ಕೇಂದ್ರ ಮೀಸಲು ಪಡೆ (ಸಿ.ಆರ್.ಪಿ.ಎಫ್) 2945 ಕಾನ್ಸ್ಟೇಬಲ್ ಹುದ್ದೆಗಳ ನೇಮಕ

Posted By: Vinaykumar

ಕೇಂದ್ರ ಮೀಸಲು ಪಡೆ (ಸಿ ಆರ್ ಪಿ ಎಫ್ ) ಕರ್ನಾಟಕ ಸೇರಿದಂತೆ ದೇಶಾದ್ಯಂತ ಖಾಲಿ ಇರುವ ಟೆಕ್ನಿಕಲ್ ಮತ್ತು ಟ್ರೇಡ್ಸ್ಮನ್ ಹುದ್ದೆಗಳನ್ನು ಅರ್ಹ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಸಿ.ಆರ್.ಪಿ.ಎಫ್  ಕಾನ್ಸ್ಟೇಬಲ್ ಹುದ್ದೆ

ವಿದ್ಯಾರ್ಹತೆ

ಟೆಕ್ನಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು ಮತ್ತು ಟ್ರಾನ್ಸ್ಪೋರ್ಟ್ ವೆಹಿಕಲ್ ವಿಭಾಗಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಕಾನ್ಸ್ಟೇಬಲ್ (ಡ್ರೈವರ್) ಹುದ್ದೆಗೆ 21 ರಿಂದ 27 ವರ್ಷ ವಯೋಮಿತಿಯವರಾಗಿರಬೇಕು. ಉಳಿದ ಹುದ್ದೆಗಳಿಗೆ ಕನಿಷ್ಠ 18 ಮತ್ತು ಗರಿಷ್ಟ 23 ವರ್ಷದೊಳಗಿನ ಅಭ್ಯರ್ಥಿಗಳಾಗಿರಬೇಕು.
ವಯೋಮಿತಿಯಲ್ಲಿ ಸಡಿಲಿಕೆ
ಎಸ್.ಟಿ/ ಎಸ್.ಸಿ ಅಭ್ಯರ್ಥಿಗಳಿಗೆ ಐದು ವರ್ಷ,  ಒ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ವಿಧಾನ

ಪಿಎಸ್ಟಿ ಮತ್ತು ಪಿ ಇ ಟಿ ಯಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಆಬ್ಜೆಕ್ಟಿವ್ ಟೈಪ್ ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆಯಾಗಿದ್ದು 2 ಗಂಟೆಗಳಲ್ಲಿ ಅಭ್ಯರ್ಥಿಗಳು ಉತ್ತರಿಸಬೇಕು. ಭಾಗ-1 ರಲ್ಲಿ ಸಾಮಾನ್ಯ ಜ್ಞಾನ ಪ್ರಶ್ನೆಗಳಿದ್ದರೆ, ಭಾಗ-2 ರ ಪತ್ರಿಕೆಯು ಆಯಾ ಟ್ರೇಡ್ ಗೆ ಅನ್ವಯಿಸಿದ ಪ್ರಶ್ನೆಗಳನ್ನು ಹೊಂದಿರುತ್ತದೆ. ಇದರಲ್ಲಿ ಸಾಮಾನ್ಯ ಮತ್ತು ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳು ಶೇ.35 ಮತ್ತು ಎಸ್.ಸಿ/ಎಸ್.ಟಿ/ಒ.ಬಿ.ಸಿ ಅಭ್ಯರ್ಥಿಗಳು ಶೇ.33 ಅಂಕ ಪಡೆಯುವುದು ಕಡ್ಡಾಯ. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಟ್ರೇಡ್ ಟೆಸ್ಟ್ ಜೊತೆಗೆ ಮೆಡಿಕಲ್ ಟೆಸ್ಟ್ ಕೂಡ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಗಳನ್ನು ಸಿ.ಆರ್.ಪಿ.ಎಫ್ ವೆಬ್ ಸೈಟ್ ನ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ

ಅರ್ಜಿ ಶುಲ್ಕ

ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವು ಅನ್ವಯಿಸುವುದಿಲ್ಲ. ಉಳಿದೆಲ್ಲ ವರ್ಗಗಳ ಅಭ್ಯರ್ಥಿಗಳಿಗೆ ರೂ.100 /-.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೆ ದಿನ 01 /03 /2017
ಹೆಚ್ಚಿನ ಮಾಹಿತಿಗಾಗಿ http ://crpf .nic .in /recruitment .htm

ಕರ್ನಾಟಕ ರಾಜ್ಯದ ನೋಡಲ್ ಕೇಂದ್ರದ ವಿಳಾಸ
THE DIGP , GROUP CENTRE , CRPF , YELAHANKA , BANGALORE , KARNATAKA -64

English summary
Central Reserve Police Force (CRPF) will conduct an examination for Recruitment of Constable (Technical & Tradesmen)

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia