ಭಾರತೀಯ ನೌಕಾಪಡೆಯಲ್ಲಿ ಆಫೀಸರ್ ಕೋರ್ಸ್ ಗೆ ಅರ್ಜಿ ಆಹ್ವಾನ

Posted By:

ಭಾರತೀಯ ನೌಕಾಪಡೆಯು 2018 ರ ಜುಲೈನಿಂದ ಆರಂಭವಾಲಿರುವ ಆಫೀಸರ್ ಕೋರ್ಸಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಶಾರ್ಟ್ ಸರ್ವೀಸ್ ಕಮಿಷನ್ ಅಡಿಯಲ್ಲಿ ಎಜುಕೇಷನ್ ಬ್ರಾಂಚ್ ಗೂ ಮತ್ತು ಪರ್ಮನೆಂಟ್ ಕಮಿಷನ್ ಅಡಿಯಲ್ಲಿ ಎಕ್ಸಿಕ್ಯುಟಿವ್ ಬ್ರಾಂಚ್ ಗೂ (ಲಾಜಿಸ್ಟಿಕ್, ಲಾ ಮತ್ತು ಐಟಿ) ಆಫೀಸರ್ ಗಳನ್ನು ನೇಮಕ ಮಾಡಿಕೊಳ್ಳಲು ಈ ಕೋರ್ಸ್ ನಡೆಸಲಾಗುತ್ತದೆ.

ಆರೋಗ್ಯ ಕುಟುಂಬ ಕಲ್ಯಾಣ ಮತ್ತು ಆಯುಷ್ ಸೇವೆಗಳ ಆಯುಕ್ತಾಲಯದಲ್ಲಿ ನೇಮಕಾತಿ

ಐಟಿ ಮತ್ತು ಎಜುಕೇಷನ್ ವಿಭಾಗಕ್ಕೆ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ನೌಕಾಪಡೆಯಲ್ಲಿ ಆಫೀಸರ್ಸ್ ನೇಮಕಾತಿ

ಅರ್ಹತೆಗಳು

ಎಜುಕೇಷನ್ ವಿಭಾಗದಲ್ಲಿ ಆಫೀಸರ್ ಕೋರ್ಸಿಗೆ ಅರ್ಜಿ ಸಲ್ಲಿಸುವವರು ಎಂ.ಎಸ್ಸಿ (ಫಿಸಿಕ್ಸ್/ನ್ಯುಕ್ಲಿಯರ್ ಫಿಸಿಕ್ಸ್/ಮ್ಯಾಥ್ಸ್/ಆಪರೇಷನಲ್ ರಿಸರ್ಚ್) ಎಂ.ಎ (ಇಂಗ್ಲಿಷ್/ಇತಿಹಾಸ) ಅಥವಾ ಬಿ.ಇ/ಬಿ.ಟೆಕ್ (ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್/ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ ಟ್ರುಮೆಂಟೇಷನ್/ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ವಿದ್ಯಾರ್ಹತೆ ಹೊಂದಿರಬೇಕು.

ಆರ್ಕಿಟೆಕ್ಚರ್ ನಲ್ಲಿ ಪದವಿ, ಎಂಬಿಎ, ಬಿಎಸ್ಸಿ (ಐಟಿ), ಬಿಕಾಂ, ಎಂಸಿಎ ಅಥವಾ ಎಂಎಸ್ಸಿ (ಐಟಿ) ವಿದ್ಯಾರ್ಹತೆ ಹೊಂದಿರುವವರು ಲಾಜಿಸ್ಟಿಕ್ ವಿಭಾಗದ ಆಫೀಸರ್ ಕೋರ್ಸಿಗೆ ಅರ್ಜಿ ಸಲ್ಲಿಸಬಹುದು.

ಐಟಿ ವಿಭಾಗದಲ್ಲಿನ ಆಫೀಸರ್ ಕೋರ್ಸಿಗೆ ಅರ್ಜಿ ಸಲ್ಲಿಸುವವರು ಬಿ.ಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್/ಕಂಪ್ಯೂಟರ್ ಇಂಜಿನಿಯರಿಂಗ್ ಐಟಿ) ಎಂ.ಎಸ್ಸಿ (ಕಂಪ್ಯೂಟರ್/ಐಟಿ), ಬಿಎಸ್ಸಿ (ಐಟಿ)/ಬಿಸಿಎ/ಎಂಸಿಎ ವಿದ್ಯಾರ್ಹತೆ ಹೊಂದಿರಬೇಕು.

ಕಾನೂನು ವಿಭಾಗದಲ್ಲಿ ಪದವಿ ಮುಗಿಸಿದವರು ಲಾ ವಿಭಾಗದ ಆಫೀಸರ್ ಕೋರ್ಸಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. (ಕಾನೂನು ವಿಭಾಗದಲ್ಲಿ ಮಾತ್ರ ಶೇ.55 ಅಂಕಗಳನ್ನು ಹೊಂದಿರಬೇಕು)

ಅರ್ಜಿ ಸಲ್ಲಿಸಬೇಕಾದವರು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ. 60 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.

ಸೈನಿಕ ಶಾಲೆ ಕೊಡಗು: 6 ಮತ್ತು 9 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ನೇಮಕಾತಿ ವಿಧಾನ

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಆಯ್ದ ಅಭ್ಯರ್ಥಿಗಳಿಗೆ ಎಸ್ ಎಸ್ ಬಿ ಸಂದರ್ಶನಕ್ಕೆ ಆಹ್ವಾನಿತ್ತದೆ. 2017 ರ ಡಿಸೆಂಬರ್ ನಿಂದ 2018 ರ ಮಾರ್ಚ್ ವರೆಗೂ ವಿವಿಧ ಹಂತಗಳಲ್ಲಿ ಬೆಂಗಳೂರು, ಭೂಪಾಲ್, ವಿಶಾಖಪಟ್ಟಣ ಮತ್ತು ಕೊಯ್ಮತ್ತೂರಿನಲ್ಲಿ ಎಸ್ಎಸ್ ಬಿ ನೇಮಕ ಪ್ರಕ್ರಿಯೆಗಳು ನಡೆಯಲಿವೆ. ಇದರಲ್ಲಿ ತೇರ್ಗಡೆಯಾದವರು ಮಾತ್ರ 2018 ರ ಜುಲೈನಿಂದ ಕೇರಳದ ನೇವಲ್ ಅಕಾಡೆಮಿಯಲ್ಲಿ ಆರಂಭವಾಗಲಿರುವ ಕೋರ್ಸ್ ಪಡೆಯಲು ಅರ್ಹರಾಗಿರುತ್ತಾರೆ.

ಈ ತರಬೇತಿಯು 22 ವಾರಗಳದ್ದಾಗಿದ್ದು, ತರಬೇತಿ ಮುಗಿದ ನಂತರ ನೌಕಾಪಡೆಯ ವಿವಿಧ ವಿಭಾಗಗಳಿಗೆ ಆಫೀಸರ್ ಗಳಾಗಿ ನೇಮಕಗೊಳ್ಳಲಿದ್ದಾರೆ.

ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ www.joinindiannavy.gov.in ಗಮನಿಸಿ

English summary
Indian navy invites applications from eligible candidates for the post of officers under short service commission and permanent commission.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia