ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ: ವಾಕ್ ಇನ್ ಇಂಟರ್ವ್ಯೂ

Posted By:

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಾದೇಶಿಕ ನಿರ್ದೇಶನಾಲಯ (ದಕ್ಷಿಣ), ಬೆಂಗಳೂರು ಕಚೇರಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅಸಿಸ್ಟೆಂಟ್ ಹುದ್ದೆಗೆ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 06,2017ರಂದು ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ 43 ಹುದ್ದೆಗಳ ನೇಮಕಾತಿ

ಸಿಪಿಸಿಬಿ ವಾಕ್ ಇನ್ ಇಂಟರ್ವ್ಯೂ

ಹುದ್ದೆಗಳ ವಿವರ

ಹುದ್ದೆಯ ಹೆಸರು: ಅಸಿಸ್ಟಂಟ್
ವೇತನ ಶ್ರೇಣಿ: ರೂ.34,500/-, ತಿಂಗಳಿಗೆ.

ವಿದ್ಯಾರ್ಹತೆ

ಎಲ್ ಎಲ್ ಬಿ, ಎಲ್ ಎಲ್ ಎಂ, ಅಥವಾ ಪಿಜಿಡಿಎಲ್ ಪೂರ್ಣಗೊಳಿಸಿರಬೇಕು. ಹಾಗೂ ಬಾರ್ ಕೌನ್ಸಿಲ್ ನಿಂದ ಸರ್ಟಿಫಿಕೆಟ್ ಹೊಂದಿರಬೇಕು.

ಸಂದರ್ಶನ

  • ಸಂದರ್ಶನವು ನವೆಂಬರ್ 6 ರಂದು ಬೆಳಗ್ಗೆ 10.00 ಗಂಟೆಗೆ ಸಿಪಿಸಿಬಿ ಕಚೇರಿಯಲ್ಲಿ ನಡೆಯಲಿದೆ.
  • ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಲಗತ್ತಿಸಿದ, ಸ್ವಯಂ ದೃಢೀಕರಿಸಿದ ಟೈಪ್ ಮಾಡಿದ ಅಥವಾ ಕೈಯಿಂದ ಬರೆದ ಅರ್ಜಿಯನ್ನು ತರತಕ್ಕದ್ದು.

ಸಂದರ್ಶನ ನಡೆಯುವ ಸ್ಥಳ

CPCB, Regional Directorate (South). " isarga Bhawan·I st Floor, Thimmaiab Road. 7 'D' cross, Shivanagar, Bengaluru-560 079.

ಹೆಚ್ಚಿನ ವಿವರಗಳಿಗಾಗಿ ಶೀಮತಿ ಅಂಜನಾ ಕುಮಾರಿ ವಿ. ಎನ್ವಿರಾನ್ಮೆಂಟಲ್ ಇಂಜಿನಿಯರ್ (ಮೊಬೈಲ್ ಸಂಖ್ಯೆ: 9916355576, e-mail: anjana.anupama@gmail.com) ಸಂಪರ್ಕಿಸಲು ಕೋರಲಾಗಿದೆ.

ಐಒಸಿಎಲ್: 354 ಟ್ರೇಡ್ ಅಪ್ರೆಂಟಿಸ್ ನೇಮಕಾತಿ

English summary
CPCB recruitment 2017 notification has been released on official website cpcb.nic.in for the recruitment of 01 (one) for Assistant vacancy. Walk-in-Interview 06th November 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia