ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರೊಲೊಜಿ ವಿವಿಧ ಹುದ್ದೆಗಳ ನೇಮಕಾತಿ

Posted By:

ಭಾರತೀಯ ಮುಂಗಾರು ಮತ್ತು ಹವಾಮಾನ ಬದಲಾವಣೆ ಕುರಿತು ಸಂಶೋಧನೆ ನಡೆಸುವ, ದೇಶದ ಪ್ರಮುಖ ಸಂಸ್ಥೆಯಾಗಿರುವ ಭೂವಿಜ್ಞಾನ ಸಚಿವಾಲಯದಡಿಯಲ್ಲಿ ಬರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮೆಟೊರೊಲಾಜಿಯಲ್ಲಿ (ಪುಣೆ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 79 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನು ಗಮನಿಸಿ: ಮಂಗಳೂರು ಒ ಎನ್ ಜಿ ಸಿ: 33 ಇಂಜಿನಿಯರ್ಗಳ ನೇಮಕಾತಿ

ಐಐಟಿಎಮ್ ವಿವಿಧ ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ

  • ಪ್ರಾಜೆಕ್ಟ್ ಸೈಂಟಿಸ್ಟ್‌ ಡಿ-10
  • ಪ್ರಾಜೆಕ್ಟ್ ಸೈಂಟಿಸ್ಟ್‌ ಸಿ-20
  • ಪ್ರಾಜೆಕ್ಟ್ ಸೈಂಟಿಸ್ಟ್‌ ಬಿ-26
  • ವಿಸಿಟಿಂಗ್‌ ಸೈಂಟಿಸ್ಟ್‌-1
  • ಜೂನಿಯರ್‌ ಸೈಂಟಿಫಿಕ್‌ ಅಸಿಸ್ಟೆಂಟ್‌-01
  • ಪ್ರಾಜೆಕ್ಟ್ ಮ್ಯಾನೇಜರ್‌-01
  • ಪ್ರಾಜೆಕ್ಟ್ ಅಸಿಸ್ಟೆಂಟ್‌-09
  • ಯುಡಿಸಿ-08
  • ಸೆಕ್ಷನ್‌ ಆಫೀಸರ್‌-02
  • ಕಂಪ್ಯೂಟರ್‌ ಅಪ್ಲಿಕೇಷನ್‌ ಸಪೋರ್ಟಿಂಗ್‌ ಸೈಂಟಿಸ್ಟ್‌-1 ಹುದ್ದೆ

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಇಂದಿನಿಂದ (ಅಕ್ಟೋಬರ್‌ 23, 2017) ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್‌ 19, 2017 ಕೊನೆಯ ದಿನಾಂಕವಾಗಿದೆ.

ಗರಿಷ್ಠ ವಯೋಮಿತಿ

ಸೈಂಟಿಸ್ಟ್‌ ಡಿ-50 ವರ್ಷ , ಸೈಂಟಿಸ್ಟ್‌ ಸಿ-40 ವರ್ಷ, ಸೈಂಟಿಸ್ಟ್‌ ಬಿ, ಸೆಕ್ಷನ್‌ ಆಫೀಸರ್‌-35 ವರ್ಷ, ವಿಸಿಟಿಂಗ್‌ ಸೈಂಟಿಸ್ಟ್‌-65 ವರ್ಷ, ಪ್ರಾಜೆಕ್ಟ್ ಅಸಿಸ್ಟೆಂಟ್‌, ಸೈಂಟಿಫಿಕ್‌ ಅಸಿಸ್ಟೆಂಟ್‌, ಪ್ರಾಜೆಕ್ಟ್ ಮ್ಯಾನೇಜರ್‌, ಸಪೋರ್ಟಿಂಗ್‌ ಸೈಂಟಿಸ್ಟ್‌ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ

ಸಂಬಂಧಪಟ್ಟ ವಿಷಯಗಳಲ್ಲಿ ಬಿಇ/ಬಿಟೆಕ್‌, ಎಂಇ/ಎಂಟೆಕ್‌, ಎಂಎಸ್ಸಿ, ಸ್ನಾತಕೋತ್ತರ ಪದವಿ ಇತ್ಯಾದಿ ವಿದ್ಯಾರ್ಹತೆ ಬಯಸಲಾಗಿದೆ. ಕೆಲವು ಹುದ್ದೆಗಳಿಗೆ ಆಯಾ ವಿಭಾಗಗಳಲ್ಲಿ ಸಂಶೋಧನಾ ಅನುಭವ ಬಯಸಲಾಗಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-10-2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-11-2017

ಹೆಚ್ಚಿನ ಮಾಹಿತಿಗೆ ವೆಬ್‌ ವಿಳಾಸ: www.tropmet.res.in ಗಮನಿಸಿ

English summary
Indian Institute of Tropical Meteorology (IITM) invites online applications from eligible candidates for various posts. These posts are purely on contract basis of one year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia