ಸಿಆರ್ ಪಿಎಫ್ ನಲ್ಲಿ 219 ಎ ಸ್ ಐ ಹುದ್ದೆಗಳ ನೇಮಕಾತಿ

Posted By:

ಕೇಂದ್ರಿಯ ಮೀಸಲು ಪಡೆಯಲ್ಲಿ (ಸಿ ಆರ್ ಪಿ ಎಫ್) ಖಾಲಿ ಇರುವ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ (ಸ್ಟೆನೋ) ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆ ವಿವರ

ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ (ಸ್ಟೆನೋ)
ಸಾಮಾನ್ಯ-75
ಒಬಿಸಿ-80
ಎಸ್.ಸಿ-42
ಎಸ್.ಟಿ-22
ಒಟ್ಟು ಹುದ್ದೆಗಳು : 219

ಎ ಸ್ ಐ (ಸ್ಟೆನೋ) ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ

ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ

ವೇತನ ಶ್ರೇಣಿ

ರೂ.29,200-92,300 /- (ರೇಷನ್ ಮನಿ, ಫ್ರಿ ಮೆಡಿಕಲ್,. ಫ್ರಿ ಯೂನಿಫಾರಂ, ಸೇರಿದಂತೆ ಇತರೆ ಭತ್ಯೆಗಳನ್ನು ಒಳಗೊಂಡಿರುತ್ತದೆ)

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷವನ್ನು ಪೂರ್ಣಗೊಳಿಸಿರಬೇಕು ಹಾಗೂ ಗರಿಷ್ಠ 25 ವರ್ಷವನ್ನು ಮೀರಿರಬಾರದು.

ವಯೋಮಿತಿಯಲ್ಲಿ ಸಡಿಲಿಕೆ

ಎಸ್.ಟಿ/ ಎಸ್.ಸಿ ಅಭ್ಯರ್ಥಿಗಳಿಗೆ ಐದು ವರ್ಷ, ಒ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ, ಸ್ಕಿಲ್ ಟೆಸ್ಟ್, ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆಗಳನ್ನು ನಡೆಸಲಾಗುವುದು.

ಸೂಚನೆ : ಈ ಹುದ್ದೆಗಳು ತಾತ್ಕಾಲಿಕವಾಗಿದ್ದು ಅವಶ್ಯಕತೆಗೆ ತಕ್ಕಂತೆ ಹೆಚ್ಚಿಸುವ ಅಧಿಕಾರವನ್ನು ಇಲಾಖೆಯು ಹೊಂದಿರುತ್ತದೆ.

ಸ್ಕಿಲ್ ಟೆಸ್ಟ್

ಹುದ್ದೆಯು ಎ.ಎಸ್.ಐ ಸ್ಟೆನೋ ಆಗಿರುವುದರಿಂದ ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

ಡಿಕ್ಟೇಷನ್

ಹತ್ತು ನಿಮಿಷಕ್ಕೆ 80 ಪದಗಳನ್ನು ಟೈಪ್ ಮಾಡುವ ಪರೀಕ್ಷೆ

ಟ್ರಾನ್ಸ್ಕ್ರಿಪ್ಷನ್ ಟೈಮ್

ಪ್ರತಿ ಲೇಖನ ಬರೆಯುವುದು ಇಂಗ್ಲಿಷ್ ಭಾಷೆಯಾದಲ್ಲಿ 50 ನಿಮಿಷ, ಹಿಂದಿ ಭಾಷೆ ಆಯ್ಕೆ ಮಾಡಿಕೊಂಡಲ್ಲಿ 65 ನಿಮಿಷ ಕಾಲಾವಕಾಶ ನೀಡಲಾಗುವುದು.

ದೈಹಿಕ ಸಾಮರ್ಥ್ಯ ಪರೀಕ್ಷೆ

ಎತ್ತರ
ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳು: 165 ಸೆಂ.ಮೀ
ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳು: 155 ಸೆಂ.ಮೀ
ಎಸ್.ಟಿ/ಎಸ್.ಸಿ ವರ್ಗದ ಪುರುಷ ಅಭ್ಯರ್ಥಿಗಳು: 162.5 ಸೆಂ.ಮೀ
ಎಸ್.ಟಿ/ಎಸ್.ಸಿ ವರ್ಗದ ಮಹಿಳಾ ಅಭ್ಯರ್ಥಿಗಳು 150 ಸೆಂ.ಮೀ

ಪರೀಕ್ಷಾ ಶುಲ್ಕ

ರೂ.100/-
(ಎಸ್.ಸಿ/ಎಸ್.ಟಿ/ಮಹಿಳಾ ಅಭ್ಯರ್ಥಿಗಳಿಗೆ/ ಎಕ್ಸ್ ಸರ್ವೀಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ)
ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಬಹುದಾಗಿದೆ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಸಲ್ಲಿಸುವ ಅವಕಾಶವಿದೆ.

ಅರ್ಜಿ ಪ್ರಕ್ರಿಯೆ

ಅರ್ಜಿಗಳನ್ನು ದಿನಾಂಕ 27 -03 -2017 ರಿಂದ 25 -04 -2017 ರವರೆಗೆ ಆನ್-ಲೈನ್ ಮೂಲಕ ಸಲ್ಲಿಸತಕ್ಕದ್ದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 27-03-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-04-2017
  • ಲಿಖಿತ ಪರೀಕ್ಷೆ ನಡೆಯುವ ದಿನಾಂಕ : 16 -07-2017

ಹೆಚ್ಚಿನ ಮಾಹಿತಿಗಾಗಿ   crpf.nic.in  ವೆಬ್ಸೈಟ್ ವಿಳಾಸ ನೋಡಿ

English summary
ONLINE RECRUITMENT DRIVE TO FILL UP RESERVED/BACKLOG/CURRENT VACANCIES FOR THE POST OF ASSISTANT SUB-INSPECTOR (STENO)IN CRPF FOR THE YEAR 2016-17

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia