ಬೆಂಗಳೂರಿನ ಅಂಚೆ ಇಲಾಖೆಯಲ್ಲಿ ನೇಮಕಾತಿ

Posted By:

ಸಂವಹನ ಸಚಿವಾಲಯ ಮತ್ತು ಅಂಚೆ ಇಲಾಖೆಯಡಿ ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ 04 ಮೋಟಾರ್ ವೆಹಿಕಲ್ ಮೆಕ್ಯಾನಿಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ನಗದಿತ ನಮೂನೆಯಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಅಕ್ಟೋಬರ್ 14 ರೊಳಗೆ ಸಲ್ಲಿಸಲು ಕೋರಲಾಗಿದೆ.

ಅಂಚೆ ಇಲಾಖೆಯಲ್ಲಿ ನೇಮಕಾತಿ

ವಿದ್ಯಾರ್ಹತೆ

ಮಾನ್ಯತೆ ಪಡೆದ ಟೆಕ್ನಿಕಲ್ ಸಂಸ್ಥೆಯಿಂದ ಡೀಸೆಲ್ ಮೆಕ್ಯಾನಿಸಂ ವಿಷಯದಲ್ಲಿ ವಿದ್ಯಾರ್ಹತೆ ಹೊಂದಿರಬೇಕು ಅಥವಾ ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿ ಸಂಬಂಧಪಟ್ಟಂತೆ ಒಂದು ವರ್ಷದ ಅನುಭವವನ್ನು ಪಡೆದುಕೊಂಡಿರಬೇಕು ಜೊತೆಗೆ ವಾಹನ ಚಾಲನಾ ಪ್ರಮಾಣ ಪತ್ರ ಹೊಂದಿರಬೇಕು.

ವೇತನ ಶ್ರೇಣಿ-ರೂ.5200-20200+1900+ಇತರೆ ಸೌಲಭ್ಯಗಳು

ವಯೋಮಿತಿ

01-07-2017 ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ (ವೀಸಲಾತಿಗೆ ಒಳಪಡುವವರಿಗೆ ನಿಯಮಾನುಸಾರ ಸಡಿಲಿಕೆ ಇರುತ್ತದೆ)

ನೇಮಕಾತಿ ವಿಧಾನ

ಅರ್ಜಿಗಳನ್ನು ಪರಿಶೀಲಿಸಿ ಟ್ರೇಡ್ ಟೆಸ್ಟ್ ಗೆ ಶಾರ್ಟ್ ಲಿಸ್ಟ್ ಅನ್ನು ಪ್ರಕಟಿಸಲಾಗುವುದು.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.200/-
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಅನ್ವಯಿಸುವುದಿಲ್ಲ

ಐಪಿಒ ಅನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು

ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳು ನಂತರದ ಹಂತದಲ್ಲಿ ಪರೀಕ್ಷಾ ಶುಲ್ಕ ರೂ.500/- ಅನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ನಮೂನೆಯನ್ನು ಇಂಡಿಯನ್ ಪೋಸ್ಟ್ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸತಕ್ಕದ್ದು.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು

ವಯೋಮಿತಿಯನ್ನು ನಮೂದಿಸುವ ಪ್ರಮಾಣ ಪತ್ರ, ವಿದ್ಯಾರ್ಹತೆ, ಡ್ರೈವಿಂಗ್ ಲೈಸೆನ್ಸ್, ಜಾತಿ ಪ್ರಮಾಣ ಪತ್ರದ ಪ್ರತಿ, ಅನುಭವ ಪ್ರಮಾಣ ಪತ್ರದ ಪ್ರತಿ.

ಕಚೇರಿ ವಿಳಾಸ

ವ್ಯವಸ್ಥಾಪಕರು
ಮೇಲ್ ಮೋಟಾರ್ ಸರ್ವಿಸ್
ನಂ.4, ಬಸವೇಶ್ವರ ರಸ್ತೆ
ಬೆಂಗಳೂರು-560001

ಅರ್ಜಿ ಲಕೋಟೆ ಮೇಲೆ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ದಪ್ಪಾಕ್ಷರದಲ್ಲಿ ನಮೂದಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-10-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
India Post Applications ore invited for The following posts of SKILLED ARTISANS Grade -lll MOTOR VEHICLE MECHANICS from the eligible candidates.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia