ಭಾರತೀಯ ವಾಯುಪಡೆ: ಕ್ರೀಡಾ ಕೋಟಾದ ಮೇಲೆ ಏರ್ಮನ್ ನೇಮಕಾತಿ

Posted By:

ಭಾರತೀಯ ವಾಯುಪಡೆಯಲ್ಲಿ ಕ್ರೀಡಾ ಕೋಟದಡಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭಾರತೀಯ ವಾಯುಪಡೆಯ ಗ್ರೂಪ್-ವೈ ಏರ್ ಮನ್ ಹುದ್ದೆಗಳನ್ನು ಭರ್ತಿ ಮಾಡಲು ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದ್ದು, ಜುಲೈ 10 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ

ಸುಮಾರು 15ಕ್ಕೂ ಹೆಚ್ಚು ವಿವಿಧ ಕ್ರೀಡೆಗಳನ್ನು ಪರಿಗಣಿಸಲಾಗುತ್ತಿದ್ದು, ಅಭ್ಯರ್ಥಿಗಳು ಕ್ರೀಡಾ ಅರ್ಹತೆಯೊಂದಿಗೆ ಕೇಂದ್ರ/ರಾಜ್ಯ ಶಿಕ್ಷಣ ಮಂಡಳಿಯಿಂದ ಅಂಗೀಕಾರಗೊಂಡ ಯಾವುದೇ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವುದು ಅತ್ಯವಶ್ಯ.

ಭಾರತೀಯ ವಾಯುಪಡೆ ನೇಮಕಾತಿ

ವಯೋಮಿತಿ

ಅಭ್ಯರ್ಥಿಗಳ ವಯೋಮಿತಿ 16ರಿಂದ 25 ವರ್ಷ ನಿಗದಿಪಡಿಸಲಾಗಿದೆ ಅಂದರೆ 1996ರ ಡಿಸೆಂಬರ್ 28 ಮತ್ತು 2000ದ ಡಿಸೆಂಬರ್ 27ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ದೈಹಿಕ ಅರ್ಹತೆ: ಅಭ್ಯರ್ಥಿಗಳು 152.5 ಸೆಂ.ಮೀ ಎತ್ತರ ಹಾಗೂ ಕನಿಷ್ಠ ಐದು ಸೆಂ.ಮೀ. ಎದೆಯ ಸುತ್ತಳತೆ ಹೊಂದಿರಬೇಕು.

ಕ್ರೀಡಾ ಅರ್ಹತೆ
ಅಥ್ಲೆಟಿಕ್ಸ್, ಕ್ರಾಸ್ ಕಂಟ್ರಿ, ಫುಟ್ಬಾಲ್, ಹ್ಯಾಂಡ್ ಬಾಲ್, ಶೂಟಿಂಗ್, ವಾಟರ್ ಪೋಲೋ, ಗಾಲ್ಫ್, ಬ್ಯಾಸ್ಕೆಟ್ ಬಾಲ್, ಕ್ರಿಕೆಟ್, ಜಿಮ್ನಾಸ್ಟಿಕ್, ಕಬಡ್ಡಿ, ಸ್ವಿಮ್ಮಿಂಗ್, ವ್ರೆಸ್ಟ್ಲಿಂಗ್, ಬಾಕ್ಸಿಂಗ್, ಸೈಕ್ಲಿಂಗ್, ಹಾಕಿ, ಲಾ ಟೆನ್ನಿಸ್, ವಾಲಿಬಾಲ್ ಮತ್ತು ವೇಟ್ ಲಿಫ್ಟಿಂಗ್ ಗಳಲ್ಲಿ ಕೆಳಕಂಡ ಸಾಧನೆ ಮಾಡಿರಬೇಕು.

  • ಆಯಾ ಕ್ರೀಡೆಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಜೂನಿಯರ್/ಸೀನಿಯರ್ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು.
  • ರಾಷ್ಟ್ರೀಯ ಅಥವಾ ಅಂತರ್ ವಿವಿ ಚಾಂಪಿಯನ್ ಶಿಪ್ ನ ಜೂನಿಯರ್/ಸೀನಿಯರ್ ವಿಭಾಗಗಳಲ್ಲಿ ಕನಿಷ್ಠ ಐದನೇ ಸ್ಥಾನ ಪಡೆದಿರಬೇಕು.
  • ಗುಂಪು ಸ್ಪರ್ಧೆಗಳಲ್ಲಿ ಅಭ್ಯರ್ಥಿಗಳು ಜೂನಿಯರ್/ಸೀನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ನಡೆಯುವ ನ್ಯಾಷನಲ್ ಸ್ಕೂಲ್ ಟೂರ್ನಮೆಂಟ್ ಗಳನ್ನು ಪ್ರತಿನಿಧಿಸಿರಬೇಕು.

ಅರ್ಜಿ ಸಲ್ಲಿಕೆ

ಅರ್ಜಿ ನಮೂನೆಗಳು ವಾಯುಪಡೆಯ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಂಡು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಕಛೇರಿಯ ವಿಳಾಸಕ್ಕೆ ತಲುಪಿಸತಕ್ಕದ್ದು.

ಕಳುಹಿಸಬೇಕಾದ ವಿಳಾಸ

Secretary, Air
Force Control Board, C/O
Air Force Station New Delhi,
Race Course, New Delhi 110003

ಹೆಚ್ಚಿನ ಮಾಹಿತಿಗಾಗಿ indianairforce.nic.in ಗಮನಿಸಿ

English summary
ndian Air Force Recruitment 2017 – Airmen Posts: Indian Air Force has announced a notification for the direct recruitment of Airmen vacancies in Unmarried Outstanding Sportsman in Group Y Trades.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia