂಗಗಳಾದ ಜೇನುಕುರುಬ, ಕಾಡುಕುರುಬ, ಹಕ್ಕಿಪಿಕ್ಕಿ, ಸೋಲಿಗ,ಸೋಲಿಗರು,ಯರವ,ಗೌಡ್ಲು, ಇರುಳರ್, ಇರುಲಿಗಾ, ಕೊರಗಾ, ಮೆಲಕುಡಿ, ಮಲೈಕುಡಿ,ಮಲೇರು, ಮೇದಾ ಮತ್ತು ತೋಡ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ 3 ಹುದ್ದೆಗಳನ್ನು ಈ ಮೇಲ್ಕಾಣಿಸಿದ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ- 4 ಪರಿಶಿಷ್ಟ ಪಂಗಡ (ಬ್ಯಾಕ್ ಲಾಗ್) ಹುದ್ದೆಗಳು:

ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ವ್ಯಾಪ್ತಿಯಲ್ಲಿ ಬರುವ ಪೂರ್ಣ ಅಥವಾ ಭಾಗಶಃ ತಾಲೂಕು (ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ಮತ್ತು ಹನೂರು) ಪ್ರದೇಶಗಳಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಅಭ್ಯಸಿಸಿರುವ ಹಾಗೂ ಈ ವಿಭಾಗ ವ್ಯಾಪ್ತಿಯ ಅರಣ್ಯಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಬುಡಕಟ್ಟು ಜನಾಂಗಗಳಾದ ಜೇನುಕುರುಬ,ಕಾಡುಕುರುಬ,ಹಕ್ಕಿಪಿಕ್ಕಿ,ಸೋಲಿಗ,ಸೋಲಿಗರು,ಯರವ,ಗೌಡ್ಲು, ಇರುಳರ್, ಇರುಲಿಗಾ,ಕೊರಗಾ,ಮೆಲಕುಡಿ,ಮಲೈಕುಡಿ,ಮಲೇರು, ಮೇದಾ ಮತ್ತು ತೋಡ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ 4 ಹುದ್ದೆಗಳನ್ನು ಈ ಮೇಲ್ಕಾಣಿಸಿದ ಪಂಗಡ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಆಯ್ಕೆ ವಿಧಾನ:

ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆಗಳು:

ಮೇಲ್ಕಂಡ ಪರೀಕ್ಷೆಗಳ ಕುರಿತು ದಿನಾಂಕವನ್ನು ಕಾಲ ಕಾಲಕ್ಕೆ ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.

ದೈಹಿಕ ತಾಳ್ವಿಕೆ ಪರೀಕ್ಷೆ:

ಪುರುಷ ಅಭ್ಯರ್ಥಿಗಳಿಗೆ 1600 ಮೀಟರ್ ಓಟ 07 ನಿಮಿಷಗಳ ಅವಧಿಯಲ್ಲಿ ಪೂರೈಸಬೇಕು.
ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 1000 ಮೀಟರ್ ಓಟ 06 ನಿಮಿಷಗಳ ಅವಧಿಯಲ್ಲಿ ಪೂರೈಸಬೇಕು.

ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತದ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಪರಿಗಣಿಸಲಾಗುವುದು.

ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ:

ಕ್ರ.ಸಂ. ಪುರುಷ ಅಭ್ಯರ್ಥಿಗಳಿಗೆಮಹಿಳಾ ಅಭ್ಯರ್ಥಿಗಳಿಗೆ
1 100 ಮೀಟರ್ ಓಟ 15 ಸೆಕೆಂಡುಗಳು 18.5 ಸೆಕೆಂಡುಗಳು
2 ಎತ್ತರ ಜಿಗಿತ 1.29ಮೀಟರ್ 0.90 ಮೀಟರ್
3 ಉದ್ದ ಜಿಗಿತ 3.80 ಮೀಟರ್ 2.50 ಮೀಟರ್
4ಶಾಟ್ ಪುಟ್
ಪುರುಷ: 16 ಎಲ್.ಬಿ.
ಮಹಿಳೆ: 8 ಎಲ್.ಬಿ.
5.60 ಮೀಟರ್ 3.76 ಮೀಟರ್
5A 800 ಮೀಟರ್ ಓಟ 2 ನಿಮಿಷ 50 ಸೆಕೆಂಡುಗಳು -
5B 200 ಮೀಟರ್ ಓಟ - 40 ಸೆಕೆಂಡುಗಳು

ಈ ಮೇಲಿನ 5 ವಿವಿಧ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳ ಪೈಕಿ ಕನಿಷ್ಠ 3 ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಿರಬೇಕು. ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆಯುತ್ತಾರೆ. ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ಯಾವುದೇ ಹಂತದಲ್ಲಿ ದೈಹಿಕ ತಾಳ್ವಿಕೆ/ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ಅನರ್ಹರಾದಲ್ಲಿ ಅಥವಾ ಪರೀಕ್ಷೆ ನಡೆಯುವ ಸಮಯದಲ್ಲಿ ಗಾಯಗೊಂಡಲ್ಲಿ ಅಥವಾ ಇನ್ನಿತರ ಯಾವುದೇ ಕಾರಣಕ್ಕಾಗಿ ಅನರ್ಹರಾದ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ನೀಡಲಾಗುವುದಿಲ್ಲ.

ಲಿಖಿತ ಪರೀಕ್ಷೆ:

ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ನೂರು (100) ಅಂಕಗಳದ್ದಾಗಿದ್ದು, ಅರವತ್ತು (60) ನಿಮಿಷಗಳ ಅವಧಿಯಲ್ಲಿ ಉತ್ತರಿಸಬೇಕಾಗಿದೆ. ಪ್ರಶ್ನೆ ಪತ್ರಿಕೆಯು ಬಹು (objective multiple choice) ಮಾದರಿಯದಾಗಿದ್ದು, ಇದು ಪ್ರಾಥಮಿಕ ಸಾಮಾನ್ಯ ಜ್ಞಾನ ಹಾಗೂ ಪ್ರಾಥಮಿಕ ಅಂಕಗಣಿತ ವಿಷಯವನ್ನು ಒಳಗೊಂಡಿರುತ್ತದೆ.

ಲಿಖಿತ ಪರೀಕ್ಷೆ ಪೂರ್ಣಗೊಂಡ ನಂತರ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಯ್ಕೆ ಮಾಡಬೇಕಾದ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಗೆ ಈ ಕೆಳಕಂಡ ದೇಹದಾರ್ಢ್ಯತೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ವೈದ್ಯಾಧಿಕಾರಿಗಳಿಂದ ನಡೆಸಲಾಗುವುದು. ಈ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಅಭ್ಯರ್ಥಿಗಳಿಗೆ ಹಾಗೂ ಮೆರಿಟ್ ಆಧಾರದ ಮೇರೆಗೆ ಹುದ್ದೆಗಳ ಸಂಖ್ಯೆಗಳ ಅನುಗುಣವಾಗಿ ರೋಸ್ಟರ್ ಬಿಂಧುಗಳ ಅನುಸಾರ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಆಯ್ಕೆ ಮಾಡಲಾಗುವುದು.

ದೇಹದಾರ್ಢ್ಯತೆ ಪರೀಕ್ಷೆ:

ಶಾರೀರಿಕ ಮಾನದಂಡಗಳು: ಶಾರೀರಿಕ ಮಾನದಂಡಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

  • ಪುರುಷ ಅಭ್ಯರ್ಥಿಗಳಿಗೆ

ದೇಹದಾರ್ಢ್ಯತೆ ನಿಗಧಿಪಡಿಸಿದ ಅರಣ್ಯಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ
ಎತ್ತರ: ಕನಿಷ್ಠ 152 ಸೆ.ಮೀ.
ಎದೆ ಸುತ್ತಳತೆ: ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 74 ಸೆ.ಮೀ.
ಎದೆ ಕನಿಷ್ಠ ಹಿಗ್ಗುವಿಕೆ: 5 ಸೆ.ಮೀ
  • ಮಹಿಳಾ ಅಭ್ಯರ್ಥಿಗಳಿಗೆ

ದೇಹದಾರ್ಢ್ಯತೆ ನಿಗಧಿಪಡಿಸಿದ ಅರಣ್ಯಗಳಲ್ಲಿ ವಾಸಿಸುವ ಪರಿಶಿಷ್ಠ ಪಂಗಡದ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ
ಎತ್ತರ: ಕನಿಷ್ಠ 145 ಸೆ.ಮೀ.
ಎದೆ ಸುತ್ತಳತೆ: ಅನ್ವಯಿಸುವುದಿಲ್ಲ
ಕನಿಷ್ಠ ತೂಕ: 38 ಕೆ.ಜಿ.

ದೃಷ್ಟಿ ಸಾಮರ್ಥ್ಯ:

ಅಭ್ಯರ್ಥಿಗಳು ಈ ಕೆಳಗೆ ನಿಗದಿಪಡಿಸಿರುವ ದೃಷ್ಟಿ ಸಾಮರ್ಥ್ಯವನ್ನು ಕನ್ನಡಕ ಸಹಿತ ಅಥವಾ ಕನ್ನಡಕ ರಹಿತ ಕಡ್ಡಾಯವಾಗಿ ಹೊಂದರಬೇಕು ಹಾಗೂ ದೃಷ್ಟಿ ಸಾಮರ್ಥ್ಯ ಕುರಿತು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುವುದು.

  • ದೂರ ದೃಷ್ಟಿ

ದೋಷ ರಹಿತ ಕಣ್ಣು 6/6 ಮೀಟರ್
ದೋಷ ಪೂರಿತ ಕಣ್ಣು 6/9 ಮೀಟರ್
  • ಸಮೀಪ ದೃಷ್ಟಿ
ದೋಷರಹಿತ ಕಣ್ಣು0/6 ಮೀಟರ್
ದೋಷಪೂರಿತಕಣ್ಣು 0/8 ಮೀಟರ್

ಪ್ರತಿ ಕಣ್ಣು ಸಂಪೂರ್ಣ ದೃಷ್ಟಿ ಹೊಂದಿರಬೇಕು. ವರ್ಣಾಂಧತೆ, ಮೆಳ್ಳೆಗಣ್ಣು ಅಥವಾ ಯಾವುದೇ ಕಣ್ಣಿನ ಅಥವಾ ರೆಪ್ಪೆಯ ವಿಕೃತ ಸ್ಥಿತಿಯನ್ನು ಅನರ್ಹತೆ ಎಂದು ಪರಿಗಣಿಸಲಾಗುವುದು.

ಶ್ರವಣ ಶಕ್ತಿ:

ಅಭ್ಯರ್ಥಿಗಳ ಶ್ರವಣ ಶಕ್ತಿಯನ್ನು ಪರೀಕ್ಷಿಸಲು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುವುದು.

1 ರಿನ್ನರ್ಸ್ ಟೆಸ್ಟ್

2 ವೆಬ್ಬರ್ಸ್ ಟೆಸ್ಟ್

3 ಟೆಸ್ಟ್ ಫಾರ್ ವರ್ಟಿಗೋ

ಮೇಲಿನ ಪರೀಕ್ಷೆಗಳಲ್ಲಿ ಯಾವುದಾದರೂ ಶ್ರವಣದೋಷವಿದೆಯೆಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳು ಆಯ್ಕೆಗೆ ಅನರ್ಹರಾಗುತ್ತಾರೆ.

ಅಭ್ಯರ್ಥಿಗಳು ಈ ಎಲ್ಲಾ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಹಾಗೂ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮ, ಮೀಸಲಾತಿ ನಿಯಮಗಳ ಪ್ರಕಾರ ಪರಿಗಣಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸಲಾಗುವುದು.

ವಿಶೇಷ ಸೂಚನೆ:

ನೇಮಕಾತಿ ಹೊಂದಿದ ಅಭ್ಯರ್ಥಿಗಳ ತರಬೇತಿ, ಪರೀಕ್ಷಾರ್ಥ ಅವಧಿ ಹಾಗೂ ಸ್ಥಳ ನಿಯುಕ್ತಿ:

ಅಂತಿಮವಾಗಿ ನೇಮಕಾತಿಗೆ ಅರ್ಹರಾದ ಅಭ್ಯರ್ಥಿಗಳನ್ನು ಅಧಿಸೂಚಿಸಿರುವ ವಿಭಾಗಕ್ಕೆ ನಿಯುಕ್ತಿಗೊಳಿಸಲಾಗುವುದು. ನೇಮಕಾತಿ ಹೊಂದಿದ ಅಭ್ಯರ್ಥಿಯು ಪ್ರಪ್ರಥಮವಾಗಿ ನೇಮಕ ಮಾಡಿದ ಸ್ಥಳದಲ್ಲಿ ಕನಿ‍ಷ್ಠ 5 ವರ್ಷಗಳ ಸೇವೆಯನ್ನು ಪೂರೈಸತಕ್ಕದ್ದು. ನೇಮಕಾತಿ ಹೊಂದಿದ ಅಭ್ಯರ್ಥಿಗಳು ಆಯಾ ಹುದ್ದೆಗೆ ನಿಗದಿಪಡಿಸಿದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಬೇಕಾಗಿದೆ.

ನಿಗದಿಪಡಿಸಿದ ತರಬೇತಿ ಅವಧಿ ಹಾಗೂ ಪರೀಕ್ಷಾರ್ಥ ಅವಧಿಯ ವಿವರ ಕೆಳಕಂಡಂತಿದೆ.

ಹುದ್ದೆ ತರಬೇತಿ ಅವಧಿ ಪರೀಕ್ಷಾರ್ಥ ಅವಧಿ (ತರಬೇತಿ ಅವಧಿ ಸೇರಿ)
ಅರಣ್ಯ ವೀಕ್ಷಕ 6 ತಿಂಗಳು 24 ತಿಂಗಳು

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು ಆನ್ ಲೈನ್ ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು. ಅಧಿಸೂಚನೆ ಇವುಗಳನ್ನು ಇಲಾಖಾ ವೆಬ್ ಸೈಟ್ www.aranya.gov.in ನಲ್ಲಿಲ ಪ್ರಕಟಪಡಿಸಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಆನ್ ಲೈನ್ ಮುಖಾಂತರ ಅರ್ಜಿಯನ್ನು ದಿನಾಂಕ 1.2.2019 ರಿಂದ 16.2.2019 ರಂದು ಸಂಜೆ 5:00 ಗಂಟೆಯವರೆಗೆ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಶುಲ್ಕ:

ಪರಿಶಿಷ್ಟ ಪಂಗಡ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ. 50.00 + ಸೇವಾ ಶುಲ್ಕ ರೂ. 20.00 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಮುದ್ರಿತ ಅರ್ಜಿ ಪ್ರತಿಯನ್ನು ತೆಗೆದುಕೊಂಡು, ಇ-ಪಾವತಿ ಸೌಲಭ್ಯವಿರುವ ಅಂಚೆ ಕಚೇರಿಯಲ್ಲಿ ಮುದ್ರಿತ ಅರ್ಜಿ ಪ್ರತಿಯನ್ನು ತೋರಿಸಿ, ಈ ಮೇಲೆ ಹೇಳಿರುವ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸತಕ್ಕದ್ದು. ಅರ್ಜಿ ಶುಲ್ಕವನ್ನು ದಿನಾಂಕ: 1.2.2019ರಿಂದ 18.2.2019ರ ಮಧ್ಯಾಹ್ನ 2:30ರೊಳಗೆ ಪಾವತಿಸುವ ಅವಕಾಶವಿರುತ್ತದೆ.

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Cahamarajanagar circle karnataka forest department has invited applications for 7 forest watcher posts through interview. Interested candidates can apply.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X