ಕೊಪ್ಪಳ ಜಿಲ್ಲಾಪಂಚಾಯತ್ ನಲ್ಲಿ ಕಾರ್ಯದರ್ಶಿ ಗ್ರೇಡ್ -2 ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಕೊಪ್ಪಳ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್ -2 ನೇರ ನೇಮಕಾತಿ ಖೋಟಾದ ಪರಿಶಿಷ್ಟಜಾತಿಗೆ ಸಂಬಂಧಿತ 01 ಬ್ಯಾಕ್ ಲಾಗ್ ಹುದ್ದೆಯನ್ನ ಭರ್ತಿ ಮಾಡುವ ಕುರಿತು ಸರ್ಕಾರ ಅಧಿಸೂಚನೆ ನೀಡಿದೆ. ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ನೇರ ನೇಮಕಾತಿ ಮೂಲಕ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುವುದು. ಹೈದ್ರಾಬಾದ್ - ಕರ್ನಾಟಕ ಪ್ರದೇಶ ವ್ಯಾಪ್ತಿಯ ಅರ್ಹ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಮಾರ್ಚ್ 31 ಕೊನೆಯ ದಿನಾಂಕ

ಕೊಪ್ಪಳ ಜಿಲ್ಲಾಪಂಚಾಯತ್ ನಲ್ಲಿ ಕಾರ್ಯದರ್ಶಿ ಗ್ರೇಡ್ -2 ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಮೀಸಲಾತಿ  ಹುದ್ದೆ ಸಂಖ್ಯೆ  ಶೈಕ್ಷಣಿಕ ವಿದ್ಯಾರ್ಹತೆ  ವಯೋಮಿತಿ 
ಗ್ರೇಡ್ 2 ಕಾರ್ಯದರ್ಶಿ ಪ.ಜಾತಿ/ಮಹಿಳೆ  01ಪಿಯುಸಿ ಅಥವಾ ಐಟಿಐ  ಕನಿಷ್ಠ 18 ಗರಿಷ್ಟ 40 ವರ್ಷ  

ಅರ್ಜಿ ಶುಲ್ಕದಿಂದ ವಿನಾಯಿತಿ ಪಡೆದಿದ್ದು, ವೇತನ ಶ್ರೇಣಿ, ಅರ್ಹತೆ, ಅರ್ಜಿ ಜತೆ ಇರಿಸಬೇಕಾದ ಇನ್ನಿತತರ ಮಾಹಿತಿ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕೊಪ್ಪಳ ಜಿಲ್ಲೆಯ ವೆಬ್‌ಸೈಟ್ www.koppainic.in ನಿಂದ ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 31 ಸಂಜೆ 5.30 ರೊಳಗೆ ಅರ್ಜಿಯನ್ನ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿ ಗ್ರೇಡ್ -2 ಕಾರ್ಯದರ್ಶಿ ಹುದ್ದೆಗೆ ಎಂದು ಬರೆಯಬೇಕು. ಅರ್ಜಿಯನ್ನ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ್ ಕಾರ್ಯಾಲಯ
ಕೊಪ್ಪಳ

English summary
Are you an ITI graduate waiting for the right opportunity to show your skills? Koppala zila panchayat released a series of employment vacancies for Grade 2 post

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia