ಆರೋಗ್ಯ ಕುಟುಂಬ ಕಲ್ಯಾಣ ಮತ್ತು ಆಯುಷ್ ಸೇವೆಗಳ ಆಯುಕ್ತಾಲಯದಲ್ಲಿ ನೇಮಕಾತಿ

Posted By:

ಆರೋಗ್ಯ ಕುಟುಂಬ ಕಲ್ಯಾಣ ಮತ್ತು ಆಯುಷ್ ಸೇವೆಗಳ ಆಯುಕ್ತಾಲಯ 'ಜೀವನಸಾರ್ಥಕತೆ' ಟ್ರಾನ್ಸ್ ಪ್ಲಾಂಟ್ ಅಥಾರಿಟಿ ಆಫ್ ಕರ್ನಾಟಕ, ಇಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಗುತ್ತಿಗೆ ಆಧಾರದ ಮೇಲೆ ಟ್ರಾನ್ಸ್ ಪ್ಲಾಂಟ್ ಕೋ ಆರ್ಡಿನೇಟರ್ ಮತ್ತು ಕಚೇರಿ ಸಹಾಯಕ ಕಂ ಗಣಕಯಂತ್ರ ನಿರ್ವಾಹಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ

ಹುದ್ದೆಗಳ ವಿವರ

ಟ್ರಾನ್ಸ್ ಪ್ಲಾಂಟ್ ಕೋ ಆರ್ಡಿನೇಟರ್

ವಿದ್ಯಾರ್ಹತೆ

ಸ್ನಾತಕೋತ್ತರ ಪದವಿ(ಸಮಜ ಸೇವೆ, ಸೈಕಿಯಾಟ್ರಿ, ಸೈಕಾಲಜಿ, ಸಮಾಜ ಶಾಸ್ತ್ರ, ಸಮಾಜ ವಿಜ್ಞಾನ, ಸಾರ್ವಜನಿಕ ಆರೋಗ್ಯ ಮತ್ತು ನರ್ಸಿಂಗ್)

ಅನುಭವ

ಅಂಗಾಂಗ ಕಸಿ ಕ್ಷೇತ್ರದಲ್ಲಿ 1 ವರ್ಷಗಳ ಅನುಭವ
ಸಂಭಾವನೆ: ರೂ.20000/-

ಅಗತ್ಯವಿರುವ ವಲಯ

ಬೆಂಗಳೂರು-02 ಹುದ್ದೆಗಳು, ಮಂಗಳೂರು-02 ಹುದ್ದೆಗಳು, ಹುಬ್ಬಳ್ಳಿ/ಧಾರವಾಡ-01 ಹುದ್ದೆ, ಕಲಬುರಗಿ-01 ಹುದ್ದೆ

ಕಚೇರಿ ಸಹಾಯಕ ಕಂ ಗಣಕಯಂತ್ರ ನಿರ್ವಾಹಕ ಹುದ್ದೆ

ವಿದ್ಯಾರ್ಹತೆ

ಪದವಿ ಜೊತೆಗೆ ಗಣಕಯಂತ್ರ ಸಾಮಾನ್ಯ ಜ್ಞಾನ, ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು

ಅನುಭವ

ಕಚೇರಿ ನಿರ್ವಹಣೆಯಲ್ಲಿ 1 ವರ್ಷದ ಅನುಭವ
ಸಂಭಾವನೆ: ರೂ.18000/-
ಅಗತ್ಯವಿರುವ ವಲಯ: ಬೆಂಗಳೂರು-01 ಹುದ್ದೆ

ಆಯ್ಕೆ ಪ್ರಕ್ರಿಯೆ

ಎಲ್ಲಾ ಹುದ್ದೆಗಳಿಗೂ ನೇರ ಸಂದರ್ಶನ (ವಾಕ್ ಇನ್ ಇಂಟರ್ವ್ಯೂ) ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ವಾಕ್ ಇನ್ ಇಂಟರ್ವ್ಯೂ ಅನ್ನು ದಿನಾಂಕ 24-10-2017 ರ ಸಂಜೆ 4:00 ಗಂಟೆಗೆ, ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆನಂದರಾವ್ ಸರ್ಕಲ್, ಬೆಂಗಳೂರು -560009 ಇಲ್ಲಿ ನಡೆಸಲಾಗುವುದು.

ಆಸಕ್ತ ಅಭ್ಯರ್ಥಿಗಳು ದಾಖಲಾತಿಗಳನ್ನು jdmedicalkar@gmail.com ಈ ವಿಳಾಸಕ್ಕೆ ಇ-ಮೇಲ್ ಮೂಲಕ ಕಳುಹಿಸುವುದು. ಎಲ್ಲಾ ಮೂಲ ದಾಖಲಾತಿಗಳು ಮತ್ತು ಛಾಯಾಪ್ರತಿಗಳನ್ನು ಸದಸ್ಯ ಕಾರ್ಯದರ್ಶಿಗಳು ಇವರಿಗೆ ದಿನಾಂಕ:21-10-2017 ರ ಮಧ್ಯಹ್ನಾ 12:00 ಗಂಟೆಗೆ ಸಲ್ಲಿಸುವುದು.

English summary
Applications are invited for the Transparent Co-ordinator and Office Assistant Co. Computer Manager on the basis of contract at the Health Welfare and Ayush Services Commission.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia