ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ 167 ಸಿವಿಲ್ ನ್ಯಾಯಾಧೀಶರ ಹುದ್ದೆ

Posted By:

ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಪ್ರಸ್ತುತ ಇರುವ ಹಾಗೂ ಆನುಷಂಗಿಕ ಖಾಲಿ ಹುದ್ದೆಗಳು ಸೇರಿದಂತೆ ಸಿವಿಲ್ ನ್ಯಾಯಾಧೀಶರ 167 ಹುದ್ದೆಗಳಿಗೆ ನೇರ ನೇಮಕಾತಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೂಲ ವೃಂದ ಅಡಿಯಲ್ಲಿ ಖಾಲಿ ಹುದ್ದೆಗಳ ವರ್ಗೀಕರಣ

ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿ

ವೇತನ ಶ್ರೇಣಿ:

ರೂ.27700-770-33090-920-40450-1080-44770

ಕನಿಷ್ಠ ವಿದ್ಯಾರ್ಹತೆ ಮತ್ತು ವಯೋಮಿತಿ:

ಎ ನೇರ ನೇಮಕಾತಿ:

1. ಭಾರತದಲ್ಲಿ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲುಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು

2. ಅಭ್ಯರ್ಥಿಯ ವಯಸ್ಸು ಅರ್ಜಿಗಳನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳ ಸಂದರ್ಭದಲ್ಲಿ 38 ವರ್ಷ ವಯಸ್ಸು ಮತ್ತು ಇತರರ ಸಂದರ್ಭದಲ್ಲಿ 35 ವರ್ಷ ವಯಸ್ಸು ಮೀರಿರಬಾರದು.

3. ಮಾಜಿ ಸೈನಿಕ ಅಭ್ಯರ್ಥಿಗಳಿಗಾಗಿ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರುತ್ತದೆ.

ನೇಮಕಾತಿ ವಿಧಾನ

ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿದೆ.

(ಎ) ಪೂರ್ವಭಾವಿ ಪರೀಕ್ಷೆ

(ಬಿ) ಮುಖ್ಯ ಪರೀಕ್ಷೆ

(ಸಿ) ಮೌಖಿಕ ಪರೀಕ್ಷೆ

ಉಚ್ಛ ನ್ಯಾಯಾಲಯವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಮುಖ್ಯ ಮತ್ತು ಮೌಖಿಕ) ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಲು ಮಾತ್ರ ಪರಿಗಣಿಸಲಾಗುತ್ತದೆ.

ಪ್ರೊಬೇಷನ್:

ಆಯ್ಕೆಯಾದ ಅಭ್ಯರ್ಥಿಗಳು, ಪ್ರಾರಂಭದಲ್ಲಿ ಎರಡಿ ವರ್ಷಗಳ ಅವಧಿಗೆ ಅಥವಾ ವಿಸ್ತರಿಸಬಹುದಾದ ಅವಧಿಗೆ ಪ್ರೊಬೇಷನಲ್ಲಿರುತ್ತಾರೆ ಹಾಗೂ ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಗಳು, 1977 ರ ಉಪಬಂಧಗಳು, ಹಾಗೆ ನೇಮಕಗೊಂಡ ವ್ಯಕ್ತಿಗಳಿಗೆ ಉಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು, ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಅಭ್ಯರ್ಥಿಗಳು ಸೇವೆಯ ಪ್ರೊಬೇಷನಲ್ಲಿರುವಾಗ ಒಂದು ವರ್ಷಕ್ಕಿಂತ ಕಡಿಮೆಯಿರದ ಅಥವಾ ಉಚ್ಛ ನ್ಯಾಯಾಲಯವು ನಿರ್ದಿಷ್ಠಬಹುದಾದಂತ ಹೆಚ್ಚಿನ ಅವಧಿಯ ತರಬೇತಿಯನ್ನು ಪಡೆದುಕೊಳ್ಳತಕ್ಕದ್ದು. ಹಾಗೂ ಅವನು/ಅವಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದಿದ್ದರೆ ಕರ್ನಾಟಕ ಸಿವಿಲ್ ಸೇವಾ (ಸೇವೆಗಳು ಹಾಗೂ ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು, 1974 ರ ಅನುಸಾರವಾಗಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗತಕ್ಕದ್ದು. ಸದರಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು http://karnatakajudiciary.kar.nic.in/recruitment.asp. ವೆಬ್ಸೈಟ್ ನ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಅನ್ಲೈನ್ ಹೊರತು ಪಡಿಸಿ ಇತರ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಈ ಮುಂದೆ ಹೇಳಿರುವಂತೆ ಶುಲ್ಕವನ್ನು ತುಂಬುವುದು:

1). ಅನ್ಲೈನ್ ಮೂಲಕ ಶುಲ್ಕ ಸಂದಾಯ: ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ ಸ್ಟೇಟ್ ಬ್ಯಾಂಕ್ ಇಂಡಿಯಾ ಆನ್ಲೈನ್ ಪೇಮೆಂಟ್ ಗೇಟ್ ವೇ http://www.onlinesbi.com/prelogin/icollecthome.htm ಮೂಲಕ ಪಿ.ಡಿ.ಎಫ್ ನಮೂನೆಯಲ್ಲಿ ಚಲನ್ ಅನ್ನು ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ನಿಗದಿಪಡಿಸಿದ ಶುಲ್ಕವನ್ನು ಪಾವತಿ ಮಾಡತಕ್ಕದ್ದು.

ಅರ್ಜಿಗಳನ್ನು ಆನ್ಲೈನ್ ನಲ್ಲಿ ನೋಂದಾಯಿಸಲು/ಸಲ್ಲಿಸಲು ಕೊನೆಯ ದಿನಾಂಕ 01-03-2017 (ರಾತ್ರಿ 11:59 ಗಂಟೆ) ಚಲನ್ ಮೂಲಕ ಶುಲ್ಕ ಸಂದಾಯ ಮಾಡಲು ದಿನಾಂಕ 04-03-2017 ಕೊನೆಯ ದಿನಾಂಕವಾಗಿರುತ್ತದೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಮೀಸಲಿರಿಸಿರುವ ಹುದ್ದೆಗಳು, * ಚಿಹ್ನೆ ಬ್ಯಾಕ್ಲಾಗ್ ಹುದ್ದೆಗಳನ್ನು ಸೂಚಿಸುತ್ತದೆ

ಪ್ರವರ್ಗಮೀಸಲು ರಹಿತಮಹಿಳೆಕ.ಮಾ.ಅಗ್ರಾ.ಅಮಾ.ಸೈಅಂ.ವಿಒಟ್ಟು
ಪರಿಶಿಷ್ಠ ಜಾತಿ0101-0101-04
ಪರಿಶಿಷ್ಠ ಪಂಗಡ-------
ಪ್ರವರ್ಗ-101*--01--02
ಪ್ರವರ್ಗ-2(ಎ)-01-01+01*01-04
ಪ್ರವರ್ಗ-2(ಬಿ)01*--01--02
ಪ್ರವರ್ಗ-3(ಎ)-01----01
ಪ್ರವರ್ಗ-3(ಬಿ)---01--01
ಸಾಮಾನ್ಯ ಅಭ್ಯರ್ಥಿ020301030101+0112
ಒಟ್ಟು05060109030226

ಮೂಲ ವೃಂದಕ್ಕೆ ಮೀಸಲಿರಿಸಿರುವ ಹುದ್ದೆಗಳು, * ಚಿಹ್ನೆ ಬ್ಯಾಕ್ಲಾಗ್ ಹುದ್ದೆಗಳನ್ನು ಸೂಚಿಸುತ್ತದೆ

ಪ್ರವರ್ಗಮೀಸಲು ರಹಿತಮಹಿಳೆಕ.ಮಾ.ಅಗ್ರಾ.ಅಮಾ.ಸೈಅಂ.ವಿಒಟ್ಟು

ಪರಿಶಿಷ್ಠ ಜಾತಿ

04
04
01
03
0102*15
ಪರಿಶಿಷ್ಠ ಪಂಗಡ0101--01-03
ಪ್ರವರ್ಗ-101+01*01+03*-01+02*01*01*11
ಪ್ರವರ್ಗ-2(ಎ)03+03*05+12*01+02*02+10*02+03*02*45
ಪ್ರವರ್ಗ-2(ಬಿ)-02+02*01*03*01+01-10
ಪ್ರವರ್ಗ-3(ಎ)0201--01-04
ಪ್ರವರ್ಗ-3(ಬಿ)0101-02+02*01*0108
ಸಾಮಾನ್ಯ ಅಭ್ಯರ್ಥಿ101303110402+02*45
ಒಟ್ಟು264508361610

141

English summary
High Court of Karnataka Recruitment 2017

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia