ಇಂಡಿಯನ್ ಬ್ಯಾಂಕ್: 64 ಹುದ್ದೆಗಳ ನೇಮಕಾತಿ

Posted By:

ಇಂಡಿಯನ್ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಕಮ್ ಪ್ಯೂನ್(peon) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನೇಮಕಾತಿ ಪ್ರಕಟಣೆಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಎಚ್ ಎ ಎಲ್ : ಎಸ್ ಎಸ್ ಎಲ್ ಸಿ ಆದವರಿಗೆ ಅಪ್ರೆಂಟಿಸ್

ಒಟ್ಟು 64 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಡಿಸೆಂಬರ್ 30,2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆರ್ಮಿ ಸ್ಕೂಲ್‌: 8000 ಬೋಧಕ ಹುದ್ದೆಗಳ ನೇಮಕಾತಿ

ಇಂಡಿಯನ್ ಬ್ಯಾಂಕ್ ನೇಮಕಾತಿ

ಹುದ್ದೆಯ ವಿವರ

ಹುದ್ದೆ ಹೆಸರು: ಸೆಕ್ಯುರಿಟಿ ಗಾರ್ಡ್ ಕಮ್ ಪ್ಯೂನ್
ಒಟ್ಟು ಹುದ್ದೆಗಳು: 64
ಎಲ್ಲಿ ಉದ್ಯೋಗ: ಭಾರತದೆಲ್ಲೆಡೆ
ಕೊನೆ ದಿನಾಂಕ: ಡಿಸೆಂಬರ್ 30, 2017

ಸಂಬಳ ವಿವರ: ರೂ.9,560-18,545/-

ವಯೋಮಿತಿ

  • ಗರಿಷ್ಟ ವಯೋಮಿತಿ: ಸಾಮಾನ್ಯ ವರ್ಗ :26ವರ್ಷ
  • ಪ್ರವರ್ಗ-2 ಎ, 2 ಬಿ, 3 ಎ, 3 ಬಿ: 26+3ವರ್ಷ
  • ಪ.ಜಾ/ಪ.ಪಂ/ ಪ್ರವರ್ಗ-1: 26+5 ವರ್ಷ.

ಮಾಜಿ ಯೋಧರಿಗೆ 45 ವರ್ಷದವರೆಗೂ ಸಡಿಲಿಕೆ ಇರಲಿದೆ.

ವಿದ್ಯಾರ್ಹತೆ

10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್.

ಮಾಜಿ ಯೋಧರು ಭಾರತೀಯ ಆರ್ಮಿ/ನೇವಿ/ ಏರ್ ಪೋರ್ಸ್ ಸಿಬ್ಬಂದಿಗೆ ಆದ್ಯತೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ಅರ್ಜಿಯನ್ನು ಇಂಡಿಯನ್ ಬ್ಯಾಂಕ್ ವೆಬ್ ಸೈಟಿನಿಂದ ಡೌನ್ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ರಿಜಿಸ್ಟ್ರಡ್/ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನ ವ್ಯವಸ್ಥಾಪಕರು, ಎಚ್ಆರ್ ಎಂ ವಿಭಾಗಕ್ಕೆ ಕಳಿಸತಕ್ಕದ್ದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

  • ಪಾನ್ ಕಾರ್ಡ್ ಪ್ರತಿ
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ (ಜನ್ಮ ದಿನಾಂಕಕ್ಕಾಗಿ)
  • ಶೈಕ್ಷಣಿಕ ದಾಖಲೆಗಳು
  • ಜಾತಿ ಪ್ರಮಾಣ ಪತ್ರ (ಎಸ್.ಸಿ/ಎಸ್.ಟಿ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ)

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ (ಬೆಂಗಳೂರು ಕೇಂದ್ರ)

INDIAN BANK, ZONAL OFFICE
BANGALORE,
4TH FLOOR, EAST WING,
26/27, RAHEJA TOWERS,
M G ROAD,
BANGALORE 560001

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Indian Bank invites applications from Ex-servicemen for filling up of following vacancies across different states for the post of Security guard cum Peon in Subordinate cadre.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia