ಸಿಐಎಸ್ಎಫ್: ಒಟ್ಟು 118 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಕೇಂದ್ರಿಯ ಔದ್ಯೋಗಿಕ ಭದ್ರತಾ ಪಡೆ (ಸಿಐಎಸ್ಎಫ್) ನಲ್ಲಿ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೆಪಿಎಸ್‌ಸಿ: ನಿಗದಿತ ದಿನಾಂಕದಂದೇ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳು

ಸ್ಫೋರ್ಟ್ಸ್ ಕೋಟಾ ಅಡಿಯಲ್ಲಿ ಒಟ್ಟು 118 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಲು ಸೂಚಿಸಲಾಗಿದೆ.

ನ್ಯಾಯ ವಿಜ್ಞಾನ ಪ್ರಯೋಗಾಲಯ: 15 ಹುದ್ದೆಗಳ ನೇಮಕಾತಿ

ಸಿಐಎಸ್ಎಫ್

ಅರ್ಜಿಗಳನ್ನು ನಿಗದಿದ ನಮೂನೆಯಲ್ಲಿ ಭರ್ತಿ ಮಾಡಿ, ಜನವರಿ 25 ರೊಳಗೆ ಕಚೇರಿ ವಿಳಾಸಕ್ಕೆ ತಲುಪಿಸಲು ಸೂಚಿಸಲಾಗಿದೆ.

ಹುದ್ದೆ ವಿವರ

ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಸ್ಕೆಟ್ ಬಾಲ್, ಫುಟ್ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಜುಡೋ, ಶೂಟಿಂಗ್, ಸ್ವಿಮ್ಮಿಂಗ್, ವಾಲಿಬಾಲ್, ರೆಸ್ಲಿಂಗ್, ವೈಟ್ ಲಿಫ್ಟಿಂಗ್ ಕ್ರೀಡೆಗಳ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

31 ಸಬ್ ಇನ್ಸ್‌ಪೆಕ್ಟರ್ ಮತ್ತು 87 ಹೆಡ್ ಕಾನ್ಸ್ಟೇಬಲ್ ಸೇರಿ ಒಟ್ಟು 118 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ದೈಹಿಕ ಪರೀಕ್ಷೆ

ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿರಬೇಕು.

ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಪಿಯುಸಿ/ಹನ್ನೆರಡನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ದೈಹಿಕ ಪರೀಕ್ಷೆ
ಅಭ್ಯರ್ಥಿಗಳು ಮೆಡಿಕಲ್ ಅಥವಾ ಕ್ರೀಡಾ ಸ್ಟಾಂಡರ್ಡ್ ನಿಗದಿಪಡಿಸಿರುವ ದೈಹಿಕ ಸಾಮರ್ಥ್ಯವನ್ನು ಹೊಂದಿರಬೇಕು.

 

ಕ್ರೀಡೆ

ಅಭ್ಯರ್ಥಿಗಳು ಕ್ರೀಡೆಯಲ್ಲಿ ವಿವಿಧ ಹಂತಗಳನ್ನು ಪೂರೈಸಿರಬೇಕು.

ಆಯ್ಕೆ

ಅಭ್ಯರ್ಥಿಗಳನ್ನು ಕ್ರೀಡಾ ಪರೀಕ್ಷೆ, ಸಾಮರ್ಥ್ಯ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ

ಅರ್ಜಿಯೊಂದಿಗೆ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕೊನೆಯ ದಿನಾಂಕದೊಳಗೆ ಕಛೇರಿ ವಿಳಾಸಕ್ಕೆ ತಲುಪಿಸಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

English summary
CISF Applications are invited from the Male/Female citizens of India to fill up 118 vacancies (Assistant Sub Inspector/Exe-31 and Head Constable/GD-87) in Central Industrial Security Force against SPORTS QUOTA.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia