ಜಿಲ್ಲಾ ನ್ಯಾಯಾಧೀಶರುಗಳ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

Posted By:

ಕರ್ನಾಟಕ ನ್ಯಾಯಾಂಗ ಸೇವೆ (ನೇಮಕಾತಿ), ನಿಯಮ 2004 ಮತ್ತು ತಿದ್ದುಪಡಿ ನಿಯಮಗಳು 2011 , 2015 , 2016 ರಡಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಅನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

60 ನ್ಯಾಯಾಧೀಶರ ನೇಮಕಕ್ಕೆ ಮುಂದಾಗಿದ್ದು ಕಾನೂನು ಪದವಿ ಪಡೆದ ಏಳು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವೇತನ ಶ್ರೇಣಿ: ರೂ.51550-63070/-

ವಯೋಮಿತಿ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 45
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 48

ಜಿಲ್ಲಾ ನ್ಯಾಯಾಧೀಶರುಗಳ ನೇಮಕಾತಿ

ಪ್ರೊಬೇಷನರಿ

ಆಯ್ಕೆಯಾದ ಅಭ್ಯರ್ಥಿಗಳು, ಪ್ರಾರಂಭದಲ್ಲಿ ಎರಡು ವರ್ಷಗಳ ಅವಧಿಗೆ ಅಥವಾ ವಿಸ್ತರಿಸಬಹುದಾದ ಅವಧಿಗೆ ಪ್ರೊಬೇಷನಲ್ಲಿರುತ್ತಾರೆ

ನೇಮಕಾತಿ ವಿಧಾನ

ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿದೆ.

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ಮೌಖಿಕ ಪರೀಕ್ಷೆ

ಉಚ್ಛ ನ್ಯಾಯಾಲಯವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಮುಖ್ಯ ಮತ್ತು ಮೌಖಿಕ) ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಲು ಮಾತ್ರ ಪರಿಗಣಿಸಲಾಗುತ್ತದೆ.

ಆನ್-ಲೈನ್ ಮೂಲಕ ಅರ್ಜಿ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು karnatakajudiciary.kar.nic.in ವೆಬ್ಸೈಟ್ ನ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಅನ್ಲೈನ್ ಹೊರತು ಪಡಿಸಿ ಇತರ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
ಅರ್ಜಿ ಶುಲ್ಕ

ಅರ್ಜಿ ಶುಲ್ಕವನ್ನು ಆನ್-ಲೈನ್ ಆಥವಾ ಚಲನ್ ರೂಪದಲ್ಲಿ ಪಾವತಿಸಬಹುದಾಗಿದೆ.

ಪೂರ್ವಭಾವಿ ಪರೀಕ್ಷೆಗೆ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ-ರೂ.500 /-
  • ಎಸ್.ಸಿ/ಎಸ್.ಟಿ/ಪ್ರ-1 ಅಭ್ಯರ್ಥಿಗಳಿಗೆ-ರೂ.250 /-

ಮುಖ್ಯ ಪರೀಕ್ಷೆಗೆ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ-ರೂ.1000 /-
  • ಎಸ್.ಸಿ/ಎಸ್.ಟಿ/ಪ್ರ-1 ಅಭ್ಯರ್ಥಿಗಳಿಗೆ-ರೂ.750 /-

ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಪ್ರತ್ಯೇಕವಾಗಿ ಶುಲ್ಕ ಪಾವತಿಸಕ್ಕದ್ದು. ಪೂರ್ವಭಾವಿ ಪರೀಕ್ಷೆಗಳ ಫಲಿತಾಂಶ ಹೊರಬಿದ್ದ 15 ದಿನಗಳಲ್ಲಿ ಶುಲ್ಕ ಮಾಡತಕ್ಕದ್ದು.

ಅನ್ಲೈನ್ ಮೂಲಕ ಶುಲ್ಕ ಸಂದಾಯ

ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ ಅರ್ಜಿಯಲ್ಲಿ ತಿಳಿಸಿರುವಂತೆ ಸ್ಟೇಟ್ ಬ್ಯಾಂಕ್ ಇಂಡಿಯಾ ಆನ್ಲೈನ್ ಪೇಮೆಂಟ್ ಗೇಟ್ ವೇ ಮೂಲಕ ಪಾವತಿಸುವುದು.

ಚಲನ್ ಮೂಲಕ ಪಾವತಿಸುವ ವಿಧಾನ

ಆನ್-ಲೈನ್ ಮೂಲಕ ಪಿ.ಡಿ.ಎಫ್ ನಮೂನೆಯಲ್ಲಿ ಚಲನ್ ಅನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ನಿಗದಿಪಡಿಸಿದ ಶುಲ್ಕವನ್ನು ಪಾವತಿ ಮಾಡತಕ್ಕದ್ದು.

ಪ್ರಮುಖ ದಿನಾಂಕಗಳು

ಅರ್ಜಿಗಳನ್ನು ಆನ್ಲೈನ್ ನಲ್ಲಿ ನೋಂದಾಯಿಸಲು/ಸಲ್ಲಿಸಲು ಕೊನೆಯ ದಿನಾಂಕ 30-04-2017 (ರಾತ್ರಿ 11:59 ಗಂಟೆ) ಚಲನ್ ಮೂಲಕ ಶುಲ್ಕ ಸಂದಾಯ ಮಾಡಲು ದಿನಾಂಕ 03-05-2017 ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ: karnatakajudiciary.kar.nic.in ಗಮನಿಸಿ

English summary
direct recruitment of candidates to the post of district judges. candidates can apply before April 30 through online

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia