ಎಚ್ಎಂಟಿ ಯಲ್ಲಿ 12 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಎಚ್ ಎಂಟಿ (ಹಿಂದೂಸ್ತಾನ್ ಮಷೀನ್ ಟೂಲ್ಸ್) ಲಿಮಿಟೆಡ್ ನಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್ ಹಾಗೂ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್ಸೈಟ್ ವಿಳಾಸದಿಂದ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಲು ಸೂಚಿಸಲಾಗಿದೆ.

ಎಚ್ ಎಂ ಟಿ ಉದ್ಯೋಗಾವಕಾಶ

ಹುದ್ದೆಗಳ ವಿವರ

ಒಟ್ಟು ಹುದ್ದೆಗಳು: 12

ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸೇಲ್ಸ್ ಮತ್ತು ಸರ್ವೀಸ್)

ವಯೋಮಿತಿ: ಗರಿಷ್ಠ 37 ವರ್ಷಗಳು
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರಬೇಕು ಮತ್ತು ಎಂಬಿಎ (ಮಾರ್ಕೆಟಿಂಗ್) ಮಾಡಿದವರಿಗೆ ಆದ್ಯತೆ.
ಸೇಲ್ಸ್ ವಿಭಾಗದಲ್ಲಿ 15 ವರ್ಷದ ಅನುಭವ ಮತ್ತು ಮಷಿನ್ ಟೂಲ್ಸ್ ಅನುಭವವಿರುವವರಿಗೆ ಹೆಚ್ಚಿನ ಆಧ್ಯತೆ

ಮ್ಯಾನೇಜರ್ (ಸೇಲ್ಸ್ ಮತ್ತು ಸರ್ವೀಸ್)
ವಯೋಮಿತಿ: ಗರಿಷ್ಠ 35 ವರ್ಷಗಳು
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರಬೇಕು ಮತ್ತು ಎಂಬಿಎ (ಮಾರ್ಕೆಟಿಂಗ್) ಮಾಡಿದವರಿಗೆ ಆದ್ಯತೆ.
ಸೇಲ್ಸ್ ವಿಭಾಗದಲ್ಲಿ 10 ವರ್ಷದ ಅನುಭವ ಮತ್ತು ಮಷಿನ್ ಟೂಲ್ಸ್ ಅನುಭವವಿರುವವರಿಗೆ ಹೆಚ್ಚಿನ ಆಧ್ಯತೆ

ಡೆಪ್ಯುಟಿ ಮ್ಯಾನೇಜರ್ ( ಸೇಲ್ಸ್ ಮತ್ತು ಸರ್ವೀಸ್)
ವಯೋಮಿತಿ: ಗರಿಷ್ಠ 33 ವರ್ಷಗಳು
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರಬೇಕು ಮತ್ತು ಎಂಬಿಎ (ಮಾರ್ಕೆಟಿಂಗ್) ಮಾಡಿದವರಿಗೆ ಆದ್ಯತೆ.
ಸೇಲ್ಸ್ ವಿಭಾಗದಲ್ಲಿ 05 ವರ್ಷದ ಅನುಭವ ಮತ್ತು ಮಷಿನ್ ಟೂಲ್ಸ್ ಅನುಭವವಿರುವವರಿಗೆ ಹೆಚ್ಚಿನ ಆಧ್ಯತೆ

ಸೂಚನೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಆಯ್ಕೆ ವಿಧಾನ

ಶೈಕ್ಷಣಿಕ ಪರೀಕ್ಷೆಗಳ ಅಂಕ, ಈ ಹಿಂದಿನ ಸೇವಾ ದಾಖಲೆಗಳು ಹಾಗೂ ಸಂದರ್ಶನದಲ್ಲಿ ತೆಗೆದುಕೊಳ್ಳುವ ಅಂಕದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುವುದು.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿ ಸ್ವಯಂ ದೃಢೀಕೃತ ದಾಖಲೆಗಳನ್ನು ಲಗತ್ತಿಸಿ ಕಛೇರಿ ವಿಳಾಸಕ್ಕೆ ಕಳುಹಿಸತಕ್ಕದ್ದು. ಅರ್ಜಿ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.

ಅರ್ಜಿ ಶುಲ್ಕ

ರಾಷ್ಟ್ರೀಕೃತ ಬ್ಯಾಂಕಿಂನಿಂದ ರೂ.500/- ರ ಡಿಡಿಯನ್ನು ಎಚ್ಎಂಮಟಿ ಮಷಿನ್ ಟೂಲ್ಸ್ ಲಿಮಿಟೆಡ್. ಇವರ ಹೆಸರಿಗೆ ಸಂದಾಯವಾಗುವಂತೆ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಸುವ ವಿಳಾಸ

ಡೆಪ್ಯೂಟಿ ಮ್ಯಾನೇಜರ್ (ಎಂಪಿ/ಎಚ್ಆರ್)
ಎಚ್ಎಂಟಿ ಮಷಿನ್ ಟೂಲ್ಸ್ ಲಿಮಿಟೆಡ್
ಎಚ್ಎಂಟಿ ಭವನ
ನಂಬರ್.59,ಬಳ್ಳಾರಿ ರಸ್ತೆ.
ಬೆಂಗಳೂರು-560032

ಅರ್ಜಿ ಸಲ್ಲಿಸಲು ಕೊನೆ ದಿನ: 18-8-2017
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

English summary
HMT Machine Tools Limited has announced a notification for the recruitment of Asst. General Manager (Sales & Service), Manager (Sales & Service) & Dy. Manager (Sales & Service) vacancies.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia