ಎಚ್ ಎ ಎಲ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್)ನಲ್ಲಿ ಖಾಲಿ ಇರುವ ವಿವಿಧ ವಿಭಾಗದಲ್ಲಿನ ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ನರ್ಸ್, ಫಾರ್ಮಸಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಸೆಪ್ಟೆಂಬರ್ 14, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಹುದ್ದೆಗಳು ಗುತ್ತಿಗೆ ಆಧಾರವಾಗಿದ್ದು, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಎಚ್ ಎ ಎಲ್ ನಲ್ಲಿ  ನೇಮಕಾತಿ

ಹುದ್ದೆಗಳ ವಿವರ

ನರ್ಸ್ ಹುದ್ದೆ (5)
ವಿದ್ಯಾರ್ಹತೆ: ಪಿಯುಸಿ ಜತೆಗೆ ಡಿಪ್ಲಮೋನಲ್ಲಿ ನರ್ಸಿಂಗ್ ಪೂರ್ಣಗೊಳಿಸರಬೇಕು.
ವೇತನ: ರೂ.33039/- ತಿಂಗಳಿಗೆ.

ಫಾರ್ಮಸಿ ಹುದ್ದೆ (2)
ವಿದ್ಯಾರ್ಹತೆ: ಪಿಯುಸಿ ಜತೆಗೆ ಡಿಪ್ಲಮೋನಲ್ಲಿ ಫಾರ್ಮಸಿ ತೇರ್ಗಡೆಯಾಗಿರಬೇಕು.
ವೇತನ: ರೂ.33039/- ತಿಂಗಳಿಗೆ.

ಲ್ಯಾಬ್ ಟೆಕ್ನಿಷಿಯನ್ -01 ಹುದ್ದೆ
ವಿದ್ಯಾರ್ಹತೆ: ಬಿಎಸ್ಸಿ (ಎಂಎಲ್ ಟಿ)
ವೇತನ: ರೂ.33039/- ತಿಂಗಳಿಗೆ.

ರಿಫ್ರ್ಯಾಕ್ಷನಿಸ್ಟ್ -01 ಹುದ್ದೆ
ವಿದ್ಯಾರ್ಹತೆ: ಪಿಯುಸಿ ಜೊತೆಗೆ ಅಪ್ಥಾಲ್ಮಿಕ್ ಟೆಕ್ನಕ್ಸ್ ನಲ್ಲಿ ಡಿಪ್ಲೊಮಾ ಗಳಿಸಿರಬೇಕು
ವೇತನ: ರೂ.33039/- ತಿಂಗಳಿಗೆ.

ಡ್ರೆಸ್ಸರ್-04 ಹುದ್ದೆಗಳು
ವಿದ್ಯಾರ್ಹತೆ: ಪಿಯುಸಿ ಜೊತೆಗೆ ಫಸ್ಟ್ ಏಡ್ ತರಬೇತಿ ಹೊಂದಿರಬೇಕು.
ವೇತನ: ರೂ.33039/- ತಿಂಗಳಿಗೆ.

ವಯೋಮತಿ: ಆಗಸ್ಟ್ 1,2017ಕ್ಕೆ ಅನ್ವಯವಾಗುಂತೆ ಸಾಮಾನ್ಯ ಅಭ್ಯರ್ಥಿಗಳಿಗೆ 28 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಎಸ್ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 5, ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.200/-
  • ಎಸ್.ಸಿ/ಎಸ್.ಟಿ/ಅಂಗವಿಕಲ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ ನಡೆಸಿ, ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ಮೂಲಕ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Hindustan Aeronautics Limited released new notification on their official website for the recruitment of total 13 (Thirteen) jobs. Job seekers should apply before 14th September 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia