ಕಲಾ ಶಿಕ್ಷಣ ನೀಡಲು ಯೋಜನಾ ಪ್ರಸ್ತಾವನೆಗೆ ಐ ಎಫ್ ಎ ಅರ್ಜಿ ಆಹ್ವಾನ

Posted By:

ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ್ (ಐ.ಎಫ್.ಎ) ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಕಲಾ ಶಿಕ್ಷಣ ನೀಡಲು ಶಾಲಾ ಶಿಕ್ಷಕ/ಶಿಕ್ಷಕಿಯರಿಂದ ಯೋಜನಾ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. 

ಈ ಯೋಜನೆ ಈಗಾಗಲೇ ಚಾಲ್ತಿಯಲ್ಲಿರುವ 'ಕಲಿ-ಕಲಿಸು' ಯೋಜನೆಯ ಮುಂದುವರಿಕೆ ಭಾಗವಾಗಿದ್ದು, ಶಿಕ್ಷಕರು, ಶಾಲಾ ಸಮುದಾಯ ಹಾಗೂ ಸ್ಥಳೀಯ ಕಲಾವಿದರ ಸಂಬಂಧವನ್ನು ಗಟ್ಟಿಗೊಳಿಸುವುದು ಈ ಯೋಜನೆಯ ಮುಖ್ಯ ಗುರಿ.

ಈ ಅನುದಾನ ಮುಖ್ಯ ಉದ್ದೇಶವೆಂದರೆ ಶಿಕ್ಷರು ತಮ್ಮ ವಿಷಯದ ಪರಿಮಿತಿಯ ಚೌಕಟ್ಟನ್ನು ದಾಟಿ, ಕಲಾ ಪ್ರಕಾರಗಳನ್ನು ತಾವು ಕಲಿಸುತ್ತಿರುವ ವಿಷಯಗಳಲ್ಲಿ ಅಳವಡಿಸಿಕೊಳ್ಳುವುದು, ಈ ಮೂಲಕ ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ ಹಾಗು ತರಗತಿಯಲ್ಲಿ ಸ್ಥಳೀಯ ಕಲಾಪ್ರಕಾರಗಳನ್ನು ಅಳವಡಿಸಿಕೊಂಡು ಕಲಾವಿದರಿಗೆ ಹಾಗು ಶಿಕ್ಷಕರಿಗೆ ಹೊಸ ಕಲಿಕೆಯ ಅವಕಾಶವನ್ನು ಕಲ್ಪಿಸುವುದಾಗಿದೆ. ಅದರ ಜೊತೆಗೆ ಪರಿಸರ ಹಾಗೂ ಜಾನಪದ ಸಂಸ್ಕೃತಿಯನ್ನು ಶಾಲಾ ಶಿಕ್ಷಣದಲ್ಲಿ ಮತ್ತೆ ಪರಿಚಯ ಮಾಡುವ ಕೆಲಸ ಆಗಿದೆ.

ಕಲಾ ಶಿಕ್ಷಣಕ್ಕೆ ಐ ಎಫ್ ಎ ಅರ್ಜಿ ಆಹ್ವಾನ

ಅನುದಾನಕ್ಕೆ ಆಯ್ಕೆಯಾದ ಶಿಕ್ಷಕರಿಂದ ನಿರೀಕ್ಷೆಗಳೇನೆಂದರೆ

 • ಮುಂದಿನ ದಿನಗಳಲ್ಲಿ ಅನುಷ್ಟಾನಕ್ಕೆ ತರಬಲ್ಲ ಒಂದು ಸಂಪೂರ್ಣ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಬೇಕು.
 • ಯೋಜನೆಯು ಸರಿಯಾದ ಕ್ರಮದಲ್ಲಿ ನಡೆಯುತ್ತಿರುವುದನ್ನು ತೋರಿಸಲು ಕಾಲಕಾಲಕ್ಕೆ ಸರಿಯಾದ ದಾಖಲೆಗಳನ್ನು ಸಂಸ್ಥೆಗೆ ಒದಗಿಸಬೇಕು. (ಧಾಖಲೆಗಳು ಛಾಯಾಚಿತ್ರ/ಆಡಿಯೋ/ ವಿಡಿಯೋ/ವರದಿಯ ರೂಪದಲ್ಲಿರಬೇಕು)
 • ಯೋಜನಾ ಅವಧಿಯಲ್ಲಿ ಮಧ್ಯಂತರ ವರದಿ ಹಾಗು ಯೋಜನೆಯ ಕೊನೆಯಲ್ಲಿ ಸಮಗ್ರ ವರದಿಯನ್ನು, ದಾಖಲೆ ಸಮೇತ ಸಲ್ಲಿಸಬೇಕು. ಯೋಜನಾ ಅವಧಿಯ ನಂತರ ಹಣಕಾಸಿನ ವರದಿಯ ಜೊತೆ ಯೋಜನೆಯ ಸಂಪೂರ್ಣ/ಸವಿಸ್ತಾರ ವರದಿ ಸಲ್ಲಿಸಬೇಕು. ಅಂತಿಮ ವರದಿಯಲ್ಲಿ ಅನುದಾನ ಸಂಭಂದಿದ ಚಟುವಟಿಕೆಗಳು, ಎದುರಾದ ಸಮಸ್ಯೆಗಳು ಮತ್ತು ಕಲಿಕೆಗಳನ್ನು ದಾಖಲಿಸಬೇಕು.

ಈ ಯೋಜನಾ ಪ್ರಸ್ತಾವಕ್ಕೆ ಬೇಕಾದ ಅರ್ಹತೆ

ಸರ್ಕಾರಿ ಶಾಲಾ ವಿಷಯಶಿಕ್ಷಕರು, ಕಲಾಶಿಕ್ಷಕರು, ಡಿಸ್ಟ್ರಿಕ್ಟ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್(DIET) ನ ಉಪನ್ಯಾಸಕರು ಈ ಪ್ರಸ್ತಾವನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯೋಜನೆಯ ವ್ಯಾಪ್ತಿ

 • ಯೋಜನೆಯ ವ್ಯಾಪ್ತಿಯಲ್ಲಿ ಕೆಳಕಂಡ ಯಾವುದಾದರೊಂದು ಅಂಶವಿರಬೇಕು. ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಕಲಾಸೇವೆಯಲ್ಲಿ ತೊಡಗಿರುವವರೂ ಒಳಗೊಂಡಂತೆ ಇನ್ನೂ ಹಲವು ಪಾಲುದಾರರನ್ನು ಕಲಾ ಯೋಜನೆಯ ಪರಿಧಿಯಲ್ಲಿ ತರಬೇಕು.
 • ಬೋಧನೆಯಲ್ಲಿ ಸ್ಥಳೀಯ ಹಾಗೂ ಪ್ರಾಂತೀಯ ಕಲಾ ಪ್ರಕಾರಗಳನ್ನು ಬಳಸಿಕೊಳ್ಳುವ ಮೂಲಕ ಕಲಿಕೆಯನ್ನು ಶ್ರೀಮಂತಗೊಳಿಸುವುದು.
 • ವಿದ್ಯಾರ್ಥಿಕೇಂದ್ರಿತ ಕಲಿಕೆಗೆ ಪ್ರೋತ್ಸಾಹಿಸುವುದು. ಉದಾಹರಣೆಗೆ ಕಲಾ ಪ್ರಕಾರಗಳನ್ನು ಪರಿಚಯಿಸಿ, ಮಕ್ಕಳು ವಿವಿಧ ಕಲಾ ಪ್ರಕಾರಗಳಲ್ಲಿ ನಿರಂತರವಾಗಿ ತೊಡಗುವಂತೆ ಪ್ರೋತ್ಸಾಹಿಸುವುದು.
 • ಈ ಯೋಜನೆಯು ಕಲಾ ಕಲಿಕೆಯ ಮೂಲಕ ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂಬಂಧಿ ಅರಿವು ಮೂಡಿಸಲು ಶಾಲೆ ಸಮುದಾಯವನ್ನು ಪ್ರೇರೇಪಿಸುವಲ್ಲಿ ಸಹಕಾರಿಯಾಗಬೇಕು.

ಯೋಜನಾ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯ ಮಾರ್ಗಸೂಚಿ

 • ನಿಮ್ಮ ಯೋಜನೆಯ ಕಲ್ಪನೆ ನೀವು ಕೆಲಸ ಮಾಡುತ್ತಿರುವ ಶಾಲೆಗೆ ಸಂಬಂಧಿಸಿದಂತೆ ಆಗಿರಬೇಕು.
 • ಪ್ರಸ್ತುತ ನೀವು ನಿರ್ವಹಿಸುತ್ತಿರುವ ಪಾತ್ರ ಮತ್ತು ಜವಾಬ್ದಾರಿಗಳು. ನಿಮ್ಮ ಪ್ರಸ್ತಾವಿತ ಕೆಲಸದ ಯೋಜನೆ ಹಾಗು ಶಾಲೆಯಲ್ಲಿ ನೀವು ಬಳಸುವ ವಿಧಾನದ ವಿವರ, ನಿಮ್ಮ ಯೋಜನೆಯ ಫಲಿತಾಂಶವು ಕಲಾ ಶಿಕ್ಶಣ ಕ್ಷೇತ್ರಕ್ಕೆ ಯಾವ ರೀತಿ ಕೊಡುಗೆ ನೀಡುತ್ತದೆ ಎಂಬ ವಿವರ, ಯೋಜನೆಯ ನೀರೀಕ್ಷಿತ ಕಾಲಾವಧಿ. ನಿಮ್ಮ ಯೋಜನೆಯು ಕನಿಷ್ಟ ಒಂಬತ್ತು ತಿಂಗಳದ್ದಾಗಿರಬೇಕು ಹಾಗು ಗರಿಷ್ಟ 18 ತಿಂಗಳ ಅವಧಿಯದ್ದಾಗಿರಬೇಕು.

ಬಜೆಟ್

 • ರೂ. 1,00,000/- ವರೆಗೆ ಧನಸಹಾಯ ದೊರೆಯುತ್ತದೆ.
 • ಪ್ರತಿ ಬಜೆಟ್ ಯೋಜನೆಗೆ ಸಂಬಂಧಿಸಿದ ನಿರ್ಧಿಷ್ಟ ಖರ್ಚು ವೆಚ್ಚಗಳ ವಿವರ ಹೊಂದಿರಬೇಕು.
 • ಯೋಜನೆಗೆ ಸಂಬಂಧಿಸಿದ ವೈಯಕ್ತಿಕ ಖರ್ಚು, ಪ್ರಯಾಣ ಹಾಗು ಚಟುವಟಿಕೆಗಳ ವಿವರ ಹೊಂದಿರಬೇಕು.
 • ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಗತ್ಯವಿರುವ ನೂತನ ಉಪಕರಣಗಳನ್ನು ಮತ್ತು ವಸ್ತುಗಳನ್ನು ಕೊಳ್ಳಲು ಅವಕಾಶವಿರುತ್ತದೆ.
 • ಸಾಂಸ್ಥಿಕ ಖರ್ಚು ವೆಚ್ಚಗಳು, ಕಟ್ಟಡದ ಖರ್ಚು ವೆಚ್ಚಗಳು ಮತ್ತು ಹೊಸ ಕಾಮಗಾರಿಗಳಿಗಾಗಿ ಅನುದಾನವಿರುವುದಿಲ್ಲ.
 • ಇಡೀ ಯೋಜನಾವಧಿಗೆ ನಿಮ್ಮ ಗೌರವಧನ ಹತ್ತು ಸಾವಿರ ಮೀರಿರಬಾರದು. ಹೊರಗಿನ ಸಂಪನ್ಮೂಲ ವ್ಯಕ್ತಿಗಳ ಗೌರವಧನ 20 ಸಾವಿರ ಮೀರಿರಬಾರದು.

ಗಡವು

 • ನಿಮ್ಮ ಅಂತಿಮ ಪ್ರಸ್ತಾವನೆಯು ಲಕೋಟೆಯಲ್ಲಿ ಜುಲೈ 28, 2017ರ ಒಳಗೆ ಸಲ್ಲಿಸತಕ್ಕದ್ದು.
 • ನಿಮ್ಮ ಪ್ರಸ್ತಾವನೆ ಆಯ್ಕೆಯಾದಲ್ಲಿ ನಿಗಧಿಪಡಿಸಿದ ದಿನಾಂಕದಂದು ಖುದ್ದು ಚರ್ಚೆಗೆ ಬರಬೇಕು.
 • ಸೆಪ್ಟೆಂಬರ್ 12, 2017 ಕ್ಕೆ ಅನುದಾನದ ಪಟ್ಟಿಯನ್ನು ನಿರೀಕ್ಷಿಸಬಹುದು
 •  ಅರ್ಜಿ, ಪ್ರಸ್ತಾವನೆ ಅಥವಾ ಪ್ರಶ್ನೆಗಳನ್ನು krishna@indiaifa.org ಗೆ ಕಳುಹಿಸಲು ಕೋರಲಾಗಿದೆ

ಈ ಅನುದಾನಗಳ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‍ಗೆ ಭೇಟಿ ನೀಡಿ www.indiaifa.org

English summary
India Foundation for the Arts (IFA) invites project proposals for arts education from government school teachers in Karnataka, for their schools. This call for applications falls under the Kali-Kalisu initiative that aims to forge collaborations between teachers, local artists, and the school community.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia