ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ತಾಳವಾದಿ ಮತ್ತು ಮ್ಯೂಸಿಶಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ,ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಲಿಖಿತ ಪರೀಕ್ಷೆ, ಪ್ರ್ಯಾಕ್ಟಿಕಲ್ ಟೆಸ್ಟ್, ಮೆಡಿಕಲ್ ಟೆಸ್ಟ್ ಹಾಗೂ ಪ್ರಶಂಸಾಪತ್ರಗಳ ಮೌಲ್ಯಮಾಪನದ ಬಳಿಕ ಅಭ್ಯರ್ಥಿಗಳನ್ನ ನೇಮಕಮಾಡಿಕೊಳ್ಳಲಾಗುತ್ತದೆ. ಆಯ್ಕೆಗೊಳ್ಳುವ ಅಭ್ಯರ್ಥಿಗಳು ತಿಂಗಳಿಗೆ ರೂ 22000 ದುಡಿಯಬಹುದಾಗಿದೆ. ಇನ್ನು ಅರ್ಜಿ ಶುಲ್ಕ 500 ರೂ ಆಗಿದ್ದು, ಅರ್ಜಿ ಸಲ್ಲಿಕೆಗೆ ನವಂಬರ್ 19, 2018 ಕೊನೆಯ ದಿನಾಂಕ.
More Read: ಸೆಂಟ್ರಲ್ ರೈಲ್ವೇ ನೇಮಕಾತಿ: ಸ್ಪೋರ್ಟ್ಸ್ ಕೋಟಾದಡಿಯಲ್ಲಿ 21 ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ 2018 ಹುದ್ದೆಯ ಡೀಟೆಲ್ಸ್:
CRITERIA | DETAILS |
Name Of The Posts | ತಾಳವಾದಿ ಮತ್ತು ಮ್ಯೂಸಿಶಿಯನ್ |
Organisation | ಇಂಟಗ್ರೆಲ್ ಕೋಚ್ ಫ್ಯಾಕ್ಟರಿ |
Educational Qualification | ಅಧಿಕೃತ ವಿಶ್ವವಿದ್ಯಾನಿಲಯದಿಂದ 12ನೇ ತರಗತಿ ಪಾಸಾಗಿರಬೇಕು ಅಥವಾ ಐಟಿಐ ಸರ್ಟಿಫಿಕೇಟ್ ಪಡೆದಿರಬೇಕು |
Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
Skills Required | ಮ್ಯೂಸಿಕಲ್ ಜ್ಞಾನ ಇರಬೇಕು |
Job Location | ಚೆನ್ನೈ |
Industry | ರೈಲ್ವೇಸ್ |
Application Start Date | November 15, 2018 |
Application End Date | November 19, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು
More Read: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 270 ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಸ್ಟೆಪ್ 1: ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ ಫೇಜ್ ನಲ್ಲಿ ಬಲಭಾಗದಲ್ಲಿ ಇರುವ ಈ Recruitment of cultural quota - 2018 ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ವಿವರಣಾತ್ಮಕ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
- ಸ್ಟೆಪ್ 4: ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
- ಸ್ಟೆಪ್ 5: ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
- ಸ್ಟೆಪ್ 6: ಅರ್ಜಿಯನ್ನ ಭರ್ತಿ ಮಾಡಿ ಐಸಿಎಫ್ ಗೆ ಪೊಸ್ಟ್ ಮಾಡಿ
ಅರ್ಜಿ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Assistant Personnel Officer/Recruitment,
Integral Coach Factory, Chennai - 600038.