ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ ವಿವಿಧ 24 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ

ಧಾರವಾಡ ಐಐಟಿಯಲ್ಲಿ ವಿವಿಧ 24 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 11, 2019 ಕೊನೆಯ ದಿನವಾಗಿದೆ.

ಭಾರತೀಯ ತಂತ್ರಜ್ಞಾನ ಸಂಸ್ಥೆ ಧಾರವಾಡದಲ್ಲಿ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಐಐಟಿ ಧಾರವಾಡ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

 
Name Of The PostsNo. Of Vacancies
Deputy Registrar 2
Assistant Registrar 1
Assistant Sports Officer 3
Executive Engineer (Civil) 1
Assistant Executive Engineer (Civil) 1
Junior Engineer (Civil) 2
Junior Engineer (Electrical) 1
Junior Technical Superintendent 3
Junior Technical Superintendent 3
Junior Technical Superintendent 2
Junior Technical Superintendent 1
Junior Technical Superintendent 1
Library Officer 1
Junior Library Information Superintendent 2
Total 24

ಹುದ್ದೆಗಳ ವರ್ಗೀಕರಣ:

ಮೀಸಲಾತಿ20
ಓಬಿಸಿ3
SC1
ಒಟ್ಟು24

ವೇತನದ ವಿವರ:

ಹುದ್ದೆಗಳುವೇತನದ ಶ್ರೇಣಿ
ಡೆಪ್ಯೂಟಿ ರಿಜಿಸ್ಟಾರ್ರೂ 78,800/- ರಿಂದ 2,09,200/-ರೂ(12ನೇ ಹಂತ)
ಅಸಿಸ್ಟೆಂಟರ್ ರಿಜಿಸ್ಟ್ರಾರ್ರೂ 56,100/- ರಿಂದ 1,77,500/- ರೂ (10ನೇ ಹಂತ)
ಅಸಿಸ್ಟೆಂಟ್ ಸ್ಪೋರ್ಟ್ಸ್ ಆಫೀಸರ್ರೂ 35,400/- ರಿಂದ 1,12,400/-ರೂ ( 6ನೇ ಹಂತ)
ಎಕ್ಸಿಕ್ಯೂಟಿವ್ ಇಂಜಿನಿಯರ್(ಸಿವಿಲ್)ರೂ 67,700/- ರಿಂದ 2,08,700/- ರೂ (11ನೇ ಹಂತ)
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್)ರೂ 56,100/- ರಿಂದ 1,77,500/-ರೂ (1oನೇ ಹಂತ)
ಜ್ಯೂನಿಯರ್ ಇಂಜಿನಿಯರ್ (ಸಿವಿಲ್)& (ಇಲೆಕ್ಟ್ರಿಕಲ್),ಜ್ಯೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ರೂ 35,400/- ರಿಂದ 1,12,400/- ರೂ ( 6ನೇ ಹಂತ)
ಲೈಬ್ರರಿ ಆಫೀಸರ್ ರೂ 56,100/- ರಿಂದ 1,77,500/- ರೂ(10ನೇ ಹಂತ)
ಜ್ಯೂನಿಯರ್ ಲೈಬ್ರರಿ ಇನ್ಫರ್ಮೇಶನ್ ಸೂಪರಿಂಟೆಂಡೆಂಟ್ರೂ 35,400/- ರಿಂದ 1,12,400/- ರೂ (6ನೇ ಹಂತ)

ವಿದ್ಯಾರ್ಹತೆ ಮತ್ತು ವಯೋಮಿತಿಯ ವಿವರ:

ಡೆಪ್ಯೂಟಿ ರಿಜಿಸ್ಟ್ರಾರ್ ಹುದ್ದೆಗಳಿಗೆ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ ಈ ಹುದ್ದೆಗೆ ಸಂಬಂಧಪಟ್ಟಂತೆ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿ ಅನುಭವವಿರುವ 50 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಸಹ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

 

ಅಸಿಸ್ಟೆಂಟ್ ರಿಜಿಸ್ಟ್ರಾರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ ವಿಭಾಗದಲ್ಲಿ ಶೇ 55%ರಷ್ಟು ಅಂಗಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಥವಾ ಈ ಕ್ಷೇತ್ರದಲ್ಲಿ ಅನುಭವವಿರುವ 45 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅಸಿಸ್ಟೆಂಟ್ ಸ್ಟೋರ್ಟ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೈಹಿಕ ಶಿಕ್ಷಣದಲ್ಲಿ ಪದವಿಯೊಂದಿಗೆ ಶೇ 55%ರಷ್ಟು ಅಂಕಗಳನ್ನು ಪಡೆದಿರಬೇಕು. ಅಥವಾ UG ಅಥವಾ PG ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅನುಭವವಿರುವ 40 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ 55%ರಷ್ಟು ಅಂಕಗಳೊಂದಿಗೆ ಬಿ.ಟೆಕ್/ಬಿಇ ಅಥವಾ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು ಅಥವಾ ಈ ಕ್ಷೇತ್ರದಲ್ಲಿ ಅನುಭವವುಳ್ಳ

50 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ55%ರಷ್ಟು ಅಂಕಗಳೊಂದಿಗೆ ಬಿ.ಟೆಕ್/ ಬಿಇ ಅಥವಾ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು. ಅಥವಾ ಅನುಭವ ಇರುವ 45 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಬಿ.ಟೆಕ್/ಬಿಇ ಅಥವಾ ಸಿವಿಲ್ ಇಂಜಿನಿಯರಿಂಗ್ ಅನ್ನು ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪದವಿಯ ನಂತರ ಅನುಭವ ಪಡೆದ ಅಭ್ಯರ್ಥಿಗಳು ಅಥವಾ ಎಂ.ಟೆಕ್/ ಎಂ.ಇ ಪದವಿ ಪಡೆದ ಅಭ್ಯರ್ಥಿಗಳು ಅಥವಾ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಅನ್ನು ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದ ಅಥವಾ ಅನುಭವವುಳ್ಳ 40 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಇಂಜಿನಿಯರ್(ಇಲೆಕ್ಟ್ರಿಕಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಟೆಕ್/ಬಿಇ ಅಥವಾ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಶೇ 55%ರಷ್ಟು ಅಂಕಗಳನ್ನು ಪಡೆದಿರಬೇಕು. ಅಥವಾ ಎಂ.ಟೆಕ್/ಎಂ.ಇ ಮಾಡಿದ ಅಭ್ಯರ್ಥಿಗಳು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷದ ಡಿಪ್ಲೊಮ ಅನ್ನು ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅಥವಾ ಡಿಪ್ಲೊಮ ನಂತರ ಅನುಭವವುಳ್ಳ 40 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಬಿ.ಟೆಕ್/ಬಿಇ ಅಥವಾ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ 3ವ‍ರ್ಷದ ಡಿಪ್ಲೊಮ ಅನ್ನು ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಅನುಭವವುಳ್ಳ 40ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿ.ಟೆಕ್ /ಬಿಇ ಅನ್ನು ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಪದವಿಯ ನಂತರ ಅನುಭವವನ್ನು ಪಡೆದಿರಬೇಕು ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷದ ಡಿಪ್ಲೊಮ ಅನ್ನು ಶೇ55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಡಿಪ್ಲೊಮ ನಂತರ ಅನುಭವ ಹೊಂದಿರಬೇಕು ಅಥವಾ ಬಿ.ಟೆಕ್/ಬಿಇ ಅಲ್ಲದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಶೇ55 % ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು ಅಥವಾ ಪದವಿಯ ನಂತರ ಅನುಭವವಿರುವ 40 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಬಿಇ/ಬಿ.ಟೆಕ್ ಅಥವಾ ಅದಕ್ಕೆ ಸಮನಾದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಶೇ 55%ರಷ್ಟು ಅಂಕಗಳನ್ನು ಪಡೆದಿರಬೇಕು ಅಥವಾ ಪದವಿಯ ನಂತರ ಅನುಭವ ಹೊಂದಿರಬೇಕು ಅಥವಾ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ 3 ವರ್ಷದ ಡಿಪ್ಲೊಮ ಅನ್ನು ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಡಿಪ್ಲೊಮ ನಂತರ ಅನುಭವ ಪಡೆದಿರಬೇಕು

ಅಥವಾ ಬಿ.ಟೆಕ್/ಬಿಇ ಅಲ್ಲದೇ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಶೇ55 %ರಷ್ಟು ಅಂಕಗಳನ್ನು ಗಳಿಸಿರಬೇಕು ಅಥವಾ ಪದವಿ ನಂತರ ಅನುಭವವಿರುವ 40 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ M.Sc ಅಥವಾ ಅದಕ್ಕೆ ಸಮನಾದ ಪದವಿಯಲ್ಲಿ ರಸಾಯನ ಶಾಸ್ತ್ರದಲ್ಲಿ ಶೇ 55%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಪದವಿ ನಂತರ ಅನುಭವ ಹೊಂದಿರಬೇಕು.

ಅಥವಾ ರಸಾಯನ ಶಾಸ್ತ್ರದಲ್ಲಿ ಪದವಿಯನ್ನು ಶೇ55 %ರಷ್ಟು ಅಂಕಗಳೊಂದಿಗೆ ಪಡೆದಿರಬೇಕು ಅಥವಾ ಪದವಿ ನಂತರ ಅನುಭವವುಳ್ಳ 40ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ M.Sc ಅಥವಾ ಅದಕ್ಕೆ ಸಮನಾದ ಪದವಿಯನ್ನು ಭೌತಶಾಸ್ತ್ರದಲ್ಲಿ ಶೇ55%ರಷ್ಟು ಅಂಕಗಳೊಂದಿಗೆ ಪಡೆದಿರಬೇಕು ಅಥವಾ ಪದವಿಯ ನಂತರ ಅನುಭವ ಹೊಂದಿರುವ ಅಭ್ಯರ್ಥಿಗಳು ಅಥವಾ

ಭೌತಶಾಸ್ತ್ರದಲ್ಲಿ ಪದವಿಯನ್ನು ಶೇ 55%ರಷ್ಟು ಅಂಕಗಳೊಂದಿಗೆ ಪಡೆದಿರಬೇಕು ಅಥವಾ ಪದವಿ ನಂತರ ಅನುಭವ ಹೊಂದಿದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಲೈಬ್ರರಿ ಆಫೀಸರ್ ಹುದ್ದೆಗಳಿಗೆ ಲೈಬ್ರರಿ ಸೈನ್ಸ್/ಇನ್ಫರ್ಮೇಶನ್ ಸೈನ್ಸ್/ಡಾಕ್ಯುಮೆಂಟೇಶನ್ ಸೈನ್ಸ್ ಅಥವಾ ಅದಕ್ಕೆ ಸಮನಾದ

ಪ್ರೊಫೆಶನಲ್ ಡಿಗ್ರಿ ಅನ್ನು ಶೇ 55% ರಷ್ಟು ಅಂಕಗಳೊಂದಿಗೆ ಅಥವಾ ಪದವಿಯ ನಂತರ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳು ಲೈಬ್ರರಿ ಸಾಫ್ಟ್ ವೇರ್ ಮತ್ತು ಲೈಬರ್ ಕಂಪ್ಯೂಟರೈಸೇಶನ್ ನಲ್ಲಿ ಅನುಭವ ಹೊಂದಿರಬೇಕು.

ಈ ಹುದ್ದೆಗೆ ಸಂಬಂಧಿಸಿದಂತೆ Ph.D ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದಿದ್ದಲ್ಲಿ ಅವರ Ph.D ಯಲ್ಲಿನ 3 ವರ್ಷಗಳ ಅವಧಿಯು ಗಣನೆಗೆ ತೆಗೆದುಕೊಳ್ಳಲಾಗುವುದು ಹಾಗಾಗಿ ಅನುಭವವುಳ್ಳ 45 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಜ್ಯೂನಿಯರ್ ಲೈಬ್ರರಿ ಇನ್ಫರ್ಮೇಶನ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಬಿ.ಲಿಬ್ ಅಥವಾ ಬಿ.ಲಿಬ್.ಇನ್ಫರ್ಮೇಶನ್ ಸೈನ್ಸ್ ಅಥವಾ ಅದಕ್ಕೆ ಸಮನಾದ ಪದವಿಯನ್ನು ಶೇ 55%ರಷ್ಟು ಅಂಕಗಳೊಂದಿಗೆ ಪಡೆದಿರಬೇಕು ಅಥವಾ ಪದವಿ ನಂತರ ಲೈಬ್ರರಿ/ ಕಂಪ್ಯೂಟರೈಸೇಶನ್ ಆಫ್ ಲೈಬ್ರರಿಯಲ್ಲಿ ಅನುಭವವುಳ್ಳ ಅಥವಾ ಲೈಬ್ರರಿ/ ಇನ್ಫರ್ಮೇಶನ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಅದಕ್ಕೆ ಸಮನಾದ ಸ್ನಾತಕೋತ್ತರ ಪದವಿಯಲ್ಲಿನ ಅವಧಿಯನ್ನು ಅನುಭವ ಎಂದು ಪರಿಗಣಿಸಬಹುದು. ಅಂತಹ ೪೦ ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

SC ವರ್ಗದ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ

ಓಬಿಸಿ ಅಭ್ಯರ್ಥಿಗಳಿಗೆ 3ವರ್ಷಗಳ ವಯೋಮಿತಿ ಸಡಿಲಿಕೆ

ಆಯ್ಕೆ ವಿಧಾನ:

ಲಿಖಿತ ಪರೀಕ್ಷೆ/ ಕೌಶಲ್ಯ ಪರೀಕ್ಷೆ/ ಸಂದರ್ಶನ/ ಫಿಸಿಕಲ್ ಟೆಸ್ಟ್ ಹಾಗೂ ಇನ್ನಿತರೆ ಪರೀಕ್ಷೆಗಳನ್ನು ನೀಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಡೆಪ್ಯುಟೇಶನ್ ಅಥವಾ ಒಪ್ಪಂದದ ಮೇರೆಗೆ ನೇಮಕಾತಿಯನ್ನು ಮಾಡಲಾಗುತ್ತಿದ್ದು

ಅಭ್ಯರ್ಥಿಗಳು ಡೆಪ್ಯುಟೇಶನ್ ಮೇಲೆ ಸಲ್ಲಿಸುವುದಿದ್ದಲ್ಲಿ ಅದನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದಿದ್ದಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500/-ರೂ. ಶುಲ್ಕ ನಿಗದಿ ಮಾಡಲಾಗಿದೆ. ಎಸ್ ಸಿ/ ಎಸ್ ಟಿ/ ಪ್ರವರ್ಗ-1 / ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಬ್ಯಾಂಕ್ ವಿವರ:

Name of account Holder: Registrar, IIT Dharwad

Bank Name: State Bank of India

Branch: IIT POWAI (01109)

IFS Code: SBIN0001109

Account No: 00000035636327083

ಆನ್ ಲೈನ್ ಮೂಲಕ ಅರ್ಜಿಗಳನ್ನು ಜನವರಿ 11,2019ರೊಳಗೆ ಸಲ್ಲಿಸಬಹುದು.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಯ ಬಗೆಗೆ ಕಂಪ್ಲೀಟ್ ಮಾಹಿತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
IIT Dharwad has invited applications for 24 various posts. Interested candidates can apply for this job before january 11th 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X