ದೆಹಲಿ ಮೆಟ್ರೋ ರೈಲ್ವೆ ನಿಗಮ ನೇಮಕಾತಿ: ಜುಲೈ 14ರೊಳಗೆ ಅರ್ಜಿ ಹಾಕಿ

ದೆಹಲಿ ಮೆಟ್ರೋ ರೈಲ್ವೆ ನಿಗಮದಲ್ಲಿ (ಡಿಎಂಆರ್ ಸಿ) ಸೀನಿಯರ್ ಸೆಕ್ಷನ್ ಇಂಜಿನಿಯರ್ ಮತ್ತು ಸೆಕ್ಷನ್ ಇಂಜಿನಿಯರ್ ಹುದ್ದೆಗಳನ್ನು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಕಚೇರಿಯ ವಿಳಾಸಕ್ಕೆ ಜುಲೈ 14,2020ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

ದೆಹಲಿ ಮೆಟ್ರೋ ರೈಲ್ವೆ ನಿಗಮದಲ್ಲಿ ಉದ್ಯೋಗಾವಕಾಶ

ವಿದ್ಯಾರ್ಹತೆ:

ಸೀನಿಯರ್ ಸೆಕ್ಷನ್ ಇಂಜಿನಿಯರ್ ಮತ್ತು ಸೆಕ್ಷನ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರಬೇಕು ಮತ್ತು ವೃತ್ತಿಯಲ್ಲಿ ಅನುಭವನ್ನು ಹೊಂದಿರಬೇಕು.

ವಯೋಮಿತಿ:

ದೆಹಲಿ ಮೆಟ್ರೋ ರೈಲ್ವೆ ನಿಗಮ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜೂನ್ 1,2020ರ ಅನ್ವಯ 58 ರಿಂದ 61 ವರ್ಷ ವಯೋಮಿತಿಯೊಳಗಿನವರಾಗಿರಬೇಕು. ವಯೋಮಿತಿ ಸಡಿಲಿಕೆಯ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಬಹುದು.

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 47,700/- ರಿಂದ 55,800/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸುವ ಬಗೆಗೆ ತಿಳಿಯಲು ಅಧಿಸೂಚನೆಯನ್ನು ಓದಬಹುದು.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯೊಂದಿಗೆ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಜುಲೈ 14,2020ರೊಳಗೆ ಪೋಸ್ಟ್ ಮೂಲಕ ತಲುಪಿಸಬೇಕಿರುತ್ತದೆ. ಅಥವಾ ಅಭ್ಯರ್ಥಿಗಳು [email protected] ವಿಳಾಸಕ್ಕೆ ಮೇಲ್ ಮಾಡುವ ಮೂಲಕ ಜುಲೈ ೧೪ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಕಚೇರಿಯ ವಿಳಾಸ:
Executive Director (HR),
Delhi Metro Rail Corporation Ltd,
Metro Bhawan, Fire Brigade Lane,
Barahamba Road,
New Delhi.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
DMRC invited applications for engineer posts apply before July 14.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X