ಬಿಹೆಚ್ಇಎಲ್ ಇಂಜಿನಿಯರಿಂಗ್ ಪದವೀಧರರ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

2015 ರ ನಂತರ ಇಂಜಿನಿಯರಿಂಗ್ ಪದವಿ ಗಳಿಸಿದ 50 ಅಭ್ಯರ್ಥಿಗಳಿಗೆ ಮಹಾರತ್ನ ಕಂಪನಿ ಅಪ್ರೆಂಟಿಸ್ ನೀಡುತ್ತಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಬೆಂಗಳೂರಿನ ಬಿಹೆಚ್ಇಲ್ ನಲ್ಲಿ 50 ಇಂಜಿನಿಯರಿಂಗ್ ಪದವೀಧರರಿಗೆ ಒಂದು ವರ್ಷದ ಅಪ್ರೆಂಟಿಸ್ ಗೆ ಮಹಾರತ್ನ ಕಂಪನಿ ಅರ್ಜಿ ಆಹ್ವಾನಿಸಿದೆ.

2015 ರ ನಂತರ ಇಂಜಿನಿಯರಿಂಗ್ ಪದವಿ ಗಳಿಸಿದ ಅಭ್ಯರ್ಥಿಗಳು ಅರ್ಹರಾಗಿದ್ದು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅಪ್ರೆಂಟಿಸ್ ವಿವರ

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರಿಗೆ ಒಂದು ವರ್ಷ ಅವಧಿಯ ಅಪ್ರೆಂಟಿಸ್ ಗೆ ಅವಕಾಶ ಕಲ್ಪಿಸಲಾಗಿದೆ.

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್-20
ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-10
ಮೆಕ್ಯಾನಿಕಲ್ ಇಂಜಿನಿಯರಿಂಗ್-10
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್-10

ಇಂಜಿನಿಯರಿಂಗ್ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ

ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ಕ್ಷೇತ್ರದಲ್ಲಿ ಬಿಇ/ಬಿ.ಟೆಕ್ ಪದವಿ ಗಳಿಸಿರಬೇಕು. 2015 ರ ನಂತರ ಪದವಿ ಗಳಿಸಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

ವಯೋಮಿತಿ

01-05-2017 ಕ್ಕೆ ಅನ್ವಯಿಸುವಂತೆ

  • ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 27
  • ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 30
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 32
  • ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷಗಳ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ

ವಾಕ್-ಇನ್-ಇಂಟರ್ವ್ಯೂವ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ತರತಕ್ಕದ್ದು.

ಸಂದರ್ಶನಕ್ಕೆ ಬೇಕಾದ ದಾಖಲೆಗಳು

ಅಭ್ಯರ್ಥಿಗಳು ಈ ಕೆಳಕಂಡ ಮೂಲ ದಾಖಲೆಗಳೊಂದಿಗೆ ಸ್ವಯಂ ದೃಡೀಕೃತ ಎರಡು ಸೆಟ್ ಜೆರಾಕ್ಸ್ ಪ್ರತಿಗಳನ್ನು ಕೊಂಡೊಯ್ಯಲು ತಿಳಿಸಲಾಗಿದೆ.

  • ಪದವೀ ಪ್ರಮಾಣ ಪತ್ರ
  • ಎಲ್ಲಾ ಸೆಮಿಸ್ಟರ್ ಗಳ ಅಂಕಪಟ್ಟಿ
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಸ್ಟೈಪಂಡ್

ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.6000/- ಸ್ಟೈಪಂಡ್ ನೀಡಲಾಗುವುದು.

ಸಂದರ್ಶನದ ದಿನಾಂಕ

15-05-2017 ಮತ್ತು 16-05-2017 (ಬೆಳಗ್ಗೆ 9 ರಿಂದ ಮಧ್ಯಾಹ್ನ 3:30 ರವರೆಗೆ)

ಸಂದರ್ಶನದ ಸ್ಥಳ

ಬಿಹೆಚ್ಇಲ್ ವಿಭಾಗ
ಮೈಸೂರು ರಸ್ತೆ,
ಬೆಂಗಳೂರು-560026

ಹೆಚ್ಚಿನ ಮಾಹಿತಿಗಾಗಿ www.bheledn.com ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
BHEL- Electronics Division, Bangalore, one of the Manufacturing Units of BHEL, a Maharatna Company proposes to engage 50 Nos. of Graduate Apprentices (Engineering) in Core Engineering
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X