ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇನ್ನೂರ ಐವತ್ತನಾಲ್ಕು (254) ಗ್ರೂಪ್ A, ತಾಂತ್ರಿಕ ಅಧಿಕಾರಿ, ಸಹಾಯಕ, CFSO, ಮ್ಯಾನೇಜರ್ ಇತ್ಯಾದಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಎಫ್‌ಎಸ್‌ಎಸ್‌ಎಐ ನವದೆಹಲಿಯಲ್ಲಿ ಮತ್ತು ಭಾರತದಲ್ಲಿ ಎಲ್ಲಿಯಾದರೂ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ದರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಕಮ್ ನೋಂದಣಿ ಪ್ರಕ್ರಿಯೆಯು ಅಕ್ಟೋಬರ್ 08, 2021 ರಿಂದ ಪ್ರಾರಂಭವಾಗಿ ನವೆಂಬರ್ 07, 2021 ರಂದು ಕೊನೆಗೊಳ್ಳುತ್ತದೆ.

ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ :
ಸಾಮಾನ್ಯ 233 ಹುದ್ದೆಗಳು
ಗುಂಪು ಎ 21 ಹುದ್ದೆಗಳು
ಒಟ್ಟು 254 ಹುದ್ದೆಗಳು

FSSAI ನೇಮಕಾತಿ 2021 ವಿದ್ಯಾರ್ಹತೆ ಮತ್ತು ಅನುಭವ :
FSSAI ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ; ಕಾನೂನಿನಲ್ಲಿ ಪದವಿ; ರಸಾಯನಶಾಸ್ತ್ರ ಅಥವಾ ಜೀವರಸಾಯನಶಾಸ್ತ್ರ ಅಥವಾ ಆಹಾರ ತಂತ್ರಜ್ಞಾನ ಅಥವಾ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಅದಕ್ಕೆ ಸಮನಾದ; ಪತ್ರಿಕೋದ್ಯಮ ಅಥವಾ ಸಮೂಹ ಸಂವಹನ ಅಥವಾ ಸಾರ್ವಜನಿಕ ಸಂಬಂಧದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಅಥವಾ ಮಾರ್ಕೆಟಿಂಗ್‌ನಲ್ಲಿ ಎಂಬಿಎ; ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಬಿಇ/ಬಿಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವುದರ ಜೊತೆಗೆ ಎಫ್‌ಎಸ್‌ಎಸ್‌ಎಐ ಅಧಿಸೂಚನೆ 2021 ರಲ್ಲಿ ನಿರ್ದಿಷ್ಟಪಡಿಸಿದಂತೆ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ವಯೋಮಿತಿ :
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ರ ಮೂಲಕ ಎಫ್‌ಎಸ್‌ಎಸ್‌ಎಐ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನವೆಂಬರ್ 07, 2021 ರ ವೇಳೆಗೆ ಕನಿಷ್ಟ 25 ರಿಂದ ಗರಿಷ್ಟ 50 ವರ್ಷ ವಯೋಮಿತಿಯೊಳಗಿರಬೇಕು. FSSAI ಅಧಿಸೂಚನೆ 2021 ರಲ್ಲಿ ನಿರ್ದಿಷ್ಟಪಡಿಸಿದಂತೆ ಕ್ರಮವಾಗಿ 3 ವರ್ಷಗಳವರೆಗೆ (OBC-NCL), 5 ವರ್ಷಗಳು (SC/ST) ಮತ್ತು 10 ವರ್ಷಗಳು (PWBD)ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

FSSAI ನೇಮಕಾತಿ 2021 ವೇತನ :
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ರ ಮೂಲಕ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಫ್‌ಎಸ್‌ಎಸ್‌ಎಐ ಅಧಿಸೂಚನೆ 2021 ರಲ್ಲಿ ಸೂಚಿಸಿರುವಂತೆ ಹಂತ 4 ರಿಂದ 10 ನೇ ಹಂತದವರೆಗೆ ವೇತನವನ್ನು ನೀಡಲಾಗುತ್ತದೆ.

FSSAI ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :
FSSAI ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಹಂತ I/ಹಂತ II)/ಲಿಖಿತ ಪರೀಕ್ಷೆ + ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ಅರ್ಜಿ ಶುಲ್ಕ :
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ರ ಮೂಲಕ ಎಫ್‌ಎಸ್‌ಎಸ್‌ಎಐ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ನಿಗದಿತ ಮೊತ್ತ 1,500/-ರೂ (ಜನ್/ಒಬಿಸಿ) ಮತ್ತು ರೂ. 500/- (SC/ST/ಮಹಿಳೆಯರು/Ex -SM/PwBD/EWS - ಸೂಚನೆ ಶುಲ್ಕಗಳು ಮಾತ್ರ) ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬಹುದು.

FSSAI ನೇಮಕಾತಿ 2021 ಅರ್ಜಿ ಸಲ್ಲಿಕೆ :
ಗ್ರೂಪ್ ಎ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
ಜನರಲ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.
ಎಫ್‌ಎಸ್‌ಎಸ್‌ಎಐ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ.