ದಿನಕ್ಕೆ ಒಂಬತ್ತು ಗಂಟೆ ನಿದ್ರೆ ಮಾಡಿ...ನೂರು ದಿನಕ್ಕೆ ಒಂದು ಲಕ್ಷ ರೂ ವೇತನ ಪಡೆಯಿರಿ

ನಿದ್ದೆ ಅಂದ್ರೆ ಯಾರಿಗ್ ಇಷ್ಟ ಆಗಲ್ಲ ಹೇಳಿ. ಸದಾ ನಿದ್ದೆ ಮಾಡೋ ಕಾಯಕ ಮಾಡಿ ಅಂದ್ರೆ ನಾ ಮುಂದು ತಾ ಮುಂದು ಅಂತ ಎಲ್ಲರೂ ಸಿದ್ಧ. ಈ ನಿದ್ದೆನೇ ನಿಮ್ ಕಾಯಕ ಆದ್ರೆ ಎಷ್ಟು ಚೆನ್ನಾಗಿ ಇರತ್ತೆ ಅಲ್ವಾ!. ನಿದ್ದೆಯನ್ನು ಕಾಯಕ ಆಗಿ ಮಾಡ್ಕೊಬಹುದಾ? ಅದಕ್ಕೂ ಸಂಬಳ ಸಿಗುತ್ತಾ? ಅನ್ನೋದಕ್ಕೆ ಇಲ್ಲಿದೆ ಉತ್ತರ.

ಭಾರತದ ಸ್ಟಾರ್ಟ್-ಅಪ್ ಕಂಪೆನಿಯೊಂದು ನಿದ್ರಾ ಪ್ರಿಯರಿಗೆ ಇಂಟರ್ನ್‌ಶಿಪ್ ಒದಗಿಸಲು ಮತ್ತು 1 ಲಕ್ಷ ರೂಗಳ ವೇತನ ನೀಡಲು ಮುಂದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ದಿನಕ್ಕೆ 9 ಗಂಟೆ ನಿದ್ದೆ ಮಾಡಿದ್ರೆ ಒಂದು ಲಕ್ಷ ವೇತನ ಪಡೆಯುವ ಅವಕಾಶ

ಸ್ಲೀಪ್ ಸಲ್ಯೂಷನ್ಸ್ ಸ್ಟಾರ್ಟ್-ಅಪ್ ವೇಕ್ ಫಿಟ್ ಸಂಸ್ಥೆಯು "ಸ್ಲೀಪ್ ಇಂಟರ್ನ್‌ಶಿಪ್ 2020"ರ ಬ್ಯಾಚ್‌ಗಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಆಫರ್ ಬಗೆಗೆ ಪೋಸ್ಟ್ ಮಾಡಿದೆ. ಈ ಇಂಟರ್ನ್‌ಶಿಪ್ ಗೆ ಸೇರ ಬಯಸುವ ಅಭ್ಯರ್ಥಿಗಳು ನಿದ್ದೆ ಮಾಡಲು ಇಚ್ಛೆ ಉಳ್ಳವರಾಗಿರಬೇಕು ಮತ್ತು ಅತೀ ಕಡಿಮೆ ಅವಧಿಯಲ್ಲಿ ನಿದ್ರೆಗೆ ಜಾರುವ ಸಾಮರ್ಥ್ಯವನ್ನು ಹೊಂದಿರಬೇಕು. ಅಷ್ಟೇ ಅಲ್ಲದೆ ಈ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳು ಪೈಜಾಮ ವಸ್ತ್ರವನ್ನು ಧರಿಸಬೇಕಿರುತ್ತದೆ.

ಈ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಅಭ್ಯರ್ಥಿಗಳು ಪ್ರತಿ ರಾತ್ರಿ ಒಂಬತ್ತು ಗಂಟೆ ಅವಧಿ ನಿದ್ದೆ ಮಾಡಬೇಕಿರುತ್ತದೆ. ಒಟ್ಟಾರೆ ನೂರು ದಿನಗಳ ಕಾಲ ಹೀಗೆ ಮಾಡಿದರೆ ಸಾಕು 1 ಲಕ್ಷ ರೂಗಳ ಸ್ಟೈಫೆಂಡ್ ಅನ್ನು ಪಡೆಯಬಹುದು.

ಯಾಕೆ ಈ ರೀತಿಯ ಉದ್ಯೋಗ ಸೃಷ್ಟಿಸುತ್ತಿದೆ ಎಂದರೆ ಅಭ್ಯರ್ಥಿಗಳು ಸಂಸ್ಥೆಯ ಮ್ಯಾಟ್ರೆಸ್ ಬಳಸಿ ನಿದ್ದೆ ಮಾಡುವ ರೀತಿಯನ್ನು ಅಧ್ಯಯನ ಮಾಡುವ ಉದ್ದೇಶವನ್ನು ಒಳಗೊಂಡಿರುತ್ತದೆ ಹಾಗಾಗಿ ಸಂಸ್ಥೆಯು ಅಭ್ಯರ್ಥಿಯ ನಿದ್ರಾ ಶೈಲಿ ಬಗ್ಗೆ ತಿಳಿಯಲು ಸ್ಲೀಪ್ ಟ್ರಾಕರ್ ಒದಗಿಸಲಿದೆಯಂತೆ.

For Quick Alerts
ALLOW NOTIFICATIONS  
For Daily Alerts

English summary
Indian start up company offers sleep internship and providing 1 lakh salary to employee.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X