ಸಿಯುಸಿಇಟಿ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?

ಈ ಪ್ರವೇಶ ಪರೀಕ್ಷೆಗೆ ಹೇಗೆ ತಯರಾಗಬೇಕು ಎಂಬ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ10 ವಿಶ್ವವಿದ್ಯಾನಿಲಯ ಕೇಂದ್ರಗಳು ಸೇರಿ ಈ CUCET ಪರೀಕ್ಷೆಯನ್ನ ಆಯೋಜಿಸುತ್ತವೆ.ಸೆಂಟ್ರಲ್ ಯೂನಿವರ್ಸಿಟಿ ಆಫ್ ಹರ್ಯಾಣ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಜಮ್ಮು

By Nishmitha B

UG/integrated program/BVoc, ಉನ್ನತ ಶಿಕ್ಷಣದ ಪ್ರೋಗ್ರಾಂ ಮತ್ತು ರಿಸರ್ಚ್ ಪ್ರೋಗ್ರಾಂ ಗೆ ಸಂಬಂಧಪಟ್ಟಂತೆ 10 ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಇರುವ ಪರೀಕ್ಷೆಯೇ CUCET ಪರೀಕ್ಷೆ. ಈ ಪರೀಕ್ಷೆಯನ್ನ ದ್ವಿತೀಯ ಪಿಯು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಬರೆಯಬಹುದಾಗಿದೆ

10 ವಿಶ್ವವಿದ್ಯಾನಿಲಯ ಕೇಂದ್ರಗಳು ಸೇರಿ ಈ CUCET ಪರೀಕ್ಷೆಯನ್ನ ಆಯೋಜಿಸುತ್ತವೆ. ಸೆಂಟ್ರಲ್ ಯೂನಿವರ್ಸಿಟಿ ಆಫ್ ಹರ್ಯಾಣ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಜಮ್ಮು, ಸೆಂಟ್ರಲ್ ಯೂನಿವರ್ಸಿಟಿ ಆಫ್ ಜಾರ್ಖಾಂಡ್, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕಾಶ್ಮೀರ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಕೇರಳ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಪಂಜಾಬ್, ಸೆಂಟ್ರಲ್ ಯೂನಿವರ್ಸಿಟಿ ಆಫ್ ರಾಜಸ್ತಾನ, ಸೆಂಟ್ರಲ್ ಯೂನಿವರ್ಸಿಟಿ ಆಫ್ ಸೌತ್ ಬಿಹಾರ್ ಮತ್ತು ಸೆಂಟ್ರಲ್ ಯೂನಿವರ್ಸಿಟಿ ಆಫ್ ತಮಿಳುನಾಡು ವಿಶ್ವವಿದ್ಯಾನಿಲಗಳು ಸೆಂಟ್ರಲ್ ಯೂನಿವರ್ಸಿಟಿ ಆಫ್ ರಾಜಸ್ತಾನ ವಿಶ್ವವಿದ್ಯಾನಿಯದ ಅಡಿಯಲ್ಲಿ ಬರುತ್ತದೆ

CUCET ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ

ಸಿಯುಸಿಇಟಿ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಟೆಪ್ 1: ಅಭ್ಯರ್ಥಿಗಳು CUCET ಆಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ

ಸಿಯುಸಿಇಟಿ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಟೆಪ್ 2: ಅಪ್ಲೈ ಆನ್‌ಲೈನ್‌ಗೆ ಕ್ಲಿಕ್ ಮಾಡಿ. ಬಳಿಕ ಅಲ್ಲಿ ಕೇಳಿರುವ ಪ್ರಮುಖ ಮಾಹಿತಿ ನೀಡಿ ಲಾಗ್ ಇನ್ ಆಗಿ

ಸಿಯುಸಿಇಟಿ ಪರೀಕ್ಷೆ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಟೆಪ್ 3: ಸ್ಕ್ರೀನ್ ಶಾಟ್ ನಲ್ಲಿ ಕಾಣಿಸುತ್ತಿರುವಂತೆ New Registration ಬಟನ್ ಕ್ಲಿಕ್ ಮಾಡಿ

CUCET ಪರೀಕ್ಷೆ ವೇಳಾಪಟ್ಟಿ ಹೀಗಿದೆ

ಎಲ್ಲಾ ವಿಷಯಕ್ಕೆ ಸಂಬಂಧಪಟ್ಟಂತೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕಫೆಬ್ರವರಿ19, 2018
ಎಲ್ಲಾ ವಿಷಯಕ್ಕೆ ಸಂಬಂಧಪಟ್ಟಂತೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 26, 2018
ಚಲನ್ ಜನರೇಟ್ ಮಾಡಲು ಕೊನೆಯ ದಿನಾಂಕ 24 ಗಂಟೆ. ಮಾರ್ಚ್ 26 ರಿಂದ ಮಾರ್ಚ್ 27 ರವರೆಗೆ
ಪ್ರವೇಶ ಪತ್ರ ನೀಡುವ ದಿನಾಂಕ ಎಪ್ರಿಲ್ 13, 2018
ಪರೀಕ್ಷೆ ದಿನಾಂಕ ಎಪ್ರಿಲ್ 28, 29
ಉತ್ತರ ಅಪ್‌ಲೋಡ್ ಮಾಡುವ ದಿನಾಂಕ ಎಪ್ರಿಲ್ 30
ಫಲಿತಾಂಶ ಮೇ 25

CUCET - 2018 ಪ್ರಶ್ನಾಪತ್ರಿಕೆ ಮಾದರಿ ಹೀಗಿದೆ
100 ಆಬ್ಜೆಕ್ಟೀವ್ ಟೈಪ್‌ನ ಪ್ರಶ್ನೆಗಳನ್ನ ನೀಡಲಾಗುತ್ತದೆ. ಈ ಪ್ರಶ್ನಾಪತ್ರಿಕೆಯನ್ನ ಎರಡು ವಿಧಗಳನ್ನಾಗಿ ಮಾಡಿದ್ದು, 2 ಗಂಟೆಯ ಪರೀಕ್ಷಾವಧಿ ನೀಡಲಾಗಿದೆ

ಪಾರ್ಟ್ A:
ಇಂಗ್ಲೀಷ್, ಸಾಮಾನ್ಯ ಅರಿವು, ಗಣಿತಾತ್ಮಕ ಯೋಗ್ಯತಾ ಮತ್ತು ವಿಶ್ಲೇಷಣಾ ಚಾತುರ್ಯ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ 25 ಪ್ರಶ್ನೆಗಳನ್ನ ಈ ಪೇಪರ್‌ನಲ್ಲಿ ಕೇಳಲಾಗಿರುತ್ತದೆ

ಪಾರ್ಟ್ B: ಅಭ್ಯರ್ಥಿಗಳ ಡೊಮೇನ್ ಜ್ಞಾನದ ಮೇಲೆ 75 ಪ್ರಶ್ನೆಯನ್ನ ಈ ಪತ್ರಿಕೆಯಲ್ಲಿ ಕೇಳಲಾಗಿರುತ್ತದೆ. ಪ್ರತಿಯೊಂದು ಪ್ರಶ್ನೆಗೂ 1 ಅಂಕವಿದ್ದು, ತಪ್ಪು ಉತ್ತರಿಸಿದ್ದಲ್ಲಿ 0.25 ಅಂಕ ಕಳೆಯಲಾಗುವುದು

ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಲು ಪಾಲಿಸಬೇಕಾದ ಸ್ಟೆಪ್ಸ್

1 ಇಂಗ್ಲೀಷ್ ಪ್ರಶ್ನಾಪತ್ರಿಕೆ ಬಗ್ಗೆ ಹೇಳುವುದಾದರೆ, ಈ ಸಬ್‌ಜೆಕ್ಟ್ ನ ವ್ಯಾಕರಣದ ಬಗ್ಗೆ ಮೊದಲಿಗೆ ಚೆನ್ನಾಗಿ ಅರ್ಥಮಾಡಿಕೊಳ್ಳಿ

2 ಮ್ಯಾಗಜಿನ್, ಸುದ್ದಿ ಪತ್ರಿಕೆಗಳನ್ನ ಪ್ರತಿದಿನ ಓದುತ್ತಾ ಇರಿ. ಇದರಿಂದ ನಿಮ್ಮ ಸಾಮಾನ್ಯ ಜ್ಞಾನ ಯಾವಾಗಲೂ ಅಪ್‌ಡೆಟ್ ಆಗಿರುತ್ತದೆ. ಪರೀಕ್ಷೆಯಲ್ಲ ಪ್ರಚಲಿತ ವಿದ್ಯಾಮಾನದ ಬಗ್ಗೆ ಪ್ರಶ್ನೆಗಳನ್ನು ಕೇಳುವುದುರಿಂದ ನೀವು ಸದಾ ನ್ಯೂಸ್‌ ಬಗ್ಗೆನೂ ಗಮನಕೊಡಬೇಕು

3 ಪರೀಕ್ಷೆ ಮಾದರಿ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅದಕ್ಕಾಗಿ ಈ ಹಿಂದಿನ ಪ್ರಶ್ನಾಪತ್ರಿಕೆಯನ್ನ ಸ್ಟಡಿ ಮಾಡಿ. ಟೈಂ ಸೆಟ್ ಮಾಡಿ ಕಳೆದ ವರ್ಷದ ಪ್ರಶ್ನಾಪತ್ರಿಕೆಗೆ ಉತ್ತರಿಸಿ. ಇದರಿಂದ ನಿಮಗೆ ಟೈಂ ಹೇಗೆ ಮ್ಯಾನೇಜ್‌ಮೆಂಟ್ ಮಾಡಬಹುದು ಎಂಬುವುದು ತಿಳಿಯುತ್ತದೆ

4 ಒಳ್ಳೆಯ ಪುಸ್ತಕಗಳನ್ನೇ ರೆಫರ್ ಮಾಡಿ. ನಿಮ್ಮದೇ ಒಂದು ಶಾರ್ಟ್ ನೋಟ್ ಬುಕ್ ಕೂಡಾ ತಯಾರು ಮಾಡಿಕೊಳ್ಳಿ

5 ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ವಿದ್ಯಾರ್ಥಿಗಳು ಈ ಮೇಲೆ ಹೇಳಿದ ಸ್ಟೆಪ್ಸ್ ಫಾಲೋ ಮಾಡಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಬಹುದು

For Quick Alerts
ALLOW NOTIFICATIONS  
For Daily Alerts

English summary
The CUCET test is conducted for the students of class 12 and bachelor's and master's degree holders for admission into the UG/integrated program/BVoc, postgraduate program and the research program respectively in the below 10 universities.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X