ಡಿಪ್ಲೊಮಾ ಪದವೀಧರರಿಗೆ ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಉದ್ಯೋಗಾವಕಾಶ

Posted By:

ಸರ್ಕಾರಿ ಒಡೆತನದ ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ ನಲ್ಲಿ ಖಾಲಿ ಇರುವ 60 ಟೆಕ್ನಿಷಿಯನ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಡಿಪ್ಲೊಮಾ ಪದವಿ ಪಡೆದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ 08 ಜೂನ್ 2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಹುದ್ದೆಯ ಹೆಸರು: ಆಪರೇಷನ್ಸ್ ಟೆಕ್ನಿಷಿಯನ್ಸ್

ಹುದ್ದೆ: 50 ಟೆಕ್ನಿಷಿಯನ್
ಹುದ್ದೆ ಎಲ್ಲಿ: ಭಾರತದಾದ್ಯಂತ
ವೇತನ ಶ್ರೇಣಿ: ರೂ.40000/- ತಿಂಗಳಿಗೆ

ಡಿಪ್ಲೊಮಾ ಪದವೀಧರರಿಗೆ ಉದ್ಯೋಗಾವಕಾಶ

ಹುದ್ದೆಯ ಹೆಸರು: ಬಾಯ್ಲರ್ ಟೆಕ್ನಿಷಿಯನ್ಸ್

ಹುದ್ದೆ: 10 ಟೆಕ್ನಿಷಿಯನ್
ಹುದ್ದೆ ಎಲ್ಲಿ: ಭಾರತದಾದ್ಯಂತ
ವೇತನ ಶ್ರೇಣಿ: ರೂ.40000/-ತಿಂಗಳಿಗೆ

ವಯೋಮಿತಿ

01/05/2017ಕ್ಕೆ ಅನ್ವಯವಾಗುವಂತೆ 18ರಿಂದ 25 ವರ್ಷ.

ವಿದ್ಯಾರ್ಹತೆ

ಡಿಪ್ಲೊಮಾ ಇನ್ ಕೆಮಿಕಲ್ ಎಂಜಿನಿಯರಿಂಗ್ ಅಥವಾ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರಬೇಕು.

ಅರ್ಜಿ ಸಲ್ಲಿಕೆ

  • ಅಭ್ಯರ್ಥಿಗಳಿಗೆ ಆನ್-ಲೈನ ಮೂಲಕ ಮಾತ್ರ ರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ
  • ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.635/-
  • ಎಸ್.ಸಿ/ಎಸ್.ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
  • ಶುಲ್ಕವನ್ನು ಆನ್-ಲೈನ್ ಮತ್ತು ಚಲನ್ ಮೂಲಕ ಪಾವತಿಸಬಹುದಾಗಿದ್ದು, ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬಹುದಾಗಿದೆ. [ಭಾರತೀಯ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಹುದ್ದೆಗಳ ನೇಮಕಾತಿ]

ಆಯ್ಕೆ ವಿಧಾನ

ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ ನಲ್ಲಿ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಕಂಪ್ಯೂಟರ್ ಮತ್ತು ಸಾಮರ್ಥ್ಯ ಪರೀಕ್ಷೆ ಏರ್ಪಡಿಸಲಾಗುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-06-2017
  • ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-06-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಪೂರ್ಣ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

English summary
Hindustan Petroleum Corporation Limited released new notification on their official website for the recruitment of 60 (sixty) vacancies for Technician. Job seekers should apply before 08th June 2017.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia