ನ್ಯಾಯ ವಿಜ್ಞಾನ ಪ್ರಯೋಗಾಲಯ: 15 ಹುದ್ದೆಗಳ ನೇಮಕಾತಿ

Posted By:

ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಅಧಿಕಾರಿಗಳ(ಪುರುಷ ಮತ್ತು ಮಹಿಳಾ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನೇಮಕಾತಿ

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಾಸನದಲ್ಲಿ ಜನವರಿ 23 ರಂದು ಉದ್ಯೋಗ ಮೇಳ

ನ್ಯಾಯ ವಿಜ್ಞಾನ ಪ್ರಯೋಗಾಲಯ ನೇಮಕಾತಿ

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್ www.ksp.gov.in ನಲ್ಲಿ ಆನ್-ಲೈನ್ (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಶುಲ್ಕ

  • ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-

ನಿಗದಿತ ಶುಲ್ಕವನ್ನು State Bank of India ಅಥವಾ ಸ್ಥಳೀಯ ಅಂಚೆ ಕಛೇರಿಯ ಅಧಿಕೃತ ಶಾಖೆಗಳಲ್ಲಿ ಕಛೇರಿಯ ವೇಳೆಯಲ್ಲಿ ಚಲನ್ ನೀಡಿ ಪಾವತಿಸಬೇಕು.

ಹುದ್ದೆಗಳ ವಿವರ

ನ್ಯಾಯ ವಿಜ್ಞಾನ ಪ್ರಯೋಗಾಲಯ ನೇಮಕಾತಿ

ವಿದ್ಯಾರ್ಹತೆ

1) ವೈಜ್ಞಾನಿಕ ಅಧಿಕಾರಿ, ರಸಾಯನಶಾಸ್ತ್ರ ವಿಭಾಗ:- ಸ್ನಾತಕೋತ್ತರ ಪದವಿಯನ್ನು ಕೆಮಿಸ್ಟ್ರಿ/ಫಾರ್ಮಾಕೊಲಾಜಿ / ಬಯೋಕೆಮಿಸ್ಟ್ರಿ /ಫೊರೆನ್ಸಿಕ್ ಸೈನ್ಸ್ / ಕೆಮಿಕಲ್ ಸೈನ್ಸ್‍ನಲ್ಲಿ ತತ್ಸಮಾನ ವಿದ್ಯಾರ್ಹತೆ.

2) ವೈಜ್ಞಾನಿಕ ಅಧಿಕಾರಿ, ಭೌತಶಾಸ್ತ್ರ ವಿಭಾಗ:- ಸ್ನಾತಕೋತ್ತರ ಪದವಿಯನ್ನು ಫಿಜಿಕ್ಸ್ /ಫೊರೆನ್ಸಿಕ್ ಸೈನ್ಸ್ / ಫಿಜಿಕಲ್ ಸೈನ್ಸ್ / ತತ್ಸಮಾನ ವಿದ್ಯಾರ್ಹತೆ.

3) ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ:- ಸ್ನಾತಕೋತ್ತರ ಪದವಿಯನ್ನು ಬಾಟನೀ / ಝವಾಲಜಿ / ಬಯೋಕೆಮಿಸ್ಟ್ರಿ / ಮೈಕ್ರೋಬಯೋಲಜಿ / ಲೈಫ್‍ಸೈನ್ಸ್ / ಫೊರೆನ್ಸಿಕ್ ಸೈನ್ಸ್ ಅಥವಾ ಬಯೋಸೈನ್ಸ್ / ತತ್ಸಮಾನ ವಿದ್ಯಾರ್ಹತೆ

4) ವೈಜ್ಞಾನಿಕ ಅಧಿಕಾರಿ, ಪ್ರಶ್ನಿತ ದಾಸ್ತಾವೇಜು ವಿಭಾಗ :- ಸ್ನಾತಕೋತ್ತರ ಪದವಿಯನ್ನು ಭೌತಶಾಸ್ತ್ರ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಫಿಜಿಕಲ್‍ಸೈನ್ಸ್ನಲ್ಲಿ / ಕೆಮಿಸ್ಟ್ರಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕೆಮಿಕಲ್ ಸೈನ್ಸ್ನಲ್ಲಿ / ಫೊರೆನ್ಸಿಕ್ ಸೈನ್ಸ್ ಅಥವಾ ತತ್ಸಮಾನ ವಿದ್ಯಾರ್ಹತೆ

5) ವೈಜ್ಞಾನಿಕ ಅಧಿಕಾರಿ, ನಾರ್ಕೋಟಿಕ್ಸ್ ವಿಭಾಗ :- ಸ್ನಾತಕೋತ್ತರ ಪದವಿಯನ್ನು ಕೆಮಿಸ್ಟ್ರಿ / ಫಾರ್ಮಕಾಲಜಿ / ಬಯೋಕೆಮಿಸ್ಟ್ರಿ /ಫೊರೆನ್ಸಿಕ್ ಸೈನ್ಸ್ / ತತ್ಸಮಾನ ವಿದ್ಯಾರ್ಹತೆ

6) ವೈಜ್ಞಾನಿಕ ಅಧಿಕಾರಿ, ಡಿಎನ್‍ಎ ವಿಭಾಗ:- ಸ್ನಾತಕೋತ್ತರ ಪದವಿಯನ್ನು ಬಾಟನೀ / ಝವಾಲಜಿ / ಭಯೋಕೆಮಿಸ್ಟ್ರಿ / ಮೈಕ್ರೋಬಯೋಲಜಿ / ಲೈಫ್‍ಸೈನ್ಸ್ / ಫೊರೆನ್ಸಿಕ್ ಸೈನ್ಸ್ ಅಥವಾ ಬಯೋಸೈನ್ಸ್ ತತ್ಸಮಾನ ವಿದ್ಯಾರ್ಹತೆ

7) ವೈಜ್ಞಾನಿಕ ಅಧಿಕಾರಿ, ಅಗ್ನಿ ಅಸ್ತ್ರ ವಿಭಾಗ:- ಸ್ನಾತಕೋತ್ತರ ಪದವಿಯನ್ನು ಫಿಜಿಕ್ಸ್ /ಫೊರೆನ್ಸಿಕ್ ಸೈನ್ಸ್ / ಫಿಜಿಕಲ್ ಸೈನ್ಸ್ನಲ್ಲಿ ತತ್ಸಮಾನ ವಿದ್ಯಾರ್ಹತೆ

8) ವೈಜ್ಞಾನಿಕ ಅಧಿಕಾರಿ, ಸೈಕೋಲಾಜಿ ವಿಭಾಗ:- ಸೈಕೋಲಾಜಿಯಲ್ಲಿ ಎಂಎಸ್‍ಸಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಅಥವಾ ಇದರ ತತ್ಸಮಾನ ವಿದ್ಯಾರ್ಹತೆ / ಫೊರೆನ್ಸಿಕ್ ಸೈಕೋಲಾಜಿಯಲ್ಲಿ ವಿಷಯ ತಜ್ಞರಾಗಿರಬೇಕು / ಕ್ಲಿನಿಕಲ್ ಸೈಕೋಲಾಜಿ

9) ವೈಜ್ಞಾನಿಕ ಅಧಿಕಾರಿ, ಕಂಪ್ಯೂಟರ್ ಫೊರೆನ್ಸಿಕ್ ವಿಭಾಗ:- ಕಂಪ್ಯೂಟರ್ ಸೈನ್ಸ್‍ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು / ಎಲೆಕ್ಟ್ರಾನಿಕ್ಸ್ / ಫಿಜಿಕ್ಸ್ /ಫೊರೆನ್ಸಿಕ್ ಸೈನ್ಸ್ / ಇನ್‍ಫಾರ್‍ಮೆಶನ್ ಸೈನ್ಸ್ ಅಥವಾ ಟೆಕ್ನಾಲಾಜಿ / ಎಲೆಕ್ಟ್ರಾನಿಕ್ಸ್ / ಇನ್‍ಫಾರ್‍ಮೆಶನ್ ಸೈನ್ಸ್ ಅಥವಾ ಟೆಕ್ನಾಲಾಜಿ / ಟೆಲಿ ಕಮ್ಯೂನಿಕೇಷನ್ / ತತ್ಸಮಾನ ವಿದ್ಯಾರ್ಹತೆ

10) ವೈಜ್ಞಾನಿಕ ಅಧಿಕಾರಿ, ಮೊಬೈಲ್ ಫೊರೆನ್ಸಿಕ್ ವಿಭಾಗ:- ಸ್ನಾತಕೋತ್ತರ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ / ಫಿಜಿಕ್ಸ್ /ಫೊರೆನ್ಸಿಕ್ ಸೈನ್ಸ್ / ಇನ್‍ಫಾರ್‍ಮೆಶನ್ ಸೈನ್ಸ್ ಅಥವಾ ಟೆಕ್ನಾಲಾಜಿ / ಫಿಜಿಕಲ್ ಸೈನ್ಸ್ನಲ್ಲಿ ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂಟೆಕ್ ಪದವಿಯನ್ನು ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ / ಇನ್‍ಫಾರ್‍ಮೆಶನ್ ಸೈನ್ಸ್ ಅಥವಾ ಟೆಕ್ನಾಲಾಜಿ / ಟೆಲಿ ಕಮ್ಯೂ ನಿಕೇಷನ್ / ತತ್ಸಮಾನ ವಿದ್ಯಾರ್ಹತೆ

11) ವೈಜ್ಞಾನಿಕ ಅಧಿಕಾರಿ, ಆಡಿಯೋ ವಿಡಿಯೋ ಫೊರೆನ್ಸಿಕ್ ವಿಭಾಗ:- ಸ್ನಾತಕೋತ್ತರ ಪದವಿಯನ್ನು ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ / ಫಿಜಿಕ್ಸ್ /ಫೊರೆನ್ಸಿಕ್ ಸೈನ್ಸ್ / ಇನ್‍ಫಾರ್‍ಮೆಶನ್ ಸೈನ್ಸ್ ಅಥವಾ ಟೆಕ್ನಾಲಾಜಿ / ಫಿಜಿಕಲ್ ಸೈನ್ಸ್ನಲ್ಲಿ ತತ್ಸಮಾನ ವಿದ್ಯಾರ್ಹತೆ ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಎಂಟೆಕ್ ಪದವಿಯನ್ನು ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ / ಇನ್‍ಫಾರ್‍ಮೆಶನ್ ಸೈನ್ಸ್ ಅಥವಾ ಟೆಕ್ನಾಲಾಜಿ / ಟೆಲಿ ಕಮ್ಯೂನಿಕೇಷನ್ / ತತ್ಸಮಾನ ವಿದ್ಯಾರ್ಹತೆ

ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಕನಿಷ್ಟ ಶೇಕಡ 55ರ ಸರಾಸರಿ ಅಂಕಗಳನ್ನು ಹೊಂದಿರಬೇಕು ಜೊತೆಗೆ ಸರ್ಕಾರದಿಂದ ಅಂಗೀಕೃತವಾಗಿರುವ ಯಾವುದಾದರೂ ರೀಸರ್ಚ್ ಸಂಸ್ಥೆಯಲ್ಲಿ ರೀಸರ್ಚ್ ಸ್ಕಾಲರ್ ಆಗಿ 2 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಅನುಭವವನ್ನು ಹೊಂದಿರಬೇಕು

ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳಿಗೆ: ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 31.01.2018ಕ್ಕೆ ಅಭ್ಯರ್ಥಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು.

ಸಾಮಾನ್ಯ ವರ್ಗ 35 ವರ್ಷ
2ಎ,2ಬಿ,3ಎ,3ಬಿ 38 ವರ್ಷ
ಪ.ಜಾ/ಪ.ಪಂ/ಪ್ರ-1 40 ವರ್ಷ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16.01.2018 ಬೆಳಿಗ್ಗೆ 10.00 ಗಂಟೆಗೆ
  •  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.01.2018, ಸಂಜೆ 06.00 ಗಂಟೆಗೆ
  •  ಶುಲ್ಕವನ್ನು ಬ್ಯಾಂಕ್ ಅಥವಾ ಅಂಚೆ ಕಛೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ:02.02.2018.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
FORENSIC SCIENCE LABORATORY RECRUITMENT -2017. APPLICATION FOR THE POST OF SCIENTIFIC OFFICERS (MEN & WOMEN) IN FSL, BENGALURU AND ITS REGIONAL OFFICE- 2017 ONLY HYDERABAD KARNATAKA REGION CANDIDATES ARE ELIGIBLE TO APPLY.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia