ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ

Posted By:

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2017-18 ಸಾಲಿಗೆ ಅವಶ್ಯವಿರುವ ಅತಿಥಿ ಉಪನ್ಯಾಸಕರುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚುವರಿಯಾಗಿ ಉಳಿದ ಕಾರ್ಯಭಾರದ ಭೋದನೆಗಾಗಿ ಅಗತ್ಯತೆ ಮೇರೆಗೆ (against the workload and not against the sanctioned posts) ಅವಶ್ಯಕತೆಯ ಅವಧಿಗೆ ಮಾತ್ರ ಅತಿಥಿ ಉಪನ್ಯಾಸಕರು / ಸಹಾಯಕ ಉಪನ್ಯಾಸಕರನ್ನು ಅಹ್ವಾನಿಸಲಾಗಿದೆ.

ಅರ್ಹತೆ

ಯು.ಜಿ.ಸಿ ನಿಯಮಗಳ ಪ್ರಕಾರ (ಪಿಹೆಚ್.ಡಿ/ನೆಟ್/ಸ್ಲೆಟ್) ಅರ್ಹತೆಯನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಧಾರವಾಡ ವಿವಿ ಅತಿಥಿ ಉಪನ್ಯಾಸಕರ ನೇಮಕಾತಿ

ಅರ್ಜಿ ಸಲ್ಲಿಕೆ

ಸ್ನಾತಕೋತ್ತರ ವಿಭಾಗಗಳಿಗೆ ಹಾಗೂ ಸ್ನಾತಕೋತ್ತರ ಕೇಂದ್ರಗಳಿಗೆ ಬೇಕಾಗುವ ಅತಿಥಿ /ಸಹಾಯಕ ಉಪನ್ಯಾಸಕರ ವಿವರಕ್ಕಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್ ನಿಂದ ಮಾಹಿತಿಯನ್ನು ಪಡೆದು ಅರ್ಜಿಸಲ್ಲಿಸಲು ಸಹ ತಿಳಿಯಪಡಿಸಲಾಗಿದೆ.

ಸೂಕ್ತ ಮಾಹಿತಿಯೊಂದಿಗೆ ಭರ್ತಿಮಾಡಿದ ಅರ್ಜಿಯನ್ನು, ಅಗತ್ಯ ದೃಡೀಕೃತ ಅಡಕಗಳು ಹಾಗೂ ವಿತ್ತಾಧಿಕಾರಿಗಳು ಕವಿವಿ, ಧಾರವಾಡ ಇವರ ಹೆಸರಿನಲ್ಲಿ ಪಡೆದ ರೂ300/- (ರೂ. 150/-ಪಜಾ/ಪ.ಪಂ/ಪ್ರ-1)ರ ನಿರ್ವಹಣಾ ಶುಲ್ಕದ ಹುಂಡಿಯೊಂದಿಗೆ

ದಿನಾಂಕ: 15.07.2017ರ ಒಳಗಾಗಿ, ಸಂಬಂಧಿಸಿದ ವಿಭಾಗದಲ್ಲಿ ಸಲ್ಲಿಸುವುದು.

ಆಯ್ಕೆ ಪ್ರಕ್ರಿಯೆ

  • ಅಭ್ಯರ್ಥಿಗಳನ್ನು ಸಂದರ್ಶನ/ಸಮಾಲೋಚನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
  • ಸಮಾಲೋಚನೆ/ಸಂದರ್ಶನದ ದಿನಾಂಕ ಮತ್ತು ಸಮಯವನ್ನು ಅಭ್ಯರ್ಥಿಗಳು ನೀಡಿದ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ ಮುಖಾಂತರ ಅಥವಾ ವಿದ್ಯಾಮಂಡಳ ವಿಭಾಗ(ಸ್ನಾತಕೋತ್ತರ) ಕವಿವಿಯಿಂದ ಕಚೇರಿ ವೇಳೆಯಲ್ಲಿ ಪಡೆಯುವುದು.

ಅತಿಥಿ ಉಪನ್ಯಾಸಕರ ಹುದ್ದೆಗಳ ವಿವರಗಳಿಗಾಗಿ ಈ ಪಿಡಿಎಫ್ ಫೈಲ್ ಗಮನಿಸಿ

English summary
KARNATAKA UNIVERSITY APPLICATION FOR INVITING AS GUEST FACULTY/TEACHING ASSISTANTS AT PG DEPT./PG CENTRE/COLLEGE FOR THE YEAR 2017-18.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia