ಹೆಚ್‌ಎಎಲ್ ನಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

Written By: Rajatha

ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅದಕ್ಕೆ ಬೇಕಾದ ಅರ್ಹತೆ, ವಯೋಮಿತಿ, ವೇತನಶ್ರೇಣಿಯನ್ನು ಇಲ್ಲಿ ನೀಡಲಾಗಿದೆ.

ಅಟೆಂಡರ್, ಟೀಚರ್ ಹಾಗೂ ಇನ್ನಿತರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 7ಮಾರ್ಚ್ 2018ರ ಒಳಗೆ ಅರ್ಜಿ ಸಲ್ಲಿಸಬಹುದು .

ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ ಅನುಭವ ವೇತನ
 PRT (ಇಂಗ್ಲೀಷ್-ಸಮಾಜ ವಿಜ್ಞಾನ) 1 ಮಾನ್ಯತೆ ಹೊಂದಿದ ವಿಶ್ವಿದ್ಯಾನಿಲಯದಿಂದ ಬಿಎ,ಬಿಇಡ್ 2ವರ್ಷ 9,300-34,800ರೂ.
 PRT (ಗಣಿತ) 2 ಮಾನ್ಯತೆ ಹೊಂದಿದ ವಿಶ್ವಿದ್ಯಾನಿಲಯದಿಂದ ಬಿಎಸ್ಸಿ,ಬಿಇಡ್ 2ವರ್ಷ 9,300-34,800ರೂ.
 PRT (ಗಣಿತ ಮತ್ತು ಇವಿಎಸ್/ ವಿಜ್ಞಾನ) 1 ಮಾನ್ಯತೆ ಹೊಂದಿದ ವಿಶ್ವಿದ್ಯಾನಿಲಯದಿಂದ ಬಿಎಸ್ಸಿ,ಬಿಇಡ್ 2ವರ್ಷ 9,300-34,800ರೂ.
 ಕೆ.ಜಿ ಟೀಚರ್ 1 ಎನ್‌ಐಟಿ ಮೊಂಟೇಸರಿಯಿಂದ ಪದವಿ 1ವರ್ಷ 1800ರೂ.
 ಕೌನ್ಸಿಲರ್ 1 ಸೈಕೋಲಾಜಿಯಲ್ಲಿ ಪದವಿ, ಕೌನ್ಸಿಲರ್ ಸರ್ಟಿಫಿಕೇಟ್ ಹೊಂದಿರಬೇಕು 1ವರ್ಷ 21,250ರೂ.
 ಆಯಾ(ಮಹಿಳೆ) 3 ಮಧ್ಯಮ ಶಾಲೆ ಪಾಸ್ ಆಗಿರಬೇಕು 1ವರ್ಷ 10,000ರೂ.
 ಅಟೆಂಡರ್ (ಪುರುಷ) 1 ಮಧ್ಯಮ ಶಾಲೆ ಪಾಸ್ ಆಗಿರಬೇಕು 1ವರ್ಷ 10,000ರೂ.

HAL ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ

ಅಭ್ಯರ್ಥಿಯು 45ವರ್ಷ ವಯಸ್ಸು ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 1 ಜೂನ್ 2018ಕ್ಕೆ ಅನ್ವಯವಾಗುವಂತೆ

ಅರ್ಜೀ ಶುಲ್ಕ

ಜ್ಞಾನಜ್ಯೋತಿ ಶಾಲೆಯ ಸೆಕ್ರೆಟರಿ ಹೆಸರಿನಲ್ಲಿ 200ರೂ. ಡಿಮ್ಯಾಂಡ್ ಡ್ರಾಫ್ಟ್ ಕಳುಹಿಸಬೇಕು. ಸಿಬಿಎಸ್‌ಸಿ/ಐಸಿಎಸ್‌ಇ HAL ಶಾಲೆ ಬೆಂಗಳೂರು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

ನೇಮಕಾತಿ ಪ್ರಕ್ರಿಯೆ

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು

ಅರ್ಜಿ ಸಲ್ಲಿಸುವುದು ಹೇಗೆ?

ಸ್ಟೆಪ್ 1

ಮೊದಲಿಗೆ HALನ ಅಧೀಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಅಲ್ಲಿ ಕೆರಿಯರ್ ಎಂದಿರುವ ಟ್ಯಾಬ್‌ನ್ನು ಕ್ಲಿಕ್ ಮಾಡಿ. ಜ್ಞಾನಜ್ಯೋತಿ ಶಾಲೆಯ ಟೀಚಿಂಗ್ ಹಾಗೂ ನಾನ್ ಟೀಚಿಂಗ್ ಹುದ್ದೆಗೆ ಅರ್ಜಿ ಎಂದು ಇರುವ ಆಪ್ಷನ್ ಕ್ಲಿಕ್ ಮಾಡಿ

ಸ್ಟೆಪ್ 3

ಮೇಲೆ ತೋರಿಸಿರುವಂತೆ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಡೌನ್‌ಲೋಡ್ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ

ಸ್ಟೆಪ್ 5

ಕೊಟ್ಟಿರುವ ಸೂಚನೆಗಳನ್ನೆಲ್ಲಾ ಸರಿಯಾಗಿ ಓದಿ. ಸೂಕ್ತ ಹುದ್ದೆಗೆ ಅರ್ಜಿ ಸಲ್ಲಿಸಿ

ಸ್ಟೆಪ್ 6

ತುಂಬಿದ ಅಪ್ಲೀಕೇಶನ್ ಫಾರ್ಮ್‌ನ್ನು ಹೆಚ್‌ಎಎಲ್ ಜ್ಞಾನಜ್ಯೋತಿ ಸ್ಕೂಲ್, ಹೆಚ್‌ಎಎಲ್ ಎಕ್ಸ್‌ಟೆನ್ಷನ್ ಟೌನ್‌ಶಿಪ್, ಜಿಬಿಜೆ ಕಾಲೋನಿ, ಮಾರತಹಳ್ಳಿ ಪೋಸ್ಟ್, ಬೆಂಗಳೂರು 560037ಗೆ ಕಳುಹಿಸಿ

English summary
Hindustan Aeronautics Limited (HAL), calling out for interested and eligible candidates to apply for the posts of attenders, teachers and various others.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia