ಬಯೋಲಾಜಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮಾಡುವ ಕಾಮನ್ ತಪ್ಪುಗಳು

Written By: Nishmitha B

ಸಿಬಿಎಸ್ಇ ಹಾಗೂ ದ್ವಿತೀಯ ಪಿಯು ಎಕ್ಸಾಂಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಈಗಾಗಲೇ ಪರೀಕ್ಷೆ ಪ್ರಾರಂಭವಾಗಿದ್ದು, ಮಾರ್ಚ್ 27ರಂದು ವಿದ್ಯಾರ್ಥಿಗಳು ಬಯೋಲಾಜಿ ಸಬ್‌ಜೆಕ್ಟ್ ಗೆ ಪರೀಕ್ಷೆ ಬರೆಯಲಿದ್ದಾರೆ.

ಹೆಚ್ಚಿನ ವಿದ್ಯಾರ್ಥಿಗಳಿಗೆ ಬಯೋಲಾಜಿ ಸಬ್‌ಜೆಕ್ಟ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಿರುತ್ತದೆ. ಅಷ್ಟೇ ಅಲ್ಲ ಈ ಸಬ್‌ಜೆಕ್ಟ್ ನ್ನು ಬಹಳ ಇಂಟ್ರಸ್ಟ್ ನಿಂದ ಕೂಡಾ ಓದುತ್ತಾರೆ. ಆದ್ರೂ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸ್ಕೋರ್ ಮಾಡುವಲ್ಲಿ ವಿಫಲರಾಗುತ್ತಾರೆ. ಹಾಗಿದ್ರೆ ಸಮಸ್ಯೆ ಎಲ್ಲಿದೆ ಎಂದು ಯೋಚಿಸುತ್ತಿದ್ದೀರಾ?

ಸಮಸ್ಯೆ ಎಲ್ಲಿದೆ ಎಂದು ನಾವು ನಿಮಗೆ ಹೇಳ್ತೇವೆ. ಸಮಸ್ಯೆ ಇರುವುದು ವಿದ್ಯಾರ್ಥಿಗಳಲ್ಲಿಯೇ. ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಗೊತ್ತಿಲ್ಲದೇ ಕೆಲವೊಂದು ತಪ್ಪುಗಳನ್ನ ಮಾಡುತ್ತಾರೆ. ಅಂತಹ ತಪ್ಪುಗಳು ಯಾವುವು ಎಂಬ ಲಿಸ್ಟ್ ಇಲ್ಲಿದೆ. ಈ ಮಿಸ್ಟೇಕ್ಸ್ ಒಮ್ಮೆ ಓದಿ ಮತ್ತೆಂದೂ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ

1 NCERT ಪುಸ್ತಕ ಬದಿಗಿಡುತ್ತಾರೆ:

ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳು NCERT ಪುಸ್ತಕ ಬದಿಗಿಟ್ಟು, ಇತರ ಪುಸ್ತಕಗಳನ್ನೇ ಹೆಚ್ಚಾಗಿ ರೆಫರ್ ಮಾಡುತ್ತಾರೆ. ಆದ್ರೆ ಇದು ಉತ್ತಮ ಐಡಿಯಾ ಅಲ್ಲ. ಬೋರ್ಡ್ ಎಕ್ಸಾಂ ಗಳಲ್ಲಿ ಕೇಳುವ ಹೆಚ್ಚಿನ ಪ್ರಶ್ನೆಗಳು NCERT ಪುಸಕ್ತವನ್ನ ರೆಫರ್ ಮಾಡಿರುವ ಪ್ರಶ್ನೆಗಳಾಗಿರುತ್ತದೆ. ರೆಫರೆನ್ಸ್ ಪುಸ್ತಕಗಳನ್ನ ಒಂದು ಬಾರಿ ಓದಿಕೊಳ್ಳುವುದು ಒಳ್ಳೆಯದು ಹಾಗಂತ ಇಡೀ ದಿನ ಅದೇ ಪುಸ್ತಕವನ್ನ ಓದುತ್ತಾ ಇರುವುದಲ್ಲ. NCERT ಪುಸಕ್ತ ಓದುವುದರಿಂದ ನೀವು ಎಲ್ಲಾ ವಿಷಯವನ್ನ ಕವರ್ ಮಾಡಿಕೊಳ್ಳುತ್ತೀರಿ ಅಷ್ಟೇ ಅಲ್ಲ ಎಕ್ಸಾಂ ನಲ್ಲಿ ಉತ್ತಮ ಅಂಕ ಕೂಡಾ ಗಳಿಸಬಹುದು

2 ಓದಲು ನೀಡಿರುವ ಕಂಪ್ಲೀಟ್ ಸಮಯವನ್ನ ಬಳಸಿಕೊಳ್ಳುವಲ್ಲಿ ವಿಫಲ:

ಪ್ರಶ್ನಾಪತ್ರಿಕೆ ನೀಡಿದ ಕೂಡಲೇ 15 ನಿಮಿಷ ಗಮನವಿಟ್ಟು ಪ್ರಶ್ನೆಗಳನ್ನ ಓದಿ. ಇದರಿಂದ ನಿಮಗೆ ಯಾವ ರೀತಿ ಉತ್ತರ ಬರೆಯಬಹುದು ಎಂಬ ಸ್ಟಾಟಜಿ ತಿಳಿಯುತ್ತದೆ. ಪ್ರಶ್ನೆಗೆ ಸರಿಯಾದ ಉತ್ತರ ಬರೆಯಲು ನಿಮಗೆ ಐಡಿಯಾ ಕೂಡಾ ಸಿಗುತ್ತದೆ. ಗಮನವಿಟ್ಟು ಪ್ರಶ್ನೆ ಓದುದರಿಂದ ನಿಮಗೆ ಅದಕ್ಕೆ ಬರೆಯಬಹುದಾದ ಎಲ್ಲಾ ರೀತಿಯ ಸಬ್‌ಪಾಯಿಂಟ್ ನೆನಪಿಗೆ ಬರುತ್ತದೆ. ಆದ್ರೆ ವಿದ್ಯಾರ್ಥಿಗಳು ಈ ಟೈಂನಲ್ಲಿ ಪ್ರಶ್ನೆಗಳನ್ನ ಓದದೇ ನೇರವಾಗಿ ಉತ್ತರ ಬರೆಯಲು ಹೋಗಿ ತಪ್ಪು ಮಾಡಿಕೊಳ್ಳುತ್ತಾರೆ

3 ಉದ್ದ ಉದ್ದವಾದ ಟಿಪ್ಪಣಿ ಬರೆಯುವುದು:

ಪರೀಕ್ಷೆ ವೇಳೆ ಉತ್ತರ ಹಾಳೆಯಲ್ಲಿ ಸಾಧ್ಯವಾದಷ್ಟು ಪಾಯಿಂಟ್ ಪಾಯಿಂಟ್ ಆಗಿ ಉತ್ತರ ಬರೆಯುತ್ತಾ ಹೋಗಿ. ಆದ್ರೆ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಪ್ಯಾರಾಗ್ರಾಫ್ ಉತ್ತರವನ್ನ ಬರೆಯುತ್ತಾ ಹೋಗುತ್ತಾರೆ. ಪಾಯಿಂಟ್ ಆಗಿ ಬರೆಯುವ ಉತ್ತರಗಳು ಓದಲು ಇಂಟ್ರಸ್ಟ್ ಆಗಿರುತ್ತದೆ ಮಾತ್ರವಲ್ಲದೇ ಟೀಚರ್ಸ್ ಗೆ ಅಂಕಗಳನ್ನು ನೀಡಲು ಕೂಡಾ ಸುಲಭವಾಗುತ್ತದೆ. ಅಷ್ಟೇ ಅಲ್ಲ ಪ್ರಮುಖ ಮಾಹಿತಿ ಇದ್ದಾಗ ಅದನ್ನು ಹೈಲೆಟ್ ಮಾಡಲು ಮರೆಯದಿರಿ

4. ಡಯಾಗ್ರಾಂ ಹಾಗೂ ಇತರ ಚಿತ್ರಗಳನ್ನ ಬಿಡಿಸುವುದಿಲ್ಲ :

ಬಯೋಲಾಜಿ ಸಬ್‌ಜೆಕ್ಟ್ ಗೆ ಡಯಾಗ್ರಾಮ್ ತುಂಬಾ ಪ್ರಮುಖ. ಅದು 2,3 ಇಲ್ಲ 5 ಅಂಕದ ಪ್ರಶ್ನೆಯಾಗಿರಬಹುದು. ವಿದ್ಯಾರ್ಥಿಗಳು ಡಯಾಗ್ರಾಮ್ ಬಳಸಿ ಉತ್ತರ ಬರೆಯಬೇಕು. ಇನ್ನು ಡಯಾಗ್ರಾಮ್ ರಚಿಸುವಾಗ ಪೆನ್ಸಿಲ್ ಬಳಕೆ ಮಾಡಿ. ಆದ್ರೆ ಲೇಬಲ್ ಮಾಡಲು ಮರೆಯದಿರಿ

5. ಅಗತ್ಯಕ್ಕಿಂತ ಹೆಚ್ಚಿನದನ್ನು ಬರೆಯುದು:

ಸಿಬಿಎಸ್ ಇ ಪರೀಕ್ಷೆ ಬರೆಯುವಾಗ ಈ ವಿಷಯವನ್ನ ನೆನಪಿಟ್ಟುಕೊಳ್ಳಿ. ಹೆಚ್ಚಿನ ವಿದ್ಯಾರ್ಥಿಗಳು ಇಲ್ಲೇ ತಪ್ಪು ಮಾಡುವುದು. ಎರಡು ಅಂಕದ ಪ್ರಶ್ನೆಗೆ 2 ಪಾಯಿಂಟ್ ಉತ್ತರ ನೀಡಿ. ಆದ್ರೆ ವಿದ್ಯಾರ್ಥಿಗಳು ಅಗತ್ಯವಿಲ್ಲವೆಂದ್ರೂ ಪ್ಯಾರಾ ಗಟ್ಟಲೆ ಉತ್ತರ ಬರೆಯುತ್ತಾರೆ. ಇದರಿಂದ ಇವರ ಸಮಯ ಕೂಡಾ ವ್ಯರ್ಥ ವಾಗುವುದು ಮಾತ್ರವಲ್ಲದೂ ಎನರ್ಜಿ ಕೂಡಾ ವ್ಯರ್ಥ ವಾಗುತ್ತದೆ.

6. ಅಪೂರ್ಣ ಉತ್ತರ ಬರೆಯುವುದು:

ಹೆಚ್ಚಿನ ವಿದ್ಯಾರ್ಥಿಗಳು ಈ ತಪ್ಪನ್ನ ಪರೀಕ್ಷೆ ಹಾಲ್‌ನಲ್ಲಿ ಮಾಡುತ್ತಾರೆ. ಒಂದು ಪ್ರಶ್ನೆಗೆ ಉತ್ತರ ಬರೆಯುವಾಗ ಅದು ಪೂರ್ತಿ ಆಗುವ ಮುನ್ನವೇ ಮತ್ತೊಂದು ಪ್ರಶ್ನೆಗೆ ಉತ್ತರ ಬರೆಯಲು ಪ್ರಾರಂಭಿಸುತ್ತಾರೆ. ಉತ್ತರ ಹಾಳೆಯ ಕೊನೆಯಲ್ಲಿ ಮತ್ತೆ ಅಪೂರ್ಣ ಗೊಳಿಸಿದ ಪ್ರಶ್ನೆಗೆ ಉತ್ತರವನ್ನ ಬರೆಯುತ್ತಾ ಹೋಗುತ್ತಾರೆ. ಇದರಿಂದ ನಿಮ್ಮ ಉತ್ತರ ಹಾಳೆ ನೋಡಲು ಗಲೀಜು ಆಗುವುದು ಮಾತ್ರವಲ್ಲದೇ ಅಂಕ ಕೊಡುವಾಗ ಶಿಕ್ಷಕರಿಗೂ ಗೊಂದಲವುಂಟಾಗುತ್ತದೆ

7 ಕೊನೆಯ ಗಳಿಗೆಯವರೆಗೂ ಉತ್ತರ ಬರೆಯುತ್ತಲೇ ಇರುವುದು:

ವಿದ್ಯಾರ್ಥಿಗಳು ಯಾವತ್ತೂ ಸರಿಯಾದ ಸಮಯಕ್ಕೆ ಉತ್ತರ ಪತ್ರಿಕೆ ನೀಡುವುದಿಲ್ಲ. ಕೊನೆಯ ಗಳಿಗೆ ವರೆಗೂ ಬರೆಯುತ್ತಲೇ ಇರುತ್ತಾರೆ. ಇದು ಕೂಡಾ ವಿದ್ಯಾರ್ಥಿಗಳು ಎಕ್ಸಾಂ ಹಾಲ್‌ನಲ್ಲಿ ಮಾಡುವ ಒಂದು ತಪ್ಪಾಗಿದೆ. ವಾರ್ನಿಂಗ್ ಬೆಲ್ ಮಾಡಿದ ನಂತರ ನಿಮ್ಮ ಪತ್ರಿಕೆಯಲ್ಲಿನ ರೋಲ್ ನಂಬರ್, ಉತ್ತರಗಳ ಸಂಖ್ಯೆ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಬೇಕು. ಆದ್ರೆ ವಿದ್ಯಾರ್ಥಿಗಳು ಇದ್ಯಾವುದನ್ನೂ ಚೆಕ್ ಮಾಡದೇ ಕೊನೆಯ ಕ್ಷಣದವರೆಗೂ ಏನಾದ್ರೂ ಉತ್ತರ ಬರೆಯುತ್ತಲೇ ಇರುತ್ತಾರೆ.

English summary
Many students commit some mistakes unknowingly while taking the Biology exam. With careful attention, one can avoid them

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia