ಭಾರತೀಯ ತೋಟಗಾರಿಕಾ ಸಂಸ್ಥೆ (ಐಐಎಚ್ಆರ್) ನೇಮಕಾತಿ

Posted By:

ಭಾರತೀಯ ತೋಟಗಾರಿಕಾ ಸಂಸ್ಥೆಯು (ಐಐಎಚ್ಆರ್) ವಿವಿಧ ಪ್ರಾಜೆಕ್ಟ್ಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾಗಿರುವ ಯಂಗ್ ಪ್ರೊಫೆಷನಲ್ಸ್ ಹಾಗೂ ಸೀನಿಯರ್ ಆಫೀಸ್ ಅಸಿಸ್ಟೆಂಟ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಈ ಸಂಸ್ಥೆಯು ಒಟ್ಟು 70 ಹುದ್ದೆಗಳನ್ನು ತಾತ್ಕಾಲಿಕ ಅವಧಿಗೆ ಭರ್ತಿ ಮಾಡಿಕೊಳ್ಳಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಜೂನ್ 8 ಹಾಗೂ 9ರಂದು ಸಂದರ್ಶನ ನಡೆಸಲಾಗುವುದೆಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ತೋಟಗಾರಿಕಾ ಸಂಸ್ಥೆ ನೇಮಕಾತಿ

ಹುದ್ದೆಗಳ ವಿವರ

ವಿವಿಧ ಪ್ರಾಜೆಕ್ಟ್ಗಳಿಗೆ ಸಂಬಂಧಪಟ್ಟಂತೆ ಯಂಗ್ ಪ್ರೊಫೆಷನಲ್ಸ್-1 ಮತ್ತು ಯಂಗ್ ಪ್ರೊಫೆಷನಲ್ಸ್-2 ಹುದ್ದೆಗಳಿಗೆ ನೇಮಕ ನಡೆಸಲಾಗುತ್ತದೆ.

ವಿದ್ಯಾರ್ಹತೆ

ಅಗ್ರಿಕಲ್ಚರ್, ಹಾರ್ಟಿಕಲ್ಚರ್, ಲೈಫ್ ಸೈನ್ಸ್, ಬಯೋ ಟೆಕ್ನಾಲಜಿ, ಮೈಕ್ರೋಬಯಾಲಜಿ, ಬಯಾಲಾಜಿಕಲ್ ಸೈನ್ಸ್, ಬಾಟನಿ, ಎಕನಾಮಿಕ್ಸ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ವಿಷಯಗಳಲ್ಲಿ ಬಿಎಸ್ಸಿ ಅಥವಾ ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ಓದಿರುವ ಅಭ್ಯರ್ಥಿಗಳನ್ನು ಯಂಗ್ ಪ್ರೊಫೆಷನಲ್ಸ್-1 ಹಾಗೂ ಸೀನಿಯರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತದೆ.

ಇದೇ ವಿಷಯಗಳಲ್ಲಿ ಎಂಎಸ್ಸಿ ಓದಿರುವ ಅಭ್ಯರ್ಥಿಗಳು ಯಂಗ್ ಪ್ರೊಫೆಷನಲ್-2 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪ್ಲಾಂಟ್ ಪೆಥಾಲಜಿ, ಬಯಾಲಾಜಿಕಲ್ ಸೈನ್ಸ್, ಸಾಯಿಲ್ ಸೈನ್ಸ್ ಅಥವಾ ಇಂಡಸ್ಟ್ರೀಯಲ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಓದಿದವರೂ ಯಂಗ್ ಪ್ರೊಫೆಷನಲ್ಸ್-2 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೂಚನೆ:  ಅಭ್ಯರ್ಥಿಗಳು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿದೆ.

ಸಂದರ್ಶನದ ದಿನಾಂಕ

  • ಯಂಗ್ ಪ್ರೊಫೆಷನಲ್ಸ್-1 ಮತ್ತು ಸೀನಿಯರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಜೂನ್ 8, 2017
  • ಯಂಗ್ ಪ್ರೊಫೆಷನಲ್ 2 ಹುದ್ದೆಗಳಿಗೆ ಜೂನ್ 9, 2017ರಂದು ಸಂದರ್ಶನ ನಡೆಯಲಿದೆ.

ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದ್ದು, ಯಾವುದೇ ಅಭ್ಯರ್ಥಿಗೆ ಪ್ರತ್ಯೇಕವಾಗಿ ಪ್ರವೇಶಪತ್ರವನ್ನು ಕಳುಹಿಸಲಾಗುವುದಿಲ್ಲ. ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 21 ವರ್ಷ ಹಾಗೂ ಗರಿಷ್ಠ ವಯೋಮಿತಿ 40 ವರ್ಷ.

ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 30, 2017

ಹೆಚ್ಚಿನ ವಿವರಗಳಿಗೆ: www.iihr.ernet.in

ಸಂದರ್ಶನ ನಡೆಯುವ ಸ್ಥಳ: ಐಐಎಚ್ಆರ್, ಹೆಸರಘಟ್ಟ ಕೆರೆ ಅಂಚೆ, ಬೆಂಗಳೂರು-89

English summary
Temporary posts which will be filled up through personal interview on 08.06.2017 & 09.06.2017 at IIHR, Bengaluru

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia