ಸಿ ಅರ್ ಪಿ ಎಫ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿ ಆರ್ ಪಿ ಎಫ್)ಖಾಲಿ ಇರುವ ವಿವಿಧ ಒಟ್ಟು 661 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್), ವೈದ್ಯಕೀಯ ಅಧಿಕಾರಿ (ಸಹಾಯಕ ಕಮಾಂಡೆಂಟ್) ಮತ್ತು ದಂತ ವೈದ್ಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ದಿನಾಂಕ 7/7/2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

  • ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್)-232
  • ವೈದ್ಯಕೀಯ ಅಧಿಕಾರಿ (ಸಹಾಯಕ ಕಮಾಂಡೆಂಟ್)-429
  • ದಂತ ವೈದ್ಯ (ಸಹಾಯಕ ಕಮಾಂಡೆಂಟ್)-01

ಸಿ ಅರ್ ಪಿ ಎಫ್ ನೇಮಕಾತಿ

ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್)

ವಿದ್ಯಾರ್ಹತೆ: ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಲೋಪಥಿಕ್ ಸಿಸ್ಟಮ್ ಹಾಗೂ ಮೆಡಿಷನ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲಮೋ ಪೂರ್ಣಗೊಳಸಿರಬೇಕು.
ವೇತನ ಶ್ರೇಣಿ: ರೂ.67700 ರಿಂದ 208700/-
ವಯೋಮಿತಿ: ಗರಿಷ್ಠ 40 ವರ್ಷ

ವೈದ್ಯಕೀಯ ಅಧಿಕಾರಿ (ಸಹಾಯಕ ಕಮಾಂಡೆಂಟ್) ಹುದ್ದೆ

ವಿದ್ಯಾರ್ಹತೆ: ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಲೋಪಥಿಕ್ ಸಿಸ್ಟಮ್ ಹಾಗೂ ಮೆಡಿಷನ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲಮೋ ಪೂರ್ಣಗೊಳಸಿರಬೇಕು.
ವೇತನ ಶ್ರೇಣಿ: 56100 ರಿಂದ 177500 ತಿಂಗಳಿಗೆ.
ವಯೋಮಿತಿ: ಗರಿಷ್ಠ 30 ವರ್ಷ.

ದಂತ ವೈದ್ಯ (ಸಹಾಯಕ ಕಮಾಂಡೆಂಟ್)

ವಿದ್ಯಾರ್ಹತೆ: ದಂತ ವೈದ್ಯಕೀಯದಲ್ಲಿ ಪದವಿ ಹೊಂದಿದ್ದು, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿಕೊಂಡಿರಬೇಕು ಹಾಗೂ ಶೇ.೬೦ ಅಂಕಗಳೊಂದಿಗೆ ಬಿಡಿಎಸ್ ಪೂರ್ಣಗೊಳಿಸಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ.

ಆಯ್ಕೆ ವಿಧಾನ

ಮೇಲಿನ ಎರಡು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ನಿಗದಿಪಡಿಸಿರುವ ಅರ್ಜಿ ನಮೂನೆಯನ್ನು ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿ, ಈ ಜಾಹೀರಾತು ಪ್ರಕಟವಾದ ದಿನದಿಂದ 30 ದಿನಗಳೊಳಗೆ ಕಛೇರಿಗೆ ತಲುಪಿಸತಕ್ಕದ್ದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.400/-
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
  • ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಬಹುದಾಗಿದ್ದು, "DIG (Adm), Directorate general, CRPF payable at state bank of India" ಸಂದಾಯವಾಗುವಂತೆ ಪಾವತಿಸುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ

Deputy Inspector general,
Medical officer, Selection board,
(CAPFs), 2016 HQ DIG CRPF,
block no 01, CGO complex,
Lodhi road, New Delhi

ಇನ್ನು ಹೆಚ್ಚಿನ ಮಾಹಿತಿಗಾಗಿ crpf.nic.in ಗಮನಿಸಿ

English summary
Applications are invited from Indian Citizens (Male & Female) for appointment to Group ‘A’ post of Specialist Medical Officers (Deputy Commandant), Medical Officers (Assistant Commandant) and Dental Surgeon(Assistant Commandant) CRPF

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia