1319 ಹುದ್ದೆಗಳಿಗೆ ಕೋಲ್ ಇಂಡಿಯಾ ಲಿಮಿಟೆಡ್ ಅರ್ಜಿ ಆಹ್ವಾನ

Posted By: Vinaykumar

ಕೋಲ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ 1319 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಫೆಬ್ರವರಿ 24ರೊಳಗೆ ಅರ್ಜಿ ಸಲ್ಲಿಸಬಹುದು.

ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆ


ಹುದ್ದೆ: ಮ್ಯಾನೇಜ್ಮೆಂಟ್ ಟ್ರೈನಿ (1319)
ಸ್ಥಳ: ಭಾರತದಾದ್ಯಂತ
ವೇತನ ಶ್ರೇಣಿ: 20600 ರಿಂದ 46500 ರು, (ತಿಂಗಳಿಗೆ)
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

ವಯೋಮಿತಿ:

18 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 30ವರ್ಷದೊಳಗಿನ ಅಭ್ಯರ್ಥಿಗಳು ಈ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಡಿಸೆಂಬರ್ 01 , 2016 ಕ್ಕೆ 18 ವರ್ಷ ಪೂರೈಸಿರಬೇಕು.
ವಯೋಮಿತಿಯಲ್ಲಿ ಸಡಿಲಿಕೆ:
1. ಎಸ್ ಸಿ ಅಭ್ಯರ್ಥಿಗಳಿಗೆ ಐದು ವರ್ಷ
2. ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ
3.ಓ ಬಿ ಸಿ ಅಭ್ಯರ್ಥಿಗಳಿಗೆ ಮೂರು ವರ್ಷ

ವಿದ್ಯಾಭ್ಯಾಸ:

ಬಿಇ, ಬಿ,ಟೆಕ್, ಬಿಎಸ್ ಇನಲ್ಲಿ ಇಂಜಿನಿಯರಿಂಗ್, ಸಿಎ ಪದವಿ, ಡಿಗ್ರಿ, ಡಿಪ್ಲಮೋನಲ್ಲಿ ಕನಿಷ್ಠ 60% ಅಂಕದೊಂದಿಗೆ ಉತ್ತೀರ್ಣರಾಗಿರಬೇಕು

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಓ ಬಿ ಸಿ ಅಭ್ಯರ್ಥಿಗಳಿಗೆ ರೂ.1000.ಎಸ್ ಸಿ/ಎಸ್ ಟಿ/ ಅಂಗವಿಕಲ/ ಕೋಲ್ ಇಂಡಿಯಾ ಸಿಬ್ಬಂದಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಶುಲ್ಕವನ್ನು ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲಿಯೇ ಪಾವತಿಸುವುದು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಯನ್ನು ನಿಗಧಿತ ನಮೂನೆಯಲ್ಲಿಯೇ ಸಲ್ಲಿಸಬೇಕು. ಅರ್ಜಿಯನ್ನು ಸಂಸ್ಥೆಯ ವೆಬ್ ಸೈಟ್ ವಿಳಾಸದಲ್ಲಿ ದಿನಾಂಕ 05 -01 -2017 ರಿಂದ 24 -02 -2017 ರವರೆಗೂ ಪಡೆಯಬಹುದಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸಲು ದಿನಾಂಕ 03 -02 -2017 ಕ್ಕೆ ನಿಗಧಿ ಪಡಿಸಲಾಗಿತ್ತು. ನಂತರ 24-02-2017 ಕ್ಕೆ ವಿಸ್ತರಿಸಲಾಗಿದೆ.  ಮಾರ್ಚ್ 26 , 2017 ರಂದು ಆನ್ಲೈನ್ ಪರೀಕ್ಷೆ ನಡೆಯಲಿದೆ.
ಹೆಚ್ಚಿನ ಮಾಹಿತಿಯನ್ನು https://www.coalindia.in/Portals/13/PDF/Detailed_Advertisement_04012017.pdf ಮೂಲಕ ಪಡೆಯಿರಿ.

English summary
Coal India Limited (CIL) invites application for the position of 1319 management Trainee vacancies. Apply online before 24th February 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia