ಫೆಡೆರಲ್ ಬ್ಯಾಂಕ್: ಅಧಿಕಾರಿ ಮತ್ತು ಕ್ಲರ್ಕ್ ಹುದ್ದೆಗಳ ನೇಮಕಾತಿ

Posted By:

ಫೆಡರಲ್ ಬ್ಯಾಂಕಿನಲ್ಲಿ ಖಾಲಿ ಇರುವ ಗ್ರೇಡ್-1 ಅಧಿಕಾರಿ ಹಾಗೂ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದೇಶದ ನಾನಾ ಭಾಗಗಳಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಪದವಿಗಳಿಸಿದ ಅಭ್ಯರ್ಥಿಗಳು ಜೂನ್ 16, 2017 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

 ಗ್ರೇಡ್-1 ಅಧಿಕಾರಿ ಹುದ್ದೆ

ವಯೋಮಿತಿ: 01/06/2017ಕ್ಕೆ ಅನ್ವಯವಾಗುವಂತೆ 26ದೊಳಗಿರಬೇಕು.
ವೇತನ ಶ್ರೇಣಿ: ರೂ.23700 ರಿಂದ 42020/- ತಿಂಗಳಿಗೆ.
ವಿದ್ಯಾರ್ಹತೆ: ಫೆಡರಲ್ ಬ್ಯಾಂಕ್ ಗ್ರೇಡ್-1 ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿಯನ್ನು ಶೇ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಫೆಡೆರಲ್ ಬ್ಯಾಂಕ್ ನೇಮಕಾತಿ

ಕ್ಲರ್ಕ್ ಹುದ್ದೆ

ವಯೋಮಿತಿ: 01/06/2017ಕ್ಕೆ ಅನ್ವಯವಾಗುವಂತೆ 24ದೊಳಗಿರಬೇಕು.
ವೇತನ ಶ್ರೇಣಿ: ರೂ.11765 ರಿಂದ 31540/-ತಿಂಗಳಿಗೆ.
ವಿದ್ಯಾರ್ಹತೆ: ಫೆಡರಲ್ ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿಯನ್ನು ಶೇ.55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ

ಮೇಲಿನ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ಇರಲಿದೆ. ನಂತರ ಗುಂಪು ಚರ್ಚೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಡೆರಲ್ ಬ್ಯಾಂಕ್ ಅಧಿಕೃತ ವೆಬ್ಸೈಟ್ ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ

ಕ್ಲರ್ಕ್ ಹುದ್ದೆ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.250/-

ಅಧಿಕಾರಿ ಹುದ್ದೆಗೆ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.700/-
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.350/-

ಅರ್ಜಿ ಶುಲ್ಕವನ್ನು ಆನ್-ಲೈನ್ ಮೂಲಕ ಮಾತ್ರ ಪಾವತಿ ಮಾಡಬಹುದಾಗಿದ್ದು, ಶುಲ್ಕಕ್ಕೆ ಸೇವಾ ವೆಚ್ಚವಿರಲಿದೆ.

ಕರ್ನಾಟಕದ ಪರೀಕ್ಷಾ ಕೇಂದ್ರಗಳು

ಕ್ಲರ್ಕ್ ಹುದ್ದೆಗೆ: ಬೆಂಗಳೂರು, ಮಂಗಳೂರು, ಬೆಳಗಾವಿ
ಅಧಿಕಾರಿ ಹುದ್ದೆಗೆ: ಬೆಂಗಳೂರು, ಮಂಗಳೂರು

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-06-2017
ಆನ್-ಲೈನ್ ಟೆಸ್ಟ್ ನಡೆಯುವ ದಿನಾಂಕ: 24-06-2017 (ತಾತ್ಕಾಲಿಕ)

ಇನ್ನು ಹೆಚ್ಚಿನ ಮಾಹಿತಿ ತಿಳಿಯಲು www.federalbank.co.in ಗಮನಿಸಿ.

English summary
Federal Bank released new notification on their official website for the recruitment of Officers (Scale I) and Clerks. Job seekers should apply from 02nd June 2017 and before 16th June 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia