ರಾಜ್ಯ ನೌಕರರ ವಿಮಾ ನಿಗಮದ ನರ್ಸಿಂಗ್ ಕಾಲೇಜಿನಲ್ಲಿ ಖಾಲಿ ಇರುವ 8 ವೈಸ್ ಪ್ರಿನ್ಸಿಪಾಲ್ ಕಮ್ ಪ್ರೊಫೆಸರ್ ಮತ್ತು ಟ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿಕೊಳ್ಳಬಹುದು.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 16 ಮತ್ತು 17,2020ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಅಭ್ಯರ್ಥಿಗಳು ನೇಮಕಾತಿಯ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.
CRITERIA | DETAILS |
Name Of The Posts | ವೈಸ್ ಪ್ರಿನ್ಸಿಪಾಲ್ ಕಮ್ ಪ್ರೊಫೆಸರ್, ಟ್ಯೂಟರ್ |
Organisation | ರಾಜ್ಯ ನೌಕರರ ವಿಮಾ ನಿಗಮ ನರ್ಸಿಂಗ್ ಕಾಲೇಜು |
Educational Qualification | ಎಂ.ಎಸ್ಸಿ ನರ್ಸಿಂಗ್ ಪದವಿ, ಬಿ.ಎಸ್ಸಿ ನರ್ಸಿಂಗ್ / ಪಿ.ಬಿ.ಬಿ.ಎಸ್ಸಿ (ನರ್ಸಿಂಗ್) |
Job Location | ಗುಲ್ಬರ್ಗಾ |
Salary Scale | ವೈಸ್ ಪ್ರಿನ್ಸಿಪಾಲ್ ಕಮ್ ಪ್ರೊಫೆಸರ್ -ತಿಂಗಳಿಗೆ 75,000/-ರೂ ಮತ್ತು ಟ್ಯೂಟರ್ -ತಿಂಗಳಿಗೆ 45,000/-ರೂ |
Application Start Date | March 6, 2020 |
Application End Date | March 17, 2020 |
ವಿದ್ಯಾರ್ಹತೆ:
ವೈರ್ ಪ್ರಿನ್ಸಿಪಾಲ್ ಕಮ್ ಪ್ರೊಫೆಸರ್ ಹುದ್ದೆಗಳಿಗೆ ಎಂ.ಎಸ್ಸಿ ನರ್ಸಿಂಗ್ ಪದವಿ ಜೊತೆಗೆ ವೃತ್ತಿಯಲ್ಲಿ ಅನುಭವ ಮತ್ತು ಟ್ಯೂಟರ್ ಹುದ್ದೆಗಳಿಗೆ ಎಂ.ಎಸ್ಸಿ ನರ್ಸಿಂಗ್ ಅಥವಾ ಬಿ.ಎಸ್ಸಿ ನರ್ಸಿಂಗ್ / ಪಿ.ಬಿ.ಬಿ.ಎಸ್ಸಿ (ನರ್ಸಿಂಗ್) ಅನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
ವಯೋಮಿತಿ:
ಸಂದರ್ಶನ ನಡೆಸುವ ದಿನಾಂಕದ ಅನ್ವಯ ಗರಿಷ್ಟ 69 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ವೇತನದ ವಿವರ:
ವೈಸ್ ಪ್ರಿನ್ಸಿಪಾಲ್ ಕಮ್ ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 75,000/-ರೂ ಮತ್ತು ಟ್ಯೂಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 45,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಈ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನವನ್ನು ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.
ಸಂದರ್ಶನದ ವಿವರ:
ಸಂದರ್ಶನ ನಡೆಯುವ ದಿನಾಂಕ
ವೈಸ್ ಪ್ರಿನ್ಸಿಪಾಲ್ ಕಮ್ ಪ್ರೊಫೆಸರ್ ಹುದ್ದೆಗಳಿಗೆ : ದಿನಾಂಕ 17/03/2020
ನರ್ಸಿಂಗ್ ಟ್ಯೂಟರ್ ಹುದ್ದೆಗಳಿಗೆ : ದಿನಾಂಕ 16/03/2020
ಇಎಸ್‌ಐಸಿಯ ಅಧಿಕೃತ ವೆಬ್‌ಸೈಟ್ : https://www.esic.nic.in/medical/3/-bangalore/karnataka/esic-medical-college-gulbarga
ಸಂದರ್ಶನ ನಡೆಯುವ ಸ್ಥಳ:
ಇಎಸ್‌ಐಸಿ ವೈದ್ಯಕೀಯ ಕಾಲೇಜು,
ಸೇಡಂ ರಸ್ತೆ,
ಕಲಬುರಗಿ-585106
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ