ಐಬಿಪಿಎಸ್: 14192 ಬ್ಯಾಂಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Posted By:

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಐಬಿಪಿಎಸ್) ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 14192 ಹುದ್ದೆಗಳ ನೇಮಕಾತಿಗೆ ಸಾಮಾನ್ಯ ಪರೀಕ್ಷೆ ನಡೆಸುತ್ತಿದ್ದರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರೂಪ್-ಎ, ಬಿ, ಕಚೇರಿ ಸಹಾಯಕ, ಸಹಾಯಕ ಅಧಿಕಾರಿ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆನ್ ಲೈನ್ ನಲ್ಲಿ ದಿನಾಂಕ 12-07-2017ರಿಂದ ಅರ್ಜಿ ಸಲ್ಲಿಸಬಹುದಾಗಿದೆ. 01-08-2017 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.

 ಐಬಿಪಿಎಸ್ ಬ್ಯಾಂಕ್ ಹುದ್ದೆಗಳ ನೇಮಕಾತಿ

ಕರ್ನಾಟಕ ವಿಭಾಗದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಒಟ್ಟು ಸಾವಿರಕ್ಕೂ ಅಧಿಕ ಹುದ್ದೆಗಳು ಲಭ್ಯವಿದೆ.

ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
ಕಚೇರಿ ಸಹಾಯಕ-ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್)7374
ಆಫೀಸರ್ ಸ್ಕೇಲ್ I
4865
ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್)169
ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್)33
ಆಫೀಸರ್ ಸ್ಕೇಲ್ II (ಟ್ರೆಷರಿ ಮ್ಯಾನೇಜರ್)11
ಆಫೀಸರ್ ಸ್ಕೇಲ್ II (ಲಾ ಆಫೀಸರ್)21
ಆಫೀಸರ್ ಸ್ಕೇಲ್ II (ಚಾರ್ಟೆಡ್ ಅಕೌಂಟ್)34
ಆಫೀಸರ್ ಸ್ಕೇಲ್ II  (ಇನ್ಫರ್ಮೇಷನ್ ಟೆಕ್ನಾಲಜಿ ಆಫೀಸರ್)
83
ಆಫೀಸರ್ ಸ್ಕೇಲ್ II (ಜನರಲ್ ಬ್ಯಾಂಕಿಂಗ್ ಆಫೀಸರ್)1395
ಆಫೀಸರ್ ಸ್ಕೇಲ್ III207

ವಯೋಮಿತಿ: ಸಾಮಾನ್ಯ ಅಭ್ಯರ್ಥೀಗಳಿಗೆ 18 ರಿಂದ 28 ವರ್ಷ, ಹಿಂದೂಳಿದ ವರ್ಗದವರಿಗೆ 3 ವರ್ಷ ಸಡಿಲಿಕೆ, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಮಾಡಲಾಗಿದೆ.

ವಿದ್ಯಾರ್ಹತೆ: ತಿಳಿಸಲಾಗಿರುವ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ವಿಭಾಗದಲ್ಲಿ ಪದವಿ (ಡಿಗ್ರಿ) ಪಡೆದಿರಬೇಕು.

ಆಯ್ಕೆ ವಿಧಾನ: ಆಯ್ಕೆ ಸಮಿತಿಯಿಂದ ನಡೆಸಲ್ಪಡುವ ವೈಯಕ್ತಿಕ ಸಂದರ್ಶನ, ಆನ್ ಲೈನ್ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಐಬಿಪಿಎಸ್ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ

ಅಧಿಕಾರಿ (ಸ್ಕೇಲ್ II,II,ಮತ್ತು III)
ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.600/-
ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಕಚೇರಿ ಅಧಿಕಾರಿ

ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.600/-
ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಶುಲ್ಕವನ್ನು ನೆಟ್ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಬಳಸಿ ಆನ್-ಲೈನ್ ಮೂಲಕವೇ ಸಲ್ಲಿಸತಕ್ಕದ್ದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-08-2017

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

English summary
Institute of Banking Personnel Selection (IBPS) has advertised a notification to conduct online examination for the next Commom Recruitment Process (CRP) for Regional Rural Banks (RRBs VI) for recruitment of 14192 Group A - Officers (Scale-I, II & III) and Group B - Office Assistants

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia