ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ

Posted By:

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆಯಲ್ಲಿ ಖಾಲಿ ಇರುವ ಬೋಧಕೇತರ ಹುದ್ದೆಗಳಿಗೆ ಭಾರತೀಯ ನಾಗರೀಕರಿಂದ ನಿಗದಿಪಡಿಸಿದ ನಮೂನೆ 8(ಎಂಟು) ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರು

1.) ಸಹಾಯಕ ಕುಲಸಚಿವ/ ನಿರ್ಬಂಧಕ -1 ಹುದ್ದೆ (ಮೀಸಲಾತಿ ಇರುವುದಿಲ್ಲ, ಮೆರಿಟ್ ಆಧಾರದಲ್ಲಿ ತುಂಬಲಾಗುವುದು)
ವೇತನ ಶ್ರೇಣಿ - ರೂ.28,100 -50,100 /-
2.) ಕಛೇರಿ ಅಧೀಕ್ಷಕ -1 ಹುದ್ದೆ (ಮೀಸಲಾತಿ ಇರುವುದಿಲ್ಲ, ಮೆರಿಟ್ ಆಧಾರದಲ್ಲಿ ತುಂಬಲಾಗುವುದು)
ವೇತನ ಶ್ರೇಣಿ- ರೂ.22,800 -43,200 /-

3.) ಪ್ರಥಮ ದರ್ಜೆ ಸಹಾಯಕ-05 ಹುದ್ದೆಗಳು ಎಸ್.ಸಿ(ಇತರೆ)-1, ಸಾಮಾನ್ಯ(ಇತರೆ)-1, ಎಸ್.ಟಿ(ಇತರೆ)-1, ಸಾಮಾನ್ಯ(ಮ)-1, ಪ್ರವರ್ಗ-1(ಇತರೆ) -1
ವೇತನ ಶ್ರೇಣಿ
ರೂ.16,000 -29,600 /-

ಶಿವಗಂಗೋತ್ರಿಯಲ್ಲಿ ಬೋಧಕೇತರ ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ

1. ಸಹಾಯಕ ಕುಲಸಚಿವ/ ನಿರ್ಬಂಧಕ

 • ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.(ಶೇ.೫೫ ಅಂಕಗಳೊಂದಿಗೆ)
 • ಶಿಕ್ಷಣ ಕ್ಷೇತ್ರದ ಆಢಳಿತ ವಿಭಾಗದಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಇರುವವರಿಗೆ ಆಧ್ಯತೆ ನೀಡಲಾಗುವುದು.

2. ಅಧೀಕ್ಷಕ

 • ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಗಳಿಸಿರಬೇಕು. (ಕನಿಷ್ಠ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರಬೇಕು)
 • ಪ್ರಾಥಮಿಕ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
 • ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಠ 4 ವರ್ಷಗಳ ಆಢಳಿತ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.

3.ಪ್ರಥಮ ದರ್ಜೆ ಸಹಾಯಕ

 • ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ಸ್ನಾತಕ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
 • ಪ್ರಾಥಮಿಕ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಿತಿ

ಅಭ್ಯರ್ಥಿಯು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಹಾಗೂ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು.

 • ಪ.ಜಾತಿ, ಪ.ಪಂಗಡ ಹಾಗೂ ಪ್ರವರ್ಗ-1, ಹಾಗೂ ಅಭ್ಯರ್ಥಿಗಳಿಗೆ 40 ವರ್ಷಗಳು.
 • ಪ್ರವರ್ಗ-2ಎ,2ಬಿ,3ಎ,3ಬಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 38 ವರ್ಷಗಳು
 • ಇತರೆ ಸಾಮಾನ್ಯ ಅಭ್ಯರ್ಥಿಗಳು 35 ವರ್ಷಗಳನ್ನು ವಯೋಮಿತಿಯನ್ನು ಮೀರಿರಬಾರದು.

ಅಭ್ಯರ್ಥಿಗಳಿಗೆ ಸಾಮಾನ್ಯ ಮಾಹಿತಿ ಮತ್ತು ಸೂಚನೆಗಳು

 1.  ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಕುಲಸಚಿವರು, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ ದಾವಣಗೆರೆ-577002 ಇವರಿಂದ ಬೋಧಕೇತರ ಹುದ್ದೆಗಳ ಅರ್ಜಿ ಶುಲ್ಕ ರೂ.500 /- (ಮರುಪಾವತಿಸಲಾಗದ) ಗಳನ್ನು ಪಾವತಿಸಿ ಅರ್ಜಿಯನ್ನು ಪಡೆದುಕೊಳ್ಳುವುದು. ಎಸ್.ಸಿ/ಎಸ್.ಟಿ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಶೇ.50 % ವಿನಾಯಿತಿ ಇರುತ್ತದೆ. ಅಲ್ಲದೆ ಅಂಗವಿಕಲ ಮತ್ತು ದೃಷ್ಟಿಮಾಂದ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ. ನಿಗದಿತ ಶುಲ್ಕವನ್ನು ಹಣಕಾಸು ಅಧಿಕಾರಿಗಳು, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ ಇವರಿಗೆ ಸಂದಾಯವಾಗುವಂತೆ ಬ್ಯಾಂಕ್ ಡಿಡಿಯನ್ನು ಸಲ್ಲಿಸುವುದರ ಮೂಲಕ ಅಥವಾ ದಾವಣಗೆರೆ ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಚಲನ್ ಮೂಲಕ ಶುಲ್ಕವನ್ನು ತುಂಬುವುದು. ಹಾಗೂ ಅದರ ಮೇಲೆ ------------------------- ಹುದ್ದೆಗಾಗಿ ಅರ್ಜಿ ಶುಲ್ಕವೆಂದು ನಮೂದಿಸುವುದು.

ಸೂಚನೆ

 • ಪೋಸ್ಟಲ್ ಆರ್ಡರ್‍ಗಳು, ಮನಿ ಆರ್ಡರ್‍ಗಳು ಹಾಗೂ ಬ್ಯಾಂಕ್ ಚೆಕ್‍ಗಳನ್ನು ಸ್ವೀಕರಿಸಲಾಗುವುದಿಲ್ಲ.
 • ಭರ್ತಿಮಾಡಿದ ಅರ್ಜಿಯೊಂದಿಗೆ 12"X6" ಅಳತೆಯ ಸ್ವ-ವಿಳಾಸವುಳ್ಳ ಒಂದು ಲಕೋಟೆಯನ್ನು ಇಡುವುದು.
 • ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ ಆದ http://davangereuniversity.ac.in/index.html ನಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿಮಾಡಿ ನಿಗದಿತ ಶುಲ್ಕದೊಂದಿಗೆ ಸಲ್ಲಿಸುವುದು.
 • ಭರ್ತಿಮಾಡಿದ ಅರ್ಜಿಯನ್ನು ದಿನಾಂಕ: 01-04-2017ರ ಸಂಜೆ 5-00ಗಂಟೆಯ ಒಳಗಾಗಿ ಕುಲಸಚಿವರು.ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ- 577002 ಇವರಿಗೆ ತಲುಪಿಸುವುದು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
 • ಅರ್ಜಿಯೊಂದಿಗೆ ದೃಢೀಕರಿಸಿ ಲಗತ್ತಿಸಿದ ಶೈಕ್ಷಣಿಕ ಪ್ರಮಾಣ ಪತ್ರಗಳು, ಬಯೋಡಾಟಾ, ಜಾತಿ ಪ್ರಮಾಣ ಪತ್ರ, ಅಂಕಪಟ್ಟಿಗಳು ಹಾಗೂ ಅವುಗಳನ್ನು ಹಿಂದಿರುಗಿಸಲಾಗುವುದಿಲ್ಲ.
 • ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ತಮ್ಮ ನೇಮಕಾತಿ ಪ್ರಾಧಿಕಾರದ ಮುಖಾಂತರ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ವಿಶ್ವವಿದ್ಯಾಲಯಕ್ಕೆ ತಲುಪುವಂತೆ ಸಲ್ಲಿಸುವುದು.
 • ತಡವಾಗಿ ತಲುಪಿದ ಅಪೂರ್ಣ ಹಾಗೂ ಎಂಟು ಸೆಟ್‍ಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಲಾಗುವುದು. ಹಾಗೂ ಈ ಬಗೆಗೆ ಅಭ್ಯರ್ಥಿಗೆ ಯಾವುದೇ ಮಾಹಿತಿಯನ್ನು ತಿಳಿಸಲಾಗುವುದಿಲ್ಲ.
 • ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವುದು.
 • ಸಂದರ್ಶನಕ್ಕೆ ಹಾಜರಾಗುವ ಅಥವಾ ನೇಮಕಾತಿಯ ನಂತರ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ಸಂದರ್ಭದಲ್ಲಿ ದಿನಭತ್ಯೆ/ಪ್ರಯಾಣ ಭತ್ಯೆಯನ್ನು ವಿಶ್ವವಿದ್ಯಾನಿಲಯವು ಭರಿಸುವುದಿಲ್ಲ.
 • ಆಯ್ಕೆಯಾದ ಅಭ್ಯರ್ಥಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣ, ದಾವಣಗೆರೆ ಚಿತ್ರದುರ್ಗ ಜಿಲ್ಲೆಯ ಸ್ನಾತಕೋತ್ತರ ಕೇಂದ್ರ ಹಾಗೂ ವಿಶ್ವವಿದ್ಯಾನಿಲಯದ ಘಟಕ ಕಾಲೇಜು ದಾವಣಗೆರೆ ಇಲ್ಲಿ ಸೇವೆ ಸಲ್ಲಿಸಲು ಸಿದ್ದರಿರಬೇಕು.
 • ಆಯ್ಕೆಯಾದ ಅಭ್ಯರ್ಥಿಗಳಿಗೆ ಸೇವಾ ಪೂರ್ವ ಪರೀಕ್ಷಾವಧಿಯು ಎರಡು ವರ್ಷಗಳಾಗಿರುತ್ತದೆ. ವಿಶ್ವವಿದ್ಯಾಲಯವು ಬಯಸಿದ್ದಲ್ಲಿ ಅದನ್ನು ಮುಂದೂಡಬಹುದು.
 • ವಿಶ್ವವಿದ್ಯಾಲಯವು ನೇಮಕಾತಿ ಅಧಿಸೂಚನೆಯಲ್ಲಿ ಕಾಣಿಸಲಾದ ಹುದ್ದೆಗಳನ್ನು ತುಂಬುವ ಅಥವಾ ತುಂಬದೇ ಇರುವ ಅಧಿಕಾರ ಹಕ್ಕನ್ನು ಕಾಯ್ದಿರಿಸಿರುತ್ತದೆ.
 • ನಿಗದಿತ ಅರ್ಜಿ ನಮೂನೆಯೊಂದಿಗೆ ನೀಡಲಾದ ಬಯೋಡಾಟಾದ ನಮೂನೆಯನ್ನು ಜಾಗರೂಕತೆಯಿಂದ ಭರ್ತಿಮಾಡಿ ಅರ್ಜಿ ನಮೂನೆ 08 ಸೆಟ್‍ಗಳಿಗೆ ತಪ್ಪದಂತೆ ಲಗತ್ತಿಸಬೇಕು.
 • ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಅಭ್ಯರ್ಥಿಯ ಅಭ್ಯರ್ಥಿತನವನ್ನು ಅನರ್ಹಗೊಳಿಸಲಾಗುವುದು

ಇದನ್ನು ಗಮನಿಸಿ: ದಾವಣಗೆರೆ ವಿಶ್ವವಿದ್ಯಾನಿಲಯ: ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ

                    ದಾವಣಗೆರೆ ವಿಶ್ವವಿದ್ಯಾಲದಿಂದ 2017ನೇ ಸಾಲಿನ ಪ್ರವೇಶ ಪ್ರಕಟ

  English summary
  davanagere university non teaching recruitment-2017

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia