ಸಿ ಆರ್ ಪಿ ಎಫ್ 240 ಹುದ್ದೆಗಳ ನೇಮಕಾತಿ

Posted By:

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ನಲ್ಲಿ ಖಾಲಿ ಇರುವ  ಸಬ್ ಇನ್ಸ್ ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್  ಮತ್ತು ಕಾನ್ಸ್ಟೇಬಲ್ ಸೇರಿದಂತೆ ಒಟ್ಟು 240 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 6ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು ಮೇ 05 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿರುತ್ತದೆ.

240 ಹುದ್ದೆಗಳ ನೇಮಕಾತಿ

ಹುದ್ದೆಯ ವಿವರ

ಎಸ್ ಐ-135

ಎ ಎಸ್ ಐ-03

ಕಾನ್ಸ್ಟೇಬಲ್/ಮೆಸನ್-65

ಕಾನ್ಸ್ಟೇಬಲ್/ಎಲೆಕ್ಟ್ರಿಷನ್-14

ಕಾನ್ಸ್ಟೇಬಲ್/ ಪ್ಲಂಬರ್-11

ಕಾನ್ಸ್ಟೇಬಲ್/ ಕಾರ್ಪೆಂಟರ್-6

ಕಾನ್ಸ್ಟೇಬಲ್/ ಪೈಂಟರ್-6

ಒಟ್ಟು ಹುದ್ದೆ: 240

ವೇತನ ಶ್ರೇಣಿ

ಎಸ್ ಐ: ರೂ.35400-81200/-

ಎ ಎಸ್ ಐ: ರೂ.29200-66600/-

ಕಾನ್ಸ್ಟೇಬಲ್: ರೂ.21700-50000

ವಿದ್ಯಾರ್ಹತೆ

1. ಎಸ್ ಐ ಹುದ್ದೆ

ಸಬ್ ಇನ್ಸ್ ಪೆಕ್ಟರ್ (ಎಸ್ ಐ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಯಗಳಲ್ಲಿ ಮೂರು ವರ್ಷದ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.

2. ಎ ಎಸ್ ಐ ಹುದ್ದೆ

ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ಸಿವಿಲ್/ಮೆಕಾನಿಕಲ್ ಇಂಜಿನಿಯರಿಂಗ್ ವಿಷಯಗಳಲ್ಲಿ ಪದವಿ ಪಡೆದಿರಬೇಕು

3. ಕಾನ್ಸ್ ಟೇಬಲ್

ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು ಹಾಗೂ ಐಟಿಐನಲ್ಲಿ ಒಂದು ವರ್ಷ ಅನುಭವ ಹೊಂದಿರಬೇಕು

ವಯೋಮಿತಿ

ಎಸ್ ಐ ಹುದ್ದೆ 21 ರಿಂದ 30 ವರ್ಷ

ಎ ಎಸ್ ಐ ಹುದ್ದೆ: 18 ರಿಂದ 25 ವರ್ಷ

ಕಾನ್ಸ್ ಟೇಬಲ್: 18 ರಿಂದ 23 ವರ್ಷ

(ವಯೋಮಿತಿ ಸಡಿಲಿಕೆ ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷ ಇರಲಿದೆ)

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಪಾವತಿಸಬಹುದಾಗಿದೆ. ಅಭ್ಯರ್ಥಿಗಳು ಸಿ ಆರ್ ಪಿ ಎಫ್ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಆನ್-ಲೈನ್ ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ crpfindia.com

 ಅರ್ಜಿ ಶುಲ್ಕ

 • ಸಬ್ ಇನ್ಸ್ ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಸಾಮಾನ್ಯ ಹಾಗೂ ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 200 ರು. ನಿಗದಿ ಮಾಡಲಾಗಿದೆ.
 • ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಹಾಗೂ ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 100 ರು. ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ.
 • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಶುಲ್ಕಗಳನ್ನು ಆನ್-ಲೈನ್ ಮತ್ತು ಆಫ್-ಲೈನ್ ಮೂಲಕ ಪಾವತಿಸಬಹುದಾಗಿದೆ. ಶುಲ್ಕ ಪಾವತಿಸಲು ಕೊನೆಯ ದಿನಾಂಕ 01-05-2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-05-2017

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ ಮೆರಿಟ್ ಮಟ್ಟಿ ಪ್ರಕಟಿಸಲಾಗುತ್ತದೆ.

ಪರೀಕ್ಷಾ ದಿನಾಂಕ: 30-07-2017

ಹೆಚ್ಚಿನ ಮಾಹಿತಿಗಾಗಿ crpfindia.com ಗಮನಿಸಿ

  English summary
  ONLINE RECRUITMENT FOR THE POST OF SI(OVERSEER) ASI/ Draughtsman & CT/PIONEER (Mason/Plumber/Electrician/Carpenter/Painter) IN CRPF FOR VACANCY YEAR 2016-17

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia