ಹಿಂದುಳಿದ ವರ್ಗಗಳ ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ

Posted By:

ಹಿಂದುಳಿದ ವರ್ಗಗಳ ನಿರುದ್ಯೋಗಿ ಅಭ್ಯರ್ಥಿಗಳಿಗಾಗಿ ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ.

NBCFDC ಭಾರತ ಸರ್ಕಾರ ಪ್ರಾಯೋಜಕತ್ವದೊಂದಿಗೆ 2017-18ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಬೆಂಗಳೂರಿನಲ್ಲಿರುವ ಭಾರತ ಸರ್ಕಾರದ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಐಪಿಇಟಿ-APDDRL) 3 ತಿಂಗಳ ಉಚಿತ ವೃತ್ತಿಪರ ತರಬೇತಿ ಹಮ್ಮಿಕೊಂಡಿದೆ.

ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶ

ಈ ತರಬೇತಿಯನ್ನು ಉಚಿತ ಊಟ ಮತ್ತು ವಸತಿಗಳೊಂದಿಗೆ ಆಯೋಜಿಸಿದ್ದು, ಯಶಸ್ವಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.

ತರಬೇತಿ ವಿವರ

1. ಮಷಿನ್ ಆಪರೇಟರ್ ಅಸಿಸ್ಟಂಟ್ (ಪ್ಲಾಸ್ಟಿಕ್ ಪ್ರೊಸೆಸಿಂಗ್)
ವಿದ್ಯಾರ್ಹತೆ: 8ನೇ ತರಗತಿ ಪಾಸ್
ತರಬೇತಿ ಅವಧಿ: 3 ತಿಂಗಳು

2. ಮಷಿನ್ ಆಪರೇಟರ್ ಅಸಿಸ್ಟಂಟ್ ( ಇಂಜೆಕ್ಷನ್ ಮೌಲ್ಡಿಂಗ್)
ವಿದ್ಯಾರ್ಹತೆ: 8ನೇ ತರಗತಿ ಪಾಸ್
ತರಬೇತಿ ಅವಧಿ: 3 ತಿಂಗಳು

ವಯೋಮಿತಿ: 18 ರಿಂದ 35 ವರ್ಷ

  • ನಗರ ಪ್ರದೇಶದ ಅಭ್ಯರ್ಥಿಗಳಿಗೆ ಪೋಷಕರ ವಾರ್ಷಿಕ ವರಮಾನ ರೂ. 1,20,000/- ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ವಾರ್ಷಿಕ ವರಮಾನ ರೂ. 98000/-ಕ್ಕಿಂತ ಕಡಿಮೆ ಇರಬೇಕು.
  • ಯಶಸ್ವಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.
  • ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಕಡ್ಡಾಯವಾಗಿ ಹೊಂದಿರಬೇಕು.

ಇಚ್ಛೆಯುಳ್ಳ ಅಭ್ಯರ್ಥಿಗಳು ತಮ್ಮ ಸ್ವವಿವರ 1.ಹೆಸರು 2 ತಂದೆ ತಾಯಿ ಹೆಸರು 3.ಹುಟ್ಟಿದ ದಿನಾಂಕ ವಯಸ್ಸು 4.ಶಾಶ್ವತ ವಿಳಾಸ ಮತ್ತು ಸಂವಹನ ವಿಳಾಸ, ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ 5.ಜಾತಿ 6 ಅರ್ಹತೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ 4 ಭಾವಚಿತ್ರದ ಜೊತೆಗೆ ಕಚೇರಿ ವಿಳಾಸಕ್ಕೆ ಪೋಸ್ಟ್ ಅಥವಾ ಇ-ಮೇಲ್ ಮೂಲಕ ನೋಂದಾಯಿಸಲು ಸೂಚಿಸಲಾಗಿದೆ.

ವಿಳಾಸ

ಅಡ್ವಾನ್ಸ್ದ್ ಪಾಲಿಮರ್ ಡಿಸೈನ್ ಅಂಡ್ ಡೆವಲಪ್ಮೆಂಟ್ ರಿಸರ್ಚ್ ಲ್ಯಾಬೋರೇಟರಿ (ಎಪಿಡಿಡಿಆರ್ ಎಲ್ )
4 ನೇ ಮಹಡಿ, 2ನೇ ಬ್ಲಾಕ್, ಕೆಐಎಡಿಬಿ ಬಿಲ್ಡಿಂಗ್, 14 ನೇ ಕ್ರಾಸ್, ಪೀಣ್ಯ 2 ನೇ ಹಂತ, ಬೆಂಗಳೂರು-560058

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9663133277 ಸಂಪರ್ಕಿಸಲು ಕೋರಲಾಗಿದೆ.

English summary
CIPET organizing Free skill development program for unemployed youths. Interested candidates can register through post or e-mail

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia