ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಗೌರವಸೇವೆ ಯೋಜನೆಯಡಿಯಲ್ಲಿ ಗೌರವ ಉಪನ್ಯಾಸಕರ ನೇಮಕಾತಿ

ನಿರುದ್ಯೋಗಿ ಅರ್ಹ ಅಭ್ಯರ್ಥಿಗಳು/ಪದವೀಧರರು/ಶೈಕ್ಷಣಿಕ ಸಂಪನ್ಮೂಲ ಹೊಂದಿರುವವರು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹಾಗೂ ಕಲಿಕಾ ಕೌಶಲ್ಯವನ್ನು ಹೆಚ್ಚಿಸುವ/ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ 2017-18 ಸಾಲಿನ ಫಲಿತಾಂಶವನ್ನು ಉತ್ತಮ ಪಡಿಸಲು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಗೌರವಸೇವೆ" ಈ ಯೋಜನೆಯಡಿಯಲ್ಲಿ ಗೌರವ ಉಪನ್ಯಾಸಕರನ್ನುನೇಮಕ ಮಾಡಿಕೊಳ್ಳಲಾಗುತ್ತಿದೆ.

2017-18 ಸಾಲಿನ ಫಲಿತಾಂಶವನ್ನು ಉತ್ತಮ ಪಡಿಸಲು ಹಾಗೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಸಂವಹನ ಕೌಶಲ್ಯ ಹಾಗೂ ಪರೀಕ್ಷೆಗಳಲ್ಲಿ ಹೆಚ್ಚಿನ ಉತ್ತೀರ್ಣದ ಫಲಿತಾಂಶವನ್ನು ಸಾಧಿಸಲು ಮಾನ್ಯ ಶ್ರೀಯುತ ಸಂತೋಷ್ ಲಾಡ್, ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿಗಳು, ಬಳ್ಳಾರಿ ಇವರು "ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಗೌರವಸೇವೆ" ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಗೌರವ ಉಪನ್ಯಾಸಕರ ನೇಮಕಾತಿ

ಈ ವಿನೂತನ ಯೋಜನೆಯಡಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣತೆ ಸಾಧಿಸುವ ದೃಷ್ಠಿಯಿಂದ ಆಯಾ ವಿಷಯದಲ್ಲಿ ಪರಿಣಿತಿ ಹಾಗೂ ವಿಷಯಜ್ಞಾನ ಹೊಂದಿರುವ ನಿರುದ್ಯೋಗಿ ಅರ್ಹ ಅಭ್ಯರ್ಥಿಗಳು/ಪದವೀಧರರು/ಶೈಕ್ಷಣಿಕ ಸಂಪನ್ಮೂಲ ಹೊಂದಿರುವವರು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹಾಗೂ ಕಲಿಕಾ ಕೌಶಲ್ಯವನ್ನು ಹೆಚ್ಚಿಸುವ/ ಪರೀಕ್ಷೆಯನ್ನು ಯಶಸ್ವಿಯಾಗಿಸುವ ಮತ್ತು ಉತ್ತಮ ಫಲಿತಾಂಶ ಸಾಧಿಸಲು ಶ್ರಮಿಸುವ ಅಭ್ಯರ್ಥಿಗಳು ಸ್ವ-ಇಚ್ಛೆಯ ಮೇರೆಗೆ ಗೌರವ ಸಂಭಾವನೆ ಪಡೆದು ಕಾರ್ಯ ನಿರ್ವಹಿಸಲು ಇಚ್ಛಿಸಿದ್ದಲ್ಲಿ ಈ ಪ್ರಯೋಜನ ಪಡೆಯಬಹುದಾಗಿರುತ್ತದೆ.

ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ವಿಧಾನ

  1. ನಿರುದ್ಯೋಗಿ ಅರ್ಹ ಅಭ್ಯರ್ಥಿಗಳನ್ನು ಅನುಭವದ ಆಧಾರದ ಮೇರೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
  2. ಆಸಕ್ತ ಅಭ್ಯರ್ಥಿಗಳು ಪ್ರೌಢಶಾಲೆಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದ ತಾಲೂಕಿನ ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿಗೆ ಸ್ವ-ವಿವರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.
  3. ಆಸಕ್ತ ಅಭ್ಯರ್ಥಿಗಳು ಆಸಕ್ತ ಅಭ್ಯರ್ಥಿಗಳು ಪದವಿ ಪೂರ್ವ ಕಾಲೇಜುಗಳಿಗೆ ಸಂಬಂಧಿಸಿದಂತೆ ಉಪನಿರ್ದೇಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬಳ್ಳಾರಿ ಇವರಿಗೆ ಸ್ವ_ವಿವರಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.
  4. ಅರ್ಜಿಯನ್ನು ಬಳ್ಳಾರಿ ಜಿಲ್ಲಾ ವೆಬ್ ಸೈಟ್: www.bellary.nic.in ರ ಮೂಲಕವೂ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
recruitment of guest faculties under Dr. A.P.J Abdul Kalam Scheme to empower the education in Bellary
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X